ಶ್ರೀ ನಂದ ವಸತಿ ಶಾಲೆಯಲ್ಲಿಭಜನೆ ಗಾಯನ ಕಾರ್ಯಕ್ರಮ
ಸಂಜೆವಾಣಿ ವಾರ್ತೆ
ಬಳ್ಳಾರಿ.ಆ.5- ನಗರದ ಶ್ರೀ ನಂದ ವಸತಿ  ಶಾಲೆಯಲ್ಲಿ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮ (ಅವದೂತ ದತ್ತ ಪೀಠಂ) ರವರ ಕಡೆಯಿಂದ ಭಜನೆ ಸಂಗೀತವನ್ನು ಏರ್ಪಡಿಸಲಾಗಿದ್ದು, ಈ ಕಾರ್ಯಕ್ರಮದಲ್ಲಿ ವಿವಿಧ ಶಾಲೆಗಳ ಮಕ್ಕಳು ಭಾಗವಹಿಸಿ ವಿವಿಧ ಹಾಡುಗಳನ್ನು ಹಾಡುವುದರ ಮೂಲಕ ಸಂಗೀತದ ಲೋಕವನ್ನು ಸೃಷ್ಟಿಸಿದರು. ತಮ್ಮ ಮಧುರವಾದ ಕಂಠದಿಂದ ವಿವಿಧ ಹಾಡುಗಳನ್ನು ಹಾಡಿ ಕ್ಷಣದಲ್ಲಿ ಕಷ್ಟ ಸುಖಃ ದುಖಃಗಳನ್ನು ಮರೆಸಿದರು. ಮೊಬೈಲ್)ನಲ್ಲಿ ಕಾಲ ಕಳೆಯುತ್ತಿರುವ ಮಕ್ಕಳಲ್ಲಿ ಸಂಗೀತದ ರುಚಿಯನ್ನು ತೋರಿಸಿದ ಹಾಗೂ, ಭಜನೆ ಸಂಗೀತದ ಕಾರ್ಯಕ್ರಮವನ್ನು ಏರ್ಪಡಿಸಿದಂತಹ ಶಾಲೆಯ ಅಧ್ಯಕ್ಷರಾದ ಶ್ರೇಯಾತ ವಿ. ಗಾಂಧಿಯವರು ಯಾವ ಕ್ಷೇತ್ರದಲ್ಲಾದರೂ ಸಾಧನೆ ಮಾಡಬಹುದು ಆದರೆ ಸಂಗೀತಕ್ಷೇತ್ರದಲ್ಲಿ ಯಾರು ಸಾಧನೆ ಮಾಡಿದ್ದಾರೆ ಅವರು ಇಡೀ ಜಗತ್ತನ್ನೇ ಗೆದ್ದಂತೆ ಎಂದು ನುಡಿದರು. ಕಾರ್ಯಕ್ರಮದಲ್ಲಿ ಶ್ರೀಮತಿ ಕರುಣ, ಶ್ರೀಮತಿ ಸುಭದ್ರಮ್ಮ ನ್ಯಾಯ ತೀರ್ಪಕರಾಗಿ ಬಂದು ಮಕ್ಕಳ ಫಲಿತಾಂಶದೊಂದಿಗೆ ಸ್ಥಾನಗಳಿಸಿದ ಮಕ್ಕಳಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ನಂತರ ಪ್ರಥಮ ಸ್ಥಾನ ಪಡೆದ ಮಗುವಿಗೆ ಮೈಸೂರಿನ ಅವದೂತ ದತ್ತ ಪೀಠದಿಂದ ಪ್ರಶಸ್ತಿಗಳನ್ನು ನೀಡಲಾಗುವುದೆಂದು ತಿಳಿಸಿದರು