ಇಂದಿನಿAದ ಶ್ರಾವಣ ಸಂಜೆ ಕಾರ್ಯಕ್ರಮ
ಲಕ್ಷೆ÷್ಮÃಶ್ವರ,ಆ.೫: ಪಟ್ಟಣದ ಶ್ರೀ ಅಕ್ಕಮಹಾದೇವಿ ದೇವಸ್ಥಾನದಲ್ಲಿ ಸೋಮವಾರದಿಂದ ಒಂದು ತಿಂಗಳ ಕಾಲ ಶರಣರ ಮೌಲ್ಯಾಧಾರಿತ ಚಿಂತನೆಗಳು ಎಂಬ ಶಿರೋನಾಮೆಯಡಿ ಶ್ರಾವಣ ಸಂಜೆ ಕಾರ್ಯಕ್ರಮಗಳು ಸಪ್ಟಂಬರ್ ೩ರವರೆಗೆ ಪ್ರತಿನಿತ್ಯ ಸಾಯಂಕಾಲ ೬:೦೦ಗೆ ಜರುಗಲಿದೆ ಎಂದು ಲಕ್ಷೆ÷್ಮÃಶ್ವರ ತಾಲೂಕ ಕದಳಿ ಮಹಿಳಾ ವೇದಿಕೆಯ ಅಧ್ಯಕ್ಷ ನಿರ್ಮಲಾ ಅರಳಿ ಹೇಳಿದರು.
ಅವರು ಅಕ್ಕಮಹಾದೇವಿ ದೇವಸ್ಥಾನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿ ಸೋಮವಾರ ಸಂಜೆ ಕಾರ್ಯಕ್ರಮವನ್ನು ಶ್ರೇಷ್ಠ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿಗಳಾದ ನಾಗರಾಜ್ ಅರಳಿ ಅವರು ಉದ್ಘಾಟಿಸಲಿದ್ದು ಅಧ್ಯಕ್ಷತೆಯನ್ನು ಮಾಜಿ ಶಾಸಕ ಜಿಎಸ್ ಗಡ್ಡದೇವರ ಮಠ ಅವರು ವಹಿಸಲಿದ್ದು, ಸಾನಿಧ್ಯವನ್ನು ಹೂವಿನ ಶಿಗ್ಲಿ ವಿರಕ್ತಮಠದ ಚನ್ನವೀರ ಶ್ರೀಗಳು ವಹಿಸಲಿದ್ದಾರೆ, ಉಪನ್ಯಾಸಕರಾಗಿ ಎಸ್‌ಎಫ್ ಆದಿ ಶರಣರಲ್ಲಿ ಸಾಮಾಜಿಕ ಚಿಂತನೆ ಎಂಬ ಉಪನ್ಯಾಸ ನೀಡಲಿದ್ದಾರೆ ಅತಿಥಿಗಳಾಗಿ ಅಗಡಿ ಇಂಜಿನಿಯರಿAಗ್ ಕಾಲೇಜಿನ ಪ್ರಾಚಾರ್ಯ ಡಾ. ಪರಶುರಾಮ ಬಾರ್ಕಿ ಚಂದ್ರಣ್ಣ ಮಹಾಜನ್ ಶೆಟ್ಟರ್ ಶಿವಾನಂದ್ ಹೂವಿನ ಆಗಮಿಸಲಿದ್ದಾರೆ ಇದೇ ಸಂದರ್ಭದಲ್ಲಿ ಕಾಯಕ ರತ್ನ ಪ್ರಶಸ್ತಿ ಪುರಸ್ಕöÈತ ಪೂರ್ಣ ಜಿ ಕರಾಟೆ ಗಾಣಿಗರ ರತ್ನ ಪ್ರಶಸ್ತಿ ಪುರಸ್ಕöÈತ ಅಶೋಕ್ ಸೊರಟೂರ್ ಅವರನ್ನು ಸನ್ಮಾನಿಸಲಾಗುವುದು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಕದಳಿ ಮಹಿಳಾ ವೇದಿಕೆಯ ಹಿರಿಯ ಸದಸ್ಯೆ ವಿಶ್ರಾಂತ ಶಿಕ್ಷಕಿ ಲಲಿತಕ್ಕ ಕೆರಿಮನಿಯವರು ದಿವಂಗತ ಪ್ರೇಮಕ್ಕ ಬಿಂಕದಕಟ್ಟಿ ಅವರ ಮಾರ್ಗದರ್ಶನದಲ್ಲಿ ೨೦೦೬ರಲ್ಲಿ ಸ್ಥಾಪಿತಗೊಂಡ ಈ ಮಹಿಳಾ ಸಂಘಟನೆ ಇಂದು ಹೆಮ್ಮೆರವಾಗಿ ಬೆಳೆಯಲು ಪಟ್ಟಣದ ಸಮಸ್ತ ಜನತೆಯ ಸಹಾಯ ಸಹಕಾರವೇ ಕಾರಣ ಎಂದು ಅಭಿಮಾನದಿಂದ ಹೇಳಿದರು. ಕಳೆದ ೧೯ ವರ್ಷಗಳಿಂದ ನಿರಂತರವಾಗಿ ಶ್ರಾವಣ ಸಂಜೆ ಕಾರ್ಯಕ್ರಮವನ್ನು ಸಂಘಟಿಸುತ್ತಿರುವ ಮಹಿಳಾಮಣಿಗಳ ಶಕ್ತಿಗೆ ಎಲ್ಲರ ಪ್ರೋತ್ಸಾಹವೇ ಕಾರಣ ಎಂದು ಹೇಳಿದರು ಇದೇ ಸಂದರ್ಭದಲ್ಲಿ ಶ್ರಾವಣ ಸಂಜೆ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಗಳನ್ನು ಬಿಡುಗಡೆ ಮಾಡಲಾಯಿತು.
ಈ ಸಂದರ್ಭದಲ್ಲಿ ರತ್ನಕ್ಕ ಕರ್ಕಿ ನಂದಿನಿ ಮಾಳವಾಡ ಶಶಿಕಲಾ ಒಡಕಣ್ಣವರ ಮಂಜುಳಾ ಓದೋನವರ ಅನ್ನಪೂರ್ಣ ಓದು ನವರ ಶಾರದಾ ಭಟ್ಗುರ್ಕಿ ರೇಖಾ ಒಡಕಣ್ಣವರ ಮಹಾನಂದ ಕೊಣ್ಣೂರ ಶೋಭಕ್ಕ ಗಾಂಧಿ ಕಾಂಚನ ಹಾಸರೆಡ್ಡಿ ವಿಜಯಲಕ್ಷಿ÷್ಮ ಪಿಳ್ಳಿ ಶೈಲಾ ಆದಿ ಬಸಣ್ಣ ಬೆಂಡಿಗೇರಿ ಎಂ ಕೆ ಕಳ್ಳಿಮಠ ಗಂಗಾಧರ ಅರಳಿ ಮುರುಳಿಧರ್, ಹುಬ್ಬಳ್ಳಿ ಅಂಕಲಕೋಟಿ ಸೇರಿದಂತೆ ವಿವಿಧ ಮಹಿಳಾ ವೇದಿಕೆ ಪದಾಧಿಕಾರಿಗಳು ಉಪಸ್ಥಿತರಿದ್ದರು ಅಶ್ವಿನಿ ವಂದಿಸಿದರು.