ಶಾಶ್ವತ ಪರಿಹಾರಕ್ಕಾಗಿ ಸಿಎಂ ಜೊತೆ ಚರ್ಚೆ
ಚನ್ನಮ್ಮನ ಕಿತ್ತೂರು,ಆ.೫: ಶೂರರ ನಾಡಿಗೆ ಖ್ಯಾತಿಯಾದ ಕಿತ್ತೂರಿನ ಐತಿಹಾಸಿಕ ಗಡಾದಮರಡಿ ಕಾವಲುಗೋಪುರದ ಮೇಲೆ ನಂದಿ ಧ್ವಜ ಹಾರಾಡುತ್ತಿತ್ತು. ಈಗ ಆ ಕಟ್ಟಡ ನೆಲೆಕಚ್ಚಿದ್ದು ಎಲ್ಲರಲ್ಲಿ ಬೇಸರ ತಂದಿದೆ. ಎಂದು ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದರು.
ಗಡಾದಮರಡಿ ಗೋಪುರಕ್ಕೆ ಭೇಟಿನೀಡಿ ಪರಿಶೀಲಿಸಿ ಮಾತನಾಡಿದ ಅವರು ಚನ್ನಮ್ಮನ ಕಾಲದ ಈ ಕಟ್ಟಡವನ್ನು ತೆರವುಗೊಳಿಸಿ ಹೊಸ ಕಟ್ಟಡ ನಿರ್ಮಿಸಲು ಸರಕಾರÀದಿಂದ ಹಣ ಬಿಡುಗಡೆಯಾಗಿತ್ತು. ವೈಜ್ಞಾನಿಕವಾಗಿ ಕೆಲಸ ಮಾಡದ ಕಾರಣ ಅತಿ ಮಳೆಯಾದದ್ದರಿಂದ ಈ ಕಟ್ಟಡ ಕುಸಿದಿದೆ.
ಪ್ರತಿ ವರ್ಷ ಇಲ್ಲಿ ಧ್ವಜಾರೋಹಣ ನೇರವೇರಿಸಲಾಗುತ್ತಿತ್ತು ಆದರೆ ಈ ಸಲ ಕಟ್ಟಡ ಕುಸಿದಿದ್ದರಿಂದ ಪರ್ಯಾಯವಾಗಿ ಬೇರೆಡೆ ಧ್ವಜಾರೋಹಣ ಮಾಡಲು ವ್ಯವಸ್ಥೆಗೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ.
ಚನ್ನಮ್ಮನ ಮತ್ತು ಸಂಗೋಳ್ಳಿ ರಾಯಣ್ಣನ ಕಾಲದ ಗಡಾದಮರಡಿ ಮಹತ್ವ ಕಾಪಾಡಲು ಮತ್ತೆ ಕಟ್ಟಡ ನಿರ್ಮಿಸಲಾಗುವುದು ಇದಕ್ಕೆ ಸಂಬAಧಿಸಿದAತೆ ಶಾಶ್ವತ ಪರಿಹಾರಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಜಿಲ್ಲಾಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹಾಗೂ ಸರ್ಕಾರಿ ಅಧಿಕಾರಿಗಳೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದೆಂದರು.