ನಿರಂತರ ಭಜನಾ ಕಾರ್ಯಕ್ರಮ
ಹುಬ್ಬಳ್ಳಿ,ಆ೫: ಶ್ರೀ ಜಯತೀರ್ಥರ ಹಾಗೂ ಶ್ರೀ ರಾಘವೇಂದ್ರ ಸ್ವಾಮಿಗಳ ರವರ ಆರಾಧನೆ ಮಹೋತ್ಸವದ ಅಂಗವಾಗಿ ತಿರುಪತಿಯ ಟ.ಟ.ಡಿ.ದಾಸ ಸಾಹಿತ್ಯ ಪ್ರಾಜೆಕ್ಟ್ ಹಾಗೂ ಗುರುಸಾರ್ವಭೌಮ ದಾಸ ಸಾಹಿತ್ಯ ಪ್ರಾಜೆಕ್ಟ್ ಮಂತ್ರಾಲಯ ಜಂಟಿ ಸಹಯೋಗದಿಂದ ನಿರಂತರ ಭಜನಾ ಕಾರ್ಯಕ್ರಮವನ್ನು ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠ ಭವಾನಿ ನಗರ ಮಠದಲ್ಲಿ ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಹುಬ್ಬಳ್ಳಿಯ ಶ್ರೀ ಭಗವದ್ಗೀತಾ ಭಜನಾ ಮಹಿಳಾ ಮಂಡಳಿ ಅಧ್ಯಕ್ಷೆ ಶ್ರೀಮತಿ ಸುರೇಖಾ ಕುಲಕರ್ಣಿ, ಎನ್ ಲಕ್ಷಿ÷್ಮ ,ಜೋತಿ ಕುಲಕರ್ಣಿ, ಪದ್ಮಾ ಕುಂದರಗಿ, ಜಯಲಕ್ಷಿ÷್ಮ ಮಳಗಿ, ಉಷಾ ಕಟ್ಟಿ, ಶಶಿಕಲಾ ಜಮಖಂಡಿ, ನಿರ್ಮಲಾ ಕುಲಕರ್ಣಿ, ಜಯಪ್ರದಾ ಪದಕಿ, ಪಲ್ಲವಿ ಜೋಶಿ,ಶಾಮಲಾ ಬೆಂಗೇರಿ, ಗೀತಾ, ಮುಂತಾದವರು ಶ್ರೀ ಮಠದ ಅರ್ಚಕರಾದ ಗುರು ರಾಜಾಚಾರ್ಯ ಸಾಮಗ, ಮದ್ವೇಶ ಆಚಾರ್ಯ, ಪವನ ಆಚಾರ್ಯ, ಟಿ.ಟಿ.ಡಿ ಸಂಚಾಲಕ ಗೋಪಾಲ ಕುಲಕರ್ಣಿ ನೇತೃತ್ವವನ್ನು ವಹಿಸಿದ್ದರು.