ಆಧುನಿಕ ನಾಟಕಗಳಿಗೆ ಬೆಳಕು ಚೆಲ್ಲಿದ ಕ್ಷೇತ್ರ ಬಳ್ಳಾರಿ: ಡಾ. ಮಂಜುಳ ಚೆಲ್ಲೂರು
(ಸಂಜೆವಾಣಿ ವಾರ್ತೆ)
ಬಳ್ಳಾರಿ:ಅ,5- ನಟರೆಂದೇ ಹೇಗಿರಬೇಕು ಎಂಬುದಕ್ಕೆ ಸಾಕ್ಷಿಯಾಗಿದ್ದಾರೆ ಬಳ್ಳಾರಿ ರಾಘವರು ಎಂದು  ನಿವೃತ್ತ ನ್ಯಾಯಮೂರ್ತಿ ಮಂಜುಳ ಚೆಲ್ಲೂರು ಅಭಿಪ್ರಾಯಪಟ್ಟಿದ್ದಾರೆ.
ಅವರು ಮೊನ್ನೆ ಸಂಜೆ ನಗರದ ರಾಘವ ಮೆಮೋರಿಯಲ್ ಅಸೋಸಿಯೇಷನ್  ಇವರು ಆಯೋಜಿಸಿದ್ದ  ಬಳ್ಳಾರಿ ರಾಘವರ 144ನೇ ಜಯಂತಿಯ  ಪ್ರಶಸ್ತಿ ಪ್ರಧಾನ ಸಮಾರಂಭ ಮತ್ತು ನಾಟಕೋತ್ಸವದ ಎರಡನೇ ದಿನದ ಕಾರ್ಯಕ್ರಮ ಉದ್ಘಾಟಿಸಿ  ಮಾತನಾಡುತ್ತಿದ್ದರು.
ಒಂದು ಕಣ್ಣಿನಲ್ಲಿ ಶಾಂತಿಯು ಇನ್ನೊಂದು ಕಣ್ಣಲ್ಲಿ ಕ್ರೋಧವನ್ನು ತೋರಿಸುವ ನಟನೆ ರಾಘವರಿಗೆ ಮಾತ್ರ ಸಾಧ್ಯವಾಗಿತ್ತು.  ಕಾಲಕ್ಕೆ ತಕ್ಕ ಹಾಗೆ ನಾಟಕಗಳು ಸಹ ಬದಲಾಗಬೇಕು ಯುವಕರು ನಾಟಕ ರಂಗಕ್ಕೆ ಬರಲು ಪೋಷಕರು ಪ್ರೋತ್ಸಾಹಿಸಬೇಕು ಎಂದು. ಅಧುನಿಕ ನಾಟಕ ಕ್ಷೇತ್ರಕ್ಕೆ ಬೆಳಕು ಚೆಲ್ಲಿದ ಕ್ಷೇತ್ರ ಈ  ಬಳ್ಳಾರಿಯಾಗಿದೆಂದರು.
ರಾಘವ ಮೆಮೋರಿಯಲ್ ಅಸೋಸಿಯೇಷನ್ ನ ಅಮೃತ ಮಹೋತ್ಸವದ ಅಂಗವಾಗಿ ಪ್ರತಿ ತಿಂಗಳು ತೆಲುಗು ಮತ್ತು ಕನ್ನಡ ನಾಟಕಗಳನ್ನು ಪ್ರದರ್ಶಿಸಿ ಕಲಾವಿದರಿಗೆ ಬೇಕಾಗುವ ಎಲ್ಲಾ ಸಹಕಾರವನ್ನು ನಾವು ಒದಗಿಸುತ್ತಿದ್ದೇವೆಂದು  ‌ಅಧ್ಯಕ್ಷತೆ ವಹಿಸಿದ್ದ  ರಾಘವ ಮೆಮೋರಿಯಲ್ ಅಸೋಸಿಯೇಷನ್ ನ‌ ಅಧ್ಯಕ್ಷ ಕೆ.ಕೋಟೇಶ್ವರರಾವ್  ಹೇಳಿದರು.
