ಹಬೋಹಳ್ಳಿ:ಉಚಿತ ನೇತ್ರ ತಪಾಸಣಾ ಶಿಬಿರದಲ್ಲಿ 209 ಜನರ ತಪಾಸಣೆ
ಸಂಜೆವಾಣಿ ವಾರ್ತೆ
 ಹಗರಿಬೊಮ್ಮನಹಳ್ಳಿ:ಆ.05 ಪಟ್ಟಣದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ, ಇಲ್ಲಿಯ ಬಿ.ಸಿ.ಆರ್. ಫೌಂಡೇಷನ್, ಲಿಂಗಾಯತ ಸಮಾಜಮುಖಿ ಟ್ರಸ್ಟ್ ಹಾಗೂ ಶಿವಮೊಗ್ಗದ ಶಂಕರ್ ಕಣ್ಣಿನ ಆಸ್ಪತ್ರೆ ಮತ್ತು ತಾಲೂಕು ಸಾರ್ವಜನಿಕ ಆಸ್ಪತ್ರೆ ಹಾಗೂ ಆರೋಗ್ಯ ಇಲಾಖೆಯ ಸಂಬಂಧಿತ ಸರ್ಕಾರಿ ಸಂಸ್ಥೆಗಳ ಸಹಯೋಗದೊಂದಿಗೆ ಭಾನುವಾರ ಉಚಿತ ನೇತ್ರಾ ತಪಾಸಣಾ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರ ಹಮ್ಮಿಕೊಳ್ಳಲಾಗಿತ್ತು.
 ಲಿಂಗಾಯತ ಪಂಚಮಸಾಲಿ ಸಮಾಜ ಮುಖಿ ಟ್ರಸ್ಟ್‍ನ ಗೌರವಾಧ್ಯಕ್ಷ ಎ.ವೀರಣ್ಣ ಮಾತನಾಡಿ ಮನುಷ್ಯನಿಗೆ ಪ್ರಮುಖವಾದ ಅಂಗವೆಂದರೆ ಅದು ಕಣ್ಣು, ಅದನ್ನು ಜಾಗೃತೆಯಿಂದ ಸಂರಕ್ಷಿಸಿಕೊಳ್ಳಬೇಕು. ಅಂದತ್ವ ಬಂದ ಮೇಲೆ ಶಸ್ತ್ರ ಚಿಕಿತ್ಸೆ ನೀಡಿ ಪುನಃ ಜಗತ್ತನ್ನು ನೋಡುವಂತೆ ಮಾಡುವ ವೈದ್ಯರೇ ದೇವರು ಎಂದು ಅಭಿಪ್ರಾಯ ಪಟ್ಟರು.
ಟ್ರಸ್ಟ್‍ನ ತಾಲೂಕು ಅಧ್ಯಕ್ಷರಾದ ಭದ್ರವಾಡಿ ಚಂದ್ರಶೇಖರ್ ಪ್ರಾಸ್ತಾವಿಕವಾಗಿ ಮಾತನಾಡಿ, ಅಂದತ್ವದಿಂದ ಮನುಷ್ಯ ಏನನ್ನು ಮಾಡಲಾರ, ಅಂದತ್ವ ನಿವಾರಣೆಗೆ ಸರ್ಕಾರ ಕೂಡ ಸಾಕಷ್ಟು ಯೋಜನೆಗಳನ್ನು ಹಾಕಿಕೊಂಡಿವೆ. ಇದಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿ ನೇತ್ರಗಳ ಸಮಸ್ಯೆಗಳಿರುವ ಜನರಿಗೆ ಪುನಃ ತಪಾಸಣೆ ಹಾಗೂ ಅವಶ್ಯವಾಗಿದ್ದರೆ ಶಸ್ತ್ರ ಚಿಕಿತ್ಸೆ ಮಾಡಿಸುವಲ್ಲಿ ಸಮಾಜದ ಅನೇಕ ಸಂಘಟನೆಗಳು ಪ್ರಯತ್ನಿಸುತ್ತಿವೆ. ಆ ಹಿನ್ನೆಲೆಯಲ್ಲಿ, ನಮ್ಮ ಸಮಾಜದ ಶ್ರೀಜಯಮೃತ್ಯುಂಜಯ ಮಹಾಸ್ವಾಮೀಜಿ ಮಾರ್ಗದರ್ಶನದಲ್ಲಿ, ಸಮಾಜಮುಖಿ ಟ್ರಸ್ಟ್ ಹಾಗೂ ಫೌಂಡೆಷನ್‍ಗಳ ಸಹಯೋಗದೊಂದಿಗೆ ಉಚಿತ ನೇತ್ರಾ ತಪಾಸಣಾ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರವನ್ನು ಹಮ್ಮಿಕೊಂಡಿದ್ದೇವೆ. ಇದರ ಸದುಪಯೋಗ ನೂರಾರು ಜನರಿಗೆ ಸಿಗುವುದು ಭಾಗ್ಯ ಇನ್ನೊಂದಿಲ್ಲ ಎಂದರು.
