ವಿಶೇಷ ಉಪನ್ಯಾಸ ಕಾರ್ಯಕ್ರಮ
ಧಾರವಾಡ, ಆ೫: ಜಿಲ್ಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕöÈತಿ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಧಾರವಾಡದ ಎಲ್ ಇ ಎ ವಿಜ್ಞಾನ, ಕಲಾ ಹಾಗೂ ವಾಣಿಜ್ಯ ಪದವಿ ಪೂರ್ವ ಮಹಾವಿದ್ಯಾಲದಲ್ಲಿ ೭೭ ವರ್ಷದ ಸ್ವಾತಂತ್ರ ದಿನಾಚರಣೆಯ ಸಂಭ್ರಮಾಚರಣೆ ನಿಮಿತ್ಯ ಸ್ವಾತಂತ್ರ÷್ಯ ಸಂಗ್ರಾಮದಲ್ಲಿ ಧಾರವಾಡ ಜಿಲ್ಲೆ ಮತ್ತು ಜಿಲ್ಲೆಯ ಮಹನೀಯರ ನೆನಪಿಸಿಕೊಳ್ಳುವ ಕಾರ್ಯಕ್ರಮ ಕಾಲೇಜು ಸಭಾಂಗಣದಲ್ಲಿ ಜರುಗಿತು.
ಈ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸವನ್ನು ನೀಡಿದ ಧಾರವಾಡದ ಜೆಎಸ್‌ಎಸ್ ಸಂಸ್ಥೆಯ ಎಸ್.ಎಂ ಪದವಿ ಪೂರ್ವ ಕಾಲೇಜು ಪ್ರಾಚಾರ್ಯರಾದ ಡಾ. ಭರಮಪ್ಪ ಭಾವಿ ಅವರು ಮಾತನಾಡಿ, ಸ್ವತಂತ್ರ ಹೋರಾಟದಲ್ಲಿ ಧಾರವಾಡದ ಪಾತ್ರವನ್ನು ವಿವರಿಸಿದರು. ರಾಷ್ಟç ಮಟ್ಟದ ಹೋರಾಟಗಾರರ ಜೊತೆಯಲ್ಲಿ ಸ್ಥಳೀಯ ಹೋರಾಟಗಾರರನ್ನು ಗುರುತಿಸಿ, ಎಲೆ ಮರೆಯ ಕಾಯಿ ಅಂತಿರುವ ಅವರ ತ್ಯಾಗ ಬಲಿದಾನಗಳನ್ನು ಸ್ಮರಿಸಿ, ಗೌರವಿಸುವ ಕಾರ್ಯವಾಗಬೇಕೆಂದರು.
ಕಲಾವಿದ ಪ್ರಭು ಕುಂದರಗಿ ಕಲಾತಂಡದ ಬಸವರಾಜ ಗುಡ್ಡಪ್ಪನವರ, ಪ್ರಶಾಂತ್ ತಡಸ್ ಅವರಿಂದ ದೇಶಭಕ್ತಿ ಹಾಗೂ ಸ್ವತಂತ್ರ ಹೋರಾಟಗಾರರ ಕುರಿತು ಲಾವಣಿ ಗೀತೆಗಳನ್ನು ಪ್ರಸ್ತುತಪಡಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಕನ್ನಡ ಮತ್ತು ಸಂಸ್ಕöÈತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಭಾಗವಹಿಸಿದ್ದರು. ಅತಿಥಿಗಳಾಗಿದ್ದ ಸಿ.ಬಿ. ಮಟ್ಟಿ ಅವರು ಮಾತನಾಡಿ, ಲಿಂಗಾಯತ ವಿದ್ಯಾಭಿವೃದ್ಧಿ ಸಂಸ್ಥೆಯು ೧೮೮೩ ರಲ್ಲಿ ಪ್ರಾರಂಭವಾಗಿದೆ. ಒಂದು ನೂರು ವರ್ಷಗಳ ಕಾಲ ಅನೇಕ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ನೀಡಿ ಸಮಾಜಕ್ಕೆ ಡಾ.ಡಿ.ಸಿ.ಪಾವಟೆ ಮತ್ತು ಶ್ರೇಷ್ಠ ಕವಿ ಚನ್ನಾವೀರ ಕಣವಿ ಹಾಗೂ ಇನ್ನೂ ಹಲವಾರು ಮಹಾನ ವ್ಯಕ್ತಿಗಳನ್ನು ನೀಡುವಲ್ಲಿ ಲಿಂಗಾಯತ ವಿದ್ಯಾಭಿವೃದ್ಧಿ ಸಂಸ್ಥೆಯ ಕೊಡುಗೆ ಅಪಾರವಾಗಿದೆ ಎಂದು ಸ್ಮರಿಸಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಲೋಹಿತ ಕಾರೇಕರ ಅವರು ಮಾತನಾಡಿ, ಇಂದಿನ ವಿದ್ಯಾರ್ಥಿಗಳು ಕಲಿಕೆಗೆ ಎಷ್ಟು ಮಹತ್ವ ನೀಡುತ್ತಿರೋ ಅದಕ್ಕೂ ಹೆಚ್ಚು ದೇಶವನ್ನು ಕಟ್ಟುವಲ್ಲಿ ಶ್ರಮಿಸಬೇಕು ಎಂದರು. ಉಪ ಪ್ರಾಂಶುಪಾಲರಾದ ಕವಿತಾ ಮಟ್ಟಿ ಅವರು ಸ್ವಾಗತಿಸಿದರು. ವಿದ್ಯಾರ್ಥಿನಿ ಚೆನ್ನಮ್ಮ ಪಾಟೀಲ ನಿರೂಪಿಸಿದರು.