ಗೌರವ ಅತಿಥಿಗಳಾಗಿ ಭಾಗವಹಿಸಿದ್ದ ತೆಲು ರಮನಗಭೂಮಿಯ ಕಲಾವಿದ  ವಾಡ್ರೇವು ಸುಂದರ್ರಾವ್,  ಬಳ್ಳಾರಿಯಲಿ ರಾಘವ ಕಲಾಮಂದಿರ ಸ್ಥಾಪನೆಯಾದ ದಿನದಿಂದ ನಾಟಕದ  ಕಲಾವಿದರಿಗೆ ಮರು ಜೀವ ಬಂದಿದೆ ಎಂದರೆ ತಪ್ಪಾಗಲಾರದು. ಬಳ್ಳಾರಿಯಲ್ಲಿ ನಾಟಕದ ವೈಭವವನ್ನು ಹೆಚ್ಚಿಸಿದ ಕೀರ್ತಿ ರಾಘವರಿಗೆ ಸಲ್ಲುತ್ತದೆಂದರು.
ಈ ವರ್ಷದ ಬಳ್ಳಾರಿ ರಾಘವ ರಾಜ್ಯ ಪ್ರಶಸ್ತಿ ಸ್ವೀಕರಿಸಿದ  ಕೊನೇಟಿ ಸುಬ್ಬರಾಜು, ನಾಟಕ ಸಿದ್ಧತೆ ಮಾಡಿ ಪ್ರದರ್ಶಿಸುವವರೆಗೆ ಹಲವಾರು ತೊಂದರೆಗಳು ಬರುತ್ತವೆ. ನಾಟಕ ಪ್ರದರ್ಶನವಾದ ಮೇಲೆ ಉಂಟಾಗುವ ಸಂತೋಷ ಬೇರೆಲ್ಲೂ ಸಿಗುವುದಿಲ್ಲ.  ರಂಗಭೂಮಿಯಲ್ಲಿ ರಾಘವರು ಬಹುದೊಡ್ಡ ಸಾಧಕರು ಅಂಥವರ ಹೆಸರಿನಲ್ಲಿ ನನಗೆ ಪ್ರಶಸ್ತಿ ಲಭಿಸಿರುವುದು ನನ್ನ ಪುಣ್ಯ ಎಂದರು.
ವೇದಿಕೆಯ ಮೇಲೆ ರಾಘವ ಮೆಮೋರಿಯಲ್ ಅಸೋಸಿಯೇಷನ್ ಗೌರವಾಧ್ಯಕ್ಷ ಕೆ.ಚನ್ನಪ್ಪ ಉಪಾಧ್ಯಕ್ಷರಾದ  ರಮೇಶ್ ಗೌಡ ಪಾಟೀಲ, ಎಚ್ ವಿಷ್ಣುವರ್ಧನ ರೆಡ್ಡಿ ಕಾರ್ಯದರ್ಶಿ ನಾಮ ಪ್ರಕಾಶ ಜಂಟಿ ಕಾರ್ಯದರ್ಶಿ ಎಂ. ರಾಮಾಂಜನೇಯಲು ಖಜಾಂಜಿಗ ಪಿ.ಧನಂಜಯ ಉಪಸ್ಥಿತರಿದ್ದರು.
ನಂತರ ವಾಡ್ರೇವು ಸುಂದರ್ರಾವ್ ಯಯಾತಿ ಪುತ್ರ ಎನ್ನುವಂತಹ ಏಕಪಾತ್ರ ಅಭಿನಯ ಪ್ರದರ್ಶಿಸಿದರು. ಬಳಿಕ ಶ್ರೀ ಅಮೃತ ಲಹರಿ ಥಿಯೇಟರ್ ಆರ್ಟ್ಸ್ ಗುಂಟೂರು ತಂಡದವರು ನಾನ್ನ ನೇನು ವಚ್ಚೇಸ್ತ” ಎನ್ನುವಂತಹ ಸಾಮಾಜಿಕ ನಾಟಕವನ್ನು ಪ್ರಸ್ತುತಪಡಿಸಿದ್ದರು
ಪ್ರಾರ್ಥನೆ  ಸಂಧ್ಯಾ ಕೋಲಚಲಂ, ನಿರೂಪಣೆ  ಎನ್ ಶ್ರೀನಿವಾಸ ರೆಡ್ಡಿ, ವೇದಿಕೆ ನಿರ್ವಹಣ ರಮಣಪ್ಪ ಭಜಂತ್ರಿ ನೆರವೇರಿಸಿಕೊಟ್ಟರು.