ವೀರಶೈವ ಮುಖಂಡರಿಗೆ ಮಹಾಸಭಾದಿಂದ ಸನ್ಮಾನ
(ಸಂಜೆವಾಣಿ ವಾರ್ತೆ)
ಬಳ್ಳಾರಿ:ಅ,5- ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ರಾಜ್ಯ ಅಧ್ಯಕ್ಷ  ಎನ್. ತಿಪ್ಪಣ್ಣ ನವರಿಗೆ ಹಾಗು ಮುಖ್ಯಮಂತ್ರಿಗಳ ನೀತಿ ಆಯೋಗಗಳ ಅನುಷ್ಠಾನ ಕಾರ್ಯಕ್ರಮಗಳ ಸಲಹೆಗಾರರು ಮತ್ತು ಅಳಂದ ಶಾಸಕ   ಬಿ .ಆರ್. ಪಾಟೀಲ್ ಅವರಿಗೆ ನಗರದಲ್ಲಿ ನಿನ್ನೆ  ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾದ ಜಿಲ್ಲಾ ಘಟಕದ  ನೂತನ  ಅಧ್ಯಕ್ಷ ಪಂಚಾಕ್ಷರಪ್ಪ ಬಿಚುಗಲ್ ಮತ್ತಿತರ ಮುಖಂಡರು ಸನ್ಮಾನಿಸಿ ಗೌರವಿಸಿದ್ದಾರೆ.
ಈ ಸಂದರ್ಭದಲ್ಲಿ ಕಾರ್ಯಕಾರಿ ಸಮಿತಿ ಸದಸ್ಯರಾದ ಎಸ್. ಎಂ. ನಾಗರಾಜ ಸ್ವಾಮಿ ಸಿರಿಗೇರಿ, ಮದಿರೆ ಕುಮಾರಸ್ವಾಮಿ, ಡಿ. ಅರುಣ್ ಕುಮಾರ್, ಮತ್ತು ನಿಟ್ಟೂರು ಮರೇಗೌಡ, ನಾಗರಾಜಗೌಡ, ದಾಸಪುರ ಮಂಜಣ್ಣ, ಕಮ್ಮರಚೇಡು ಮಂಜುನಾಥ, ಮುಂತಾದವರು ಇದ್ದರು.