ನಾರ್ಥ್ ಬೆಂಗಳೂರು ಟ್ರಸ್ಟ್‌ನಿಂದ ವಿಶೇಷ ತರಬೇತಿ
ಬೆಂಗಳೂರು, ಆ. ೫-ನಾರ್ಥ್ ಬೆಂಗಳೂರು ಎಜುಕೇಶನ್ ಟ್ರಸ್ಟ್ ಕಮ್ಮಗೊಂಡನಹಳ್ಳಿ ೧೫ ಅದರ ಆಶ್ರಯದಲ್ಲಿ ನಡೆಯುತ್ತಿರುವ ಪೂರ್ಣ ಪ್ರಜ್ಙಾ ಅಕಾಡೆಮಿ ಶಾಲೆಯು ಪಠ್ಯಪುಸ್ತಕದ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೆ ಆದ್ಯತೆ ನೀಡಿ ಶಾಲಾ ಮಕ್ಕಳಿಗೆ ಸಂಗೀತ ,ಕರ್ನಾಟಕ ಸಂಗೀತ ,ಭರತನಾಟ್ಯ ಕರಾಟೆ, ಯೋಗ ಪಾಶ್ಚಿಮಾತ್ಯ ನೃತ್ಯ,ಚಿತ್ರಕಲೆ ಈ ವಿಭಾಗಗಳಲ್ಲಿ ಪರಿಣಿತ ಶಿಕ್ಷಕರಿಂದ ವಿಶೇಷ ತರಬೇತಿಗಳನ್ನು ಕೊಡಲಾಗುತ್ತಿದೆ.
ಇದರ ಆಡಳಿತ ಮತ್ತು ನೇತೃತ್ವವನ್ನು ಅಧ್ಯಕ್ಷ ಶಾಂತಕುಮಾರ್ ಉಪಾಧ್ಯಕ್ಷ ಡಿ. ವಿ. ಕೃಷ್ಣಮೂರ್ತಿ, ಕಾರ್ಯದರ್ಶಿ ಡಿ.ಎನ್.ಹರಿದಾಸ್, ಕೋಶಾಧ್ಯಕ್ಷ ರಾಜೇಂದ್ರ, ಆಂತರಿಕ ಲೆಕ್ಕ ಪರಿಶೋಧಕ ಬಿ.ಎಸ್.ಲಕ್ಷ್ಮೀಶ ಮತ್ತು ಮಾಜಿ ನಗರ ಸಭಾ ಸದಸ್ಯ ಕೆ.ನಾಗಭೂಷಣ್ ಪರ್ಚೆಸಿಂಗ್ ವಿಭಾಗದ ಮುಖ್ಯಸ್ಥ ಮಂಜುನಾಥ್ ರಾವ್ ಮತ್ತು ಮಂಜುನಾಥ ಅವರ ನೇತೃತ್ವದಲ್ಲಿ ಮಧ್ಯಮ ವರ್ಗದ ಜನಕ್ಕೆ ನಿಲುಕುವಂತಹ ಉತ್ತಮ ಶೈಕ್ಷಣಿಕ ವಾತಾವರಣ ನಿರ್ಮಿಸುವಲ್ಲಿ ಪರಿಶ್ರಮ ಪಡುತ್ತಿದೆ ಎಂದು ತಿಳಿಸಲು ಹರ್ಷ ಪಡಿಸಿದರು.
ವಿವೇಕಾನಂದ ಇಂಟರ್ ನ್ಯಾಷನಲ್ ಪ್ರಕೃತಿಯೋಗ ಅಕಾಡೆಮಿಯು ಶ್ರೀ ಸಂಜೀವಿನಿ ಯೋಗ ಮತ್ತು ಸಾಂಸ್ಕೃತಿಕ ಕೇಂದ್ರ ದೊಡ್ಡಬಳ್ಳಾಪುರ, ಅಜಂತಾ ಅಂತರರಾಷ್ಟ್ರೀಯ ಸಾಂಸ್ಕೃತಿಕ ಯೋಗ ಅಕಾಡೆಮಿ ಬೆಂಗಳೂರು ಹಾಗೂ ಶ್ರೀ ಬಸವೇಶ್ವರ ಯೋಗ ಕೇಂದ್ರ ಇವರ ಸಹಯೋಗದೊಂದಿಗೆ ನಿನ್ನೆ ಮಲ್ಲೇಶ್ವರದ ಶ್ರೀ ರಾಮ ಸಮುದಾಯ ಭವನದಲ್ಲಿ ಆಯೋಜಿಸಿದ ಜಿಲ್ಲಾ ಮಟ್ಟದ ಯೋಗ ಸ್ಪರ್ಧೆಯಲ್ಲಿ ನಾರ್ಥ್ ಬೆಂಗಳೂರು ಟ್ರಸ್ಟ್ ಕಮ್ಮಗೊಂಡನಹಳ್ಳಿಯ ಆಶ್ರಯದಲ್ಲಿ ನಡೆದ ಪೂರ್ಣ ಪ್ರಜ್ಞಾ ಅಕಾಡೆಮಿ ಶಾಲೆಯ ಮಕ್ಕಳು ಭಾಗವಹಿಸಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನಕ್ಕೆ ಭಾಜನರಾದರು.
ಈ ಸಂದರ್ಭದಲ್ಲಿ ಯೋಗ ಶಿಕ್ಷಕಿಯಾದ ಉಷಾ.ವಿ.ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಎನ್‌ಬಿಇಟಿ ಯ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದರು.
ನಗರದ ಮಲ್ಲೇಶ್ವರಂನಲ್ಲಿ ನಡೆದ ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಪೂರ್ಣಪ್ರಜ್ಞಾ ಅಕಾಡೆಮಿಯ ವಿದ್ಯಾರ್ಥಿಗಳಿಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ವಿತರಿಸಲಾಯಿತು.