ಹೊಸಪೇಟೆ ಬಲಿಜ ಸಂಘಕ್ಕೆ ನೂತನ ಪದಾಧಿಕಾರಿಗಳು
ಸಂಜೆವಾಣಿ ವಾರ್ತೆ
ಹೊಸಪೇಟೆ ಆ5: ಹೊಸಪೇಟೆ ಬಲಿಜ ಸಂಘಕ್ಕೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರಧಾನ ಕಾರ್ಯದರ್ಶಿ ರಾಜೇಂದ್ರ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು, ಸಂಘದ ಹಿರಿಯರಾದ ದೊಡ್ಡ ಹನುಮಂತಪ್ಪ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನುಆಯ್ಕೆ ಮಾಡಲಾಗಿದೆ ದೊಡ್ಡ ಹನುಮಂತಪ್ಪ ನೂತನ ಅಧ್ಯಕ್ಷರಾಗಿ ಹಾಗೂ ರಾಜೇಂದ್ರ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಅಧ್ಯಕ್ಷ ದೊಡ್ಡ ಹನುಮಂತಪ್ಪ ಎಲ್ಲಾ ಪದಾಧಿಕಾರಿಗಳೂ, ಸದಸ್ಯರು, ಹಾಗೂ ಸಮಾಜದ ಎಲ್ಲರನ್ನು ಒಗ್ಗುಡಿಸಿಕೊಂಡು ಸಂಘವನ್ನು ಮುನ್ನಡೆಸುವುದಾಗಿ ತಿಳಿಸಿದರು.
ನೂತನ ಪದಾಧಿಕಾರಿಗಳು:
ಟಿ.ರವಿಕುಮಾರ(ಗೌರವಾಧ್ಯಕ್ಷ), ದೊಡ್ಡ ಹನುಮಂತ್ಪ(ಅಧ್ಯಕ್ಷ), ಸಾಂಬಶಿವರಾವ್(ಉಪಾಧ್ಯಕ್ಷ), ಲಕ್ಷ್ಮೀನಾರಾಯಣ(ಉಪಾಧ್ಯಕ್ಷ), ಎಲ್.ಟಿ.ಯೋಗಾನಂದ( ಉಪಾಧ್ಯಕ್ಷ) ಎನ್,ಟಿ.ರಾಜು(ಕಾರ್ಯಾಧ್ಯಕ್ಷ) ಆಚಿಜನೇಯಲು(ಕಾನೂನು ಸಲಹೆಗಾರ), ಪಾಂಡುರಂಗ (ಖಜಾಂಚಿ) ಹಾಗೂ ಆಡಳಿತ ಮಂಡಳಿಯ ನಿರ್ದೇಶಕರುಗಳಾಗಿ ಶ್ರೀನಿವಾಸ.ಟಿ, ದುರ್ಗಾಪ್ರಸಾದ್, ಕೆ.ವೀರಣ್ಣ, ಮಂಜುನಾಥ, ಕೋದಂಡಪಾಣಿ, ವೇಣುಗೋಪಾಲ, ಶಿವಕುಮಾರ, ಗಣೇಶ್ ನಾಯ್ಡು, ಶ್ರೀನಿವಾಸ ಎನ್, ರಾಮಕೃಷ್ಣ, ಗಾಜುಲ ರಾಮು, ರಾಮು, ರಘು ಬಳೆಗಾರ, ವಿನಾಯಕ ಟೈಲರ್, ಸುಮಿತ್ರಮ್ಮ, ರೋಜಾಮಣಿ ಇವರುಗಳು ಆಯ್ಕೆಯಾಗಿದ್ದಾರೆ ಎಂದು ಪ್ರಧಾನ ಕಾರ್ಯದರ್ಶಿ ರಾಜೇಂದ್ರ ತಿಳಿಸಿದರು.