ಬಂಧ ಮುಕ್ತವಾಗುವುದೇ ಸ್ವತಂತ್ರ :  ಶ್ರೀ ಬಸವ ಹರಳಯ್ಯ ಸ್ವಾಮಿ
ಸಂಜೆವಾಣಿ ವಾರ್ತೆ
ಹಿರಿಯೂರು: ಆ. -5 ತಾಲೂಕಿನ ಹಾಯ್ಮಂಗಲ ಶ್ರೀ ಮಹಾಶಿವ ಶರಣ ಯ್ಯ ಸ್ವಾಮಿ ಗುರುಪೀಠದಲ್ಲಿ ಜ್ಞಾನದ ಬೆಳಕು ಕಾರ್ಯಕ್ರಮ ನಡೆಯಿತು. ಶ್ರೀ ಮಹಾ ಶಿವಶರಣ ಹರಳಯ್ಯ ಗುರು ಪೀಠದ ಪೀಠಾಧ್ಯಕ್ಷರಾಗಿರುವ ಶ್ರೀ ಬಸವ ಹರಳಯ್ಯ ಸ್ವಾಮೀಜಿಯವರು ಜ್ಞಾನದ ಬೆಳಕು ಕಾರ್ಯಕ್ರಮವನ್ನು  ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿದರು. ನಂತರ ಸ್ವಾಮೀಜಿಯವರು ಆಧ್ಯಾತ್ಮ ಮತ್ತು ಸ್ವಾತಂತ್ರ್ಯ ಇವೆರಡು ಎಂದಿಗೂ ಬಿಡಿಸದ ಸಂಬಂಧಗಳಾಗಿವೆ ಆಧ್ಯಾತ್ಮವು ಬಂಧನದಿಂದ ಬಿಡಿಸಿದಾಗ ಮಾತ್ರ ಸಂಪೂರ್ಣ ಸ್ವಾತಂತ್ರವೆಂದು ತಿಳಿಸಿದರು.  ಗಾಂಧೀಜಿಯವರ ಸ್ವಾತಂತ್ರ್ಯ ಹೋರಾಟದಲ್ಲಿ ರಾಮ ಮತ್ತು ಹನುಮಾನ ಹೆಸರುಗಳನ್ನು ಬಳಸಿ ಜನರನ್ನು ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಸಿದ ಬಗ್ಗೆ ಮಾಹಿತಿ ನೀಡಿದರು. ಹಾಗೂ ಈ ಕಾರ್ಯಕ್ರಮದ ಅತಿಥಿಗಳಾದ ಎಂ ಹೆಚ್ ಶ್ರೀಧರ್ ಅವರು ಆಧ್ಯಾತ್ಮವು ಆತ್ಮದಲ್ಲಿ ಉಳಿಸಲಾಗಿದೆ ಅದು ನಮ್ಮ ನಡವಳಿಕೆಯ ಮೇಲೆ ಪ್ರಭಾವ ಬೀರುತ್ತದೆ ಎಂದು ತಿಳಿಸಿದರು. ಮತ್ತೋರ್ವ ಅತಿಥಿಗಳಾದ ಎಂ ಮಂಜುನಾಥ್ ಕಳ್ಳಿಹಟ್ಟಿ ಅವರು ಮಾತನಾಡಿ ಆಧ್ಯಾತ್ಮ ಮತ್ತು ಸ್ವಾತಂತ್ರ್ಯ ಜ್ಯೋತಿ ಇದ್ದಂತೆ ಅದು ಎಂದಿಗೂ ಬೆಳಕನ್ನು ನೀಡುತ್ತದೆ ನಿಮ್ಮ ಭವಿಷ್ಯದಲ್ಲಿ ನಿರಂತರವಾಗಿ ಮಾರ್ಗದರ್ಶಿಸುತ್ತದೆ ಎಂದು ತಿಳಿಸಿದರು. ಡಾಉಮಾಶಂಕರ್ ಭಾಗವಹಿಸಿ  ಆಧ್ಯಾತ್ಮವು ಪ್ರಕೃತಿಯ ಅವಿಭಾಜ್ಯ ಅಂಗ ಅದು ಮಾನವನ ಚಟುವಟಿಕೆಗಳನ್ನು ಪ್ರೇರೆಪಿಸುತ್ತದೆ ಎಂದರು ಹಾಗೂ ಈ ಕಾರ್ಯಕ್ರಮದಲ್ಲಿ ಮತ್ತೋರ್ವ ಅತಿಥಿ ಅಜಯ್ ಬಾಬು ಭಾಗವಹಿಸಿದ್ದರು. ಸಹ ಶಿಕ್ಷಕಿ ಕುಮಾರಿ ಛಾಯರವರು ಆಧ್ಯಾತ್ಮ ಮತ್ತು ಸ್ವಾತಂತ್ರ ವಿಷಯದ ಬಗ್ಗೆ ಪ್ರಾಸ್ತವಿಕ ನುಡಿಗಳನ್ನು ತಿಳಿಸಿದರು. ಹಾಗೂ ಈ ಕಾರ್ಯಕ್ರಮದಲ್ಲಿ ಎಸ್ಎಂಎಸ್ ಎಚ್ ಶಾಲೆಯ  ವ್ಯವಸ್ಥಾಪಕರು ನಾಗಾರ್ಜುನ್ ಮುಖ್ಯ ಶಿಕ್ಷಕರು ಹರೀಶ್ ಕೆ ಬಿ, ಕಾರ್ಯಕ್ರಮ ಸಂಯೋಜಕರು ಪವಿತ್ರ, ರಕ್ಷಿತಾ, ಚಿರಂಜೀವಿ, ತಿಪ್ಪೇಸ್ವಾಮಿ ಉಪಸ್ಥಿತರಿದ್ದರು