ಸತತ ಮಳೆ: ಬೆಳೆದ ಕಳೆ
ಲಕ್ಷೆ÷್ಮÃಶ್ವರ,ಆ.೫: ತಾಲೂಕಿನಾದ್ಯಂತ ಸತತವಾಗಿ ಸುರಿಯುತ್ತಿರುವ ತುಂತುರು ಮಳೆಯಿಂದಾಗಿ ಬಹುತೇಕ ಎಲ್ಲಾ ಬೆಳೆಗಳ ಮೇಲು ಪರಿಣಾಮ ಬೀರುತ್ತಿದ್ದು ಈಗಾಗಲೇ ಕೆಲವು ಭಾಗದಲ್ಲಿ ಫಸಲು ಹಾಳಾಗುತ್ತಿದ್ದು ಬಿತ್ತಿರುವ ಶೇಂಗಾ ಈರುಳ್ಳಿ ಬಳ್ಳೊಳ್ಳಿ ಬೆಳೆಗಳಲ್ಲಿ ಬೆಳೆಗಿಂತಲೂ ಹೆಚ್ಚಾಗಿ ಕಳೆ ಬೆಳೆದಿದ್ದು ರೈತರು ಮಳೆಯ ಚೆಲ್ಲಾಟಕ್ಕೆ ಹೈರಾಣವಾಗಿದ್ದಾರೆ.
ಈಗ ಸಾಲದ್ದಕ್ಕೆ ಶೇಂಗಾ ಬೆಳೆಯಲ್ಲಿ ಸತತ ಮಳೆಯಿಂದಾಗಿ ಸುರಳಿ ಪೂಚಿ ರೋಗ ಕಾಣಿಸಿಕೊಂಡಿದ್ದರೆ ಜೊತೆಗೆ ಕೀಟಬಾಧಯು ಜೋರಾಗಿದೆ ಕ್ರಿಮಿನಾಶಕ ಸಿಂಪಡಿಸಲು ರೈತರು ಸಿದ್ಧತೆ ಮಾಡುತ್ತಿರುವಂತೆಯೇ ಜೋರಾಗಿ ಸುರಿಯುವ ಮಳೆಯಿಂದಾಗಿ ಕೀಟಗಳಿಗೆ ಬಾಧಿಸುವುದಿಲ್ಲ ಎಂಬ ಕಾರಣಕ್ಕೆ ಕ್ರಿಮಿನಾಶಕ ಸಿಂಪಡಣೆಗೂ ಹಿಂದೇಟು ಹಾಕುತ್ತಿದ್ದಾರೆ.
ಇನ್ನು ಹತ್ತಿ ಶೇಂಗಾ ಈರುಳ್ಳಿ ಮತ್ತು ಬೆಳ್ಳುಳ್ಳಿ ಜಮೀನುಗಳಲ್ಲಿ ವಿಪರೀತವಾಗಿ ಹುಲ್ಲು ಬೆಳ್ಗೆದ್ದು ರೈತರು ಬೆಳೆದಿರುವ ಹುಲ್ಲನ್ನು ತೆಗೆಸಲು ಮಳೆ ಅಡ್ಡಿಯಾಗಿದೆ.
ಈ ಕುರಿತು ಗೊಜನೂರು ಗ್ರಾಮದ ರೈತ ಮುಖಂಡ ಚೆನ್ನಪ್ಪ ಷಣ್ಮುಕಿಯವರು ಪ್ರತಿಕ್ರಿಯೆ ನೀಡಿ ಕಳೆದು ಒಂದು ತಿಂಗಳನಿAದ ಈ ಹನಕಲು ಮಳೆ ಬೆಳೆಗಳಿಗೆ ಅನುಕೂಲವಾಗಿದ್ದರು ಸತತವಾಗಿ ಸುರಿಯುತ್ತಿರುವುದರಿಂದ ಕಳೆಯು ಹೆಚ್ಚಾಗಿ ರೈತರು ಜಮೀನುಗಳಿಗೆ ಹೋಗದಂತೆ ಮಾಡಿದೆ ಇದರಿಂದಾಗಿ ಬೆಳೆ ಮತ್ತು ಕಳೆ ಏಕಾಕಾರವಾಗಿ ಎಲ್ಲಿ ಬೆಳೆಗಳು ಹಾಳಾಗುತ್ತವೆಯೋ ಎಂಬ ಭೀತಿ ಉಂಟಾಗಿದೆ ಎಂದರು.