ಸಮಾಜದ ಉನ್ನತಿಕರಣಕ್ಕೆ ಶಿಕ್ಷಣ ಮುಖ್ಯ
ಬೆಂಗಳೂರು, ಆ. ೫- ಸಮಾಜದಲ್ಲಿ ಒಬ್ಬ ಮನುಷ್ಯನ ಉನ್ನತೀಕರಣ ಆಗಬೇಕಾದರೆ ಅವನ ಜೀವನದಲ್ಲಿ ಶಿಕ್ಷಣ ಬಹುಮುಖ್ಯ ಪಾತ್ರ ವಹಿಸುತ್ತದೆ, ಯಾವ ವ್ಯಕ್ತಿಯು ಶಿಕ್ಷಣದಿಂದ ವಂಚಿತರಾಗಬಾರದು ಎನ್ನುವ ಉದ್ದೇಶ ನಮ್ಮ ನೀಮ್ಮೆಲ್ಲದಾಗಿರಬೇಕು, ಅದನ್ನರಿತುಕೊಂಡು ಇಂದು ನಮ್ಮಿಂದಾಗುವ ಸಹಾಯವನ್ನು ಮಾಡಬೇಕು ಉತ್ತಮ ಶಿಕ್ಷಣವನ್ನು ಮಕ್ಕಳಿಗೆ ನೀಡಬೇಕು ಎಂದು ಕಿತ್ತನಹಳ್ಳಿ ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿ ಶಿವಭದ್ರಯ್ಯ ತಿಳಿಸಿದರು.
ಬೆಂಗಳೂರು ಉತ್ತರ ತಾಲ್ಲೋಕಿನ ಕೆಂಗನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಹ್ಯೂಮನ್ ರೈಟ್ಸ್ ಪ್ರೊಟೆಕ್ಷನ್ ಕಮಿಟಿಯಿಂದ ನೋಟ್ ಬುಕ್ ಪೆನ್ಸಿಲ್, ರಬ್ಬರ್, ಜಾಮಿಟ್ರಿಬಾಕ್ಸ್ , ಚಿತ್ರಬಿಡಿಸುವ ಬುಕ್ ಹಾಗೂ ಬಿ.ಎನ್ ಅರ್ ಪಬ್ಲಿಕ್ ಶಾಲೆಯಿಂದ ಉಚಿತವಾಗಿ ಕಂಪ್ಯೂಟರ್, ಕಂಪ್ಯೂಟರ್ ಟೇಬಲ್ ಅನ್ನು ನೀಡಲಾಯಿತು.
ಬಳಿಕ ಮಾತನಾಡಿದ ಪಂಚಾಯತಿಯ ಅಭಿವೃದ್ಧಿ ಅಧಿಕಾರಿ ಶಿವಭದ್ರಯ್ಯ ಹಣವಂತ ಪೋಷಕರು ಮಕ್ಕಳನ್ನು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಬಣ್ಣದ ಸಮವಸ್ತ್ರಗಳು, ಕಾಲಿಗೆ ಬೂಟು, ಬೆಲ್ಟ್, ಟೈ, ಹೆಗಲ ಮೇಲೆ ಭಾರದ ಚೀಲ, ಊಟದ ಕ್ಯಾರಿಯರ್ ಹಾಕಿಕೊಂಡು ತಮ್ಮ ಮಕ್ಕಳು ಶಾಲೆಗೆ ಹೋಗಿಬಂದರೆ ಪಾಲಕರಿಗೆ ಖುಷಿ. ಉಳ್ಳವರು ಮಕ್ಕಳನ್ನು ಖಾಸಗಿ ಶಾಲೆಗೆ ಕಳಿಸುವುದೆಂದರೆ ಪ್ರತಿಷ್ಠೆ ಅಂದುಕೊಂಡಿದ್ದಾರೆ. ಇನ್ನೊಂದೆಡೆ ಮೈಗೆ ಸೋಪು, ತೆಲೆಗೆ ಎಣ್ಣೆ ಕಾಣದ, ಬಿಸಿಯೂಟವನ್ನೇ ನಂಬಿ. ಸರ್ಕಾರದ ಸಮವಸ್ತ್ರ, ನೋಟ್ ಪುಸ್ತಕ, ಸೈಕಲ್ ನೆಚ್ಚಿಕೊಂಡವರು ಅದೆಷ್ಟೋ ವಿದ್ಯಾರ್ಥಿಗಳು, ಪೋಷಕರು ಇದ್ದಾರೆ ಎಂದು ತಿಳಿಸಿದರು.
ಮಕ್ಕಳಿಗೆ ಉತ್ತಮ ಶಿಕ್ಷಣದ ಜೊತೆ ಶಿಸ್ತು ಕಲಿಸಿದಾಗ ಸದೃಢವಾಗಿ ನಿರ್ಮಾಣವಾಗುತ್ತಾರೆ ಸರ್ಕಾರದ ಮತ್ತು ವಿವಿಧ ಸಂಘ ಸಂಸ್ಥೆಗಳು ಕೊಡುವ ಎಲ್ಲಾ ಸೌಲಭ್ಯಗಳನ್ನು ಸಮಗ್ರವಾಗಿ ಬಳಸಿಕೊಂಡು ಮಕ್ಕಳು ವ್ಯಾಸಂಗದ ಕಡೆಗೆ ಗಮನ ಕೊಟ್ಟರೆ ಭವಿಷ್ಯ ಉತ್ತಮವಾಗಲಿದೆ ಎಂದರು.
ಈ ಸಂಧರ್ಭದಲ್ಲಿ ಹ್ಯೂಮನ್ ರೈಟ್ಸ್ ಪ್ರೊಟೆಕ್ಷನ್ ಕಮಿಟಿ ಸದಸ್ಯ ಮಹಮ್ಮದ್ ಸಲೀಂ ಅಹಮ್ಮದ್,ವರದಿಗಾರ ಪ್ರಶಾಂತ್ ಗೌಡ, ಎಸ್. ಡಿ. ಎಂ. ಸಿ. ಅಧ್ಯಕ್ಷ ನಾರಾಯಣ ಸ್ವಾಮಿ, ಗ್ರಾಮಸ್ಥ ಹನುಮೇಗೌಡ, ಶಾಲೆಯ ಮುಖ್ಯೋಪಾಧ್ಯಾಯ ಮಂಜುನಾಥ್ , ಶಾಲೆಯ ಶಿಕ್ಷಕಿ ಸುನೀತಾ ಶಾಲೆಯ ಮಕ್ಕಳು ಇನ್ನೂ ಮುಂತಾದವರು ಇದ್ದರು.