ಹಬೋಹಳ್ಳಿ: ಎಸ್.ಡಿ.ಎಂ.ನಿಂದ ಉಚಿತ ಹೃದಯ ತಪಾಸಣೆ
ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ: ಆ.05 ತಾಲೂಕಿನ ಕೆಂಚಟನಹಳ್ಳಿಯಲ್ಲಿ ಶ್ರೀಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಧಾರವಾಡದ ಎಸ್.ಡಿ.ಎಂ.ನ ನಾರಾಯಣ ಹೃದಯಾಲಯ ಮತ್ತು ವರದಾಪುರದ ಆರೋಗ್ಯ ಕ್ಷೇಮ ಕೇಂದ್ರದ ಸಹಯೋಗದೊಂದಿಗೆ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ಭಾನುವಾರ ಉಚಿತ ಹೃದಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿತ್ತು
ಶ್ರೀಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ತಾಲೂಕು ಯೋಜನಾಧಿಕಾರಿ ಟಿ.ಆರ್.ಮಂಜುಳಾ ಮಾತನಾಡಿ ಆಹಾರ ಪದ್ದತಿ ಹಾಗೂ ಲಘು ವ್ಯಯಾಮ ಮಾಡುವುದರಿಂದ ಆರೋಗ್ಯ ಕಾಪಾಡಿಕೊಳ್ಳಬಹುದು. ಯಾವುದೇ ದುಶ್ಚಟಗಳಿಗೆ ಬಲಿಯಾಗದೆ ಆರೋಗ್ಯದ ಬಗ್ಗೆ ಗಮನವಿರಲಿ ಗ್ರಾಮೀಣ ಪ್ರದೇಶದಲ್ಲಿ ನೀವಿರುವಲ್ಲಿಗೆ ಬಂದು ಉಚಿತ ತಪಾಸಣೆ ಸೌಲಭ್ಯ ಸಿಗುತ್ತಿದೆ ಇದರ ಸದುಪಯೋಗ ಪಡಿಸಿಕೊಳ್ಳಿ ಎಂದು ಕರೆ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಮರಬ್ಬಿಹಾಳ್ ಗ್ರಾ.ಪಂ.ಯ ಉಪಾಧ್ಯಕ್ಷ ಭಾಷಸಾಬ್ ಮಾತನಾಡಿ, ಆರೋಗ್ಯ ಭಾಗ್ಯ ಎನ್ನುವುದು, ಮನುಷ್ಯನಿಗೆ ಯಾವುದೇ ಕಾಯಿಲೆ ಬಾರದಿರುವಾಗ.. ಅದರಲ್ಲಿ ಪ್ರಮುಖವಾದ ಹೃದಯ ಕಾಯಿಲೆಯೊಂದು ಅಪಾರ ವೆಚ್ಚದ ಕಾಯಿಲೆ. ಇಲ್ಲಿ ಉಚಿತ ಸೌಲಭ್ಯ ಸಿಗುತ್ತಿರುವುದು ಗ್ರಾಮೀಣ ಪ್ರದೇಶದ ಜನರು ಶ್ರೀಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘಕ್ಕೆ ಕೃತಜ್ಞರಾಗಿದ್ದೇವೆ ಎಂದರು.
ಈ ವೇಳೆ 131 ಜನರು ತಪಾಸಣೆಗೋಳಪಟ್ಟರು. ಅದರಲ್ಲಿ 8ಜನರು ಗಂಭೀರ ಹೃದಯ ಕಾಯಿಲೆ ಇರುವುದು ಕಂಡುಬಂದು, ಎಸ್.ಡಿ.ಎಂ.ಗೆ ಶಿಫಾರಸ್ಸು ಮಾಡಿದರು.
ಈ ಸಮಯದಲ್ಲಿ ಸ್ವಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಕವಿತಾ ಕೆ.ಹನುಮಂತಪ್ಪ,  ವಲಯ ಮೇಲ್ವಿಚಾರಕರಾದ ವಿ.ತಿಪ್ಪೇಸ್ವಾಮಿ, ಗ್ರಾ.ಪಂ.ಸದಸ್ಯ ಮೂರ್ತಿ, ಮುಖಂಡರಾದ ಹುಲುಗಪ್ಪ, ಮುಟುಗನಹಳ್ಳಿ ಕೆ.ಹನುಮಂತಪ್ಪ, ಡಾ.ನಾಯಕ್, ಆರೋಗ್ಯ ಕ್ಷೇಮ ಕೇಂದ್ರದ ನವೀನ್, ಸಂಯೋಜಕರಾದ ವೀರಯ್ಯ ಬಾಳಿಕಾಯಿ, ಸೇವಾಪ್ರತಿನಿಧಿ ವರದಾಪುರದ ಎ.ವೀಣಾ ಮತ್ತಿತರರು ಇದ್ದರು. ಜ್ಞಾನವಿಕಾಸ ಸಂಯೋಜಕರಾದ ಸರಸ್ವತಿ ನಿರ್ವಹಿಸಿದರು.