ಈ ವೇಳೆ ಒಟ್ಟು 209 ಜನರು ತಪಾಸಣೆಗೊಳಗಾದರು. ಅದರಲ್ಲಿ 94ಜನ ಶಸ್ತ್ರಚಿಕಿತ್ಸೆಗೆ ಆಯ್ಕೆಯಾಗಿದ್ದಾರೆ. ಬಳಿಕ 15ಕ್ಕೂ ಹೆಚ್ಚು ವೈದ್ಯಕೀಯ ಸಿಬ್ಬಂದಿಗೆ ಟ್ರಸ್ಟ್ ನ ಪದಾಧಿಕಾರಿಗಳು ಸನ್ಮಾಸನಿಸಿ ಗೌರವಿಸಿದರು. ಶಂಕರ್ ಕಣ್ಣಿನ ಆಸ್ಪತ್ರೆಯ ಮೇಲ್ವಿಚಾರಕರಾದ ಕೃಷ್ಣ, ವೈದ್ಯರಾದ ಡಾ.ವಿನಯ್, ಡಾ.ದೀಪ, ತ್ಯಾಗರಾಜ್‍ನಾಯ್ಕ್, ಇಲ್ಲಿಯ ಸರ್ಕಾರಿ ವೈದ್ಯರಾದ ಡಾ.ಶರತ್ ಹಾಜರಿದ್ದರು.  
 ಈ ಸಮಯದಲ್ಲಿ ಮುಖಂಡರಾದ ಸುಧಾಕರ ಪಾಟೀಲ್, ಕೆ.ಪ್ರಭಾಕರ, ನರೆಗಲ್ ಮಲ್ಲಿಕಾರ್ಜುನ, ದಿವಾಕರಗೌಡ, ಕರಿಬಸವರಾಜ್, ನಾಗರಾಜ್, ಗಜಾಪುರ ಮಂಜುನಾಥ, ಕರಿಯಪ್ಪ ಗುಜನೂರು, ಚಿತ್ರವಾಡ್ಗಿ ಪ್ರಕಾಶ್, ಪೂಜಾರ್ ಮಲ್ಲಿಕಾರ್ಜುನ, ಕುಂಟೂರು ನಿಂಗಣ್ಣ, ಇಟ್ಟಿಗಿ ಗುರುಬಸವರಾಜ್, ಮಲ್ಲಯ್ಯ, ಕಡಬಾಳು ಮಂಜಣ್ಣ, ಎಲಿಗಾರ್ ಮಂಜುನಾಥ, ಭದ್ರವಾಡಿ ಸುರೇಶ, ಹನಸಿ ವೀರೇಶ, ಆನಂದ, ವಿಜಯ್, ಕುಮಾರಸ್ವಾಮಿ, ನೆಲ್ಕುದ್ರಿ ಕುಮಾರ್, ಐನಳ್ಳಿ ಶೇಖರ್, ಬಾಬುವಲಿ, ಸಾಲ್ಮನಿ ನಾಗರಾಜ್ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ಕೊಟ್ರೇಶ್ ಶೆಟ್ಟರ್, ಎಚ್.ಎಂ.ನಾಗರಾಜ್ ಇತರರಿದ್ದರು.