ಸ್ವಪ್ನ ಎಜುಕೇಶನ್ ಟ್ರಸ್ಟ್ ನಿಂದ ವಧುವರರ ಸಮಾವೇಶ
ಸಂಜೆವಾಣಿ ವಾರ್ತೆ
ದಾವಣಗೆರೆ.ಆ.೫: ನಗರದ ಶಿವಾಲಿ ಚಿತ್ರಮಂದಿರದ ಹಿಂಭಾಗದಲ್ಲಿರುವ ಸ್ವಪ್ನ ಎಜುಕೇಶನ್ ಟ್ರಸ್ಟ್ ವತಿಯಿಂದ ಎಲ್ಲಾ ಜಾತಿಯ ಸರ್ವ ಸಮಾಜ ಬಾಂಧವರ ವಧು-ವರರ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ. ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಟ್ರಸ್ಟ್ ಅಧ್ಯಕ್ಷ ಟಿ.ನಾರಾಯಣ ರಾವ್ ಮಾತನಾಡಿ, ವಧು-ವರರ ಬಯೋಡೇಟಾ (ಪರಿಚಯ ಪತ್ರವನ್ನು ಸಂಕ್ಷಿಪ್ತ ಮಾಹಿತಿ ಜೊತೆಗೆ ಒಂದು ಭಾವಚಿತ್ರದೊಂದಿಗೆ) ಮೊಬೈಲ್ ಸಂಖ್ಯೆ 886138237, 7975023609 ಹಾಗೂ7892328599  ಇದೇ ಆ.೧೫ರ ಒಳಗೆ ಕಳುಹಿಸಿಕೊಡಬೇಕು. ಸಮಾವೇಶದಲ್ಲಿ ಭಾಗವಹಿಸುವವರಿಗೆ ಯಾವುದೇ ಶುಲ್ಕ ವಿಧಿಸದೆ ಸಂಪೂರ್ಣ ಉಚಿತವಾಗಿದೆ ಎಂದು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್ ನ ಮನೋಹರ, ನಾಗಮ್ಮ ಇದ್ದರು.