ವೇಷ ಧಾರಣೆಯಿಂದ ವ್ಯಕ್ತಿತ್ವದ ಒಳ ಪ್ರವೇಶ ಸಾಧ್ಯ
ವಿಜಯಪುರ.ಆ೫:ಶಾಲೆಗಳಲ್ಲಿ ಮಕ್ಕಳಿಗೆ ವೇಷಭೂಷಣ ಹಾಕುವ ಮೂಲಕ ಚರಿತ್ರೆಯ ಹಾಗೂ ಪುರಾಣದ ವ್ಯಕ್ತಿಗಳ ವ್ಯಕ್ತಿತ್ವದ ಒಳ ಹೊಕ್ಕಲು ಸಾಧ್ಯವಾಗುವುದೆಂದು ನಂದಿನಿ ವಿದ್ಯಾನಿಕೇತನ ಶಾಲೆಯ ಪ್ರಾಂಶುಪಾಲರಾದ ಕೃಷ್ಣನ್ ಕೌಶಿಕ್ ತಿಳಿಸಿದರು.
ಅವರು ಇಲ್ಲಿನ ನಂದಿನಿ ವಿದ್ಯಾನಿಕೇತನ ಶಾಲೆಯಲ್ಲಿ ಪ್ರಿ ನರ್ಸರಿ,ಎಲ್ ಕೆ ಜಿ, ಹಾಗೂ ಯುಕೆಜಿ ಮಕ್ಕಳಿಗಾಗಿ ಏರ್ಪಡಿಸಲಾಗಿದ್ದ ವೇಷಭೂಷಣ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನಗಳನ್ನು ವಿತರಿಸಿ ಮಾತನಾಡುತ್ತಿದ್ದರು.
ಮಕ್ಕಳಿಗೆ ಪಠ್ಯದ ಮೂಲಕ ಹೇಳಿಕೊಡುವ ಪಾಠಕ್ಕಿಂತ, ಚರಿತ್ರೆ ಪುರಾಣಗಳ ಮಹಾನ್ ವ್ಯಕ್ತಿಗಳ ವ್ಯಕ್ತಿತ್ವ ಅರಿತುಕೊಳ್ಳಲು ಅಂತಹ ವೇಷಭಷಣಗಳನ್ನು ತೊಟ್ಟರೆ ಹೆಚ್ಚು ತಿಳಿದುಕೊಳ್ಳಲು ಸಾಧ್ಯವಾಗುವುದರೊಂದಿಗೆ ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಹಾಗೂ ಅಂತಹ ವ್ಯಕ್ತಿಗಳನ್ನು ತಮ್ಮ ಜೀವನಕ್ಕೆ ಮಾದರಿಯನ್ನಾಗಿಸಲು ಸಾಧ್ಯವಾಗುವುದರೊಂದಿಗೆ ಮಕ್ಕಳನ್ನು ಸರಿಯಾದ ದಾರಿಯಲ್ಲಿ ಬೆಳೆಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಕ್ಕಳು ಸ್ವಾಮಿ ವಿವೇಕಾನಂದ, ಕಿತ್ತೂರು ರಾಣಿ ಚೆನ್ನಮ್ಮ, ಜಾನ್ಸಿ ರಾಣಿ ಲಕ್ಷ್ಮೀಬಾಯಿ, ಒನಕೆ ಓಬವ್ವ, ವೈದ್ಯರುಗಳು, ಮಿಲಿಟರಿ ಅಧಿಕಾರಿಗಳು ಪೊಲೀಸ್ ಅಧಿಕಾರಿಗಳು, ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಮತ್ತಿತರೆ ವೇಷ ಭೂಷಣಗಳನ್ನು ಆಕರ್ಷಕವಾಗಿ ಧರಿಸಿ ಎಲ್ಲರ ಕಣ್ಮನ ಸೆಳೆದರು
ವೇಷಭೂಷಣ ಸ್ಪರ್ಧೆಯ ತೀರ್ಪುಗಾರರಾಗಿ ಶೇಕ್ ಮೌಲ, ನಂದ ದೇಸಾಯಿ, ಗೋವಿಂದರಾವ್ ದೇಸಾಯಿ ರವರುಗಳು ಭಾಗವಹಿಸಿದ್ದು, ಮುಖ್ಯೋಪಾಧ್ಯಾಯರಾದ ವಿಮಲ ಸಿದ್ದರಾಜು, ಸಹ ಶಿಕ್ಷಕರುಗಳಾದ ಆರತಿ, ಮಧುಮತಿ, ಜಬೀನ, ಕೆ. ಮಂಜುನಾಥ್, ಅನುರಾಧ, ದಿವ್ಯ, ಸುಮಿತ್ರ, ಸುನಿತಾ, ಕಾವ್ಯ, ಅಶೋಕ್, ಶಂಕರ್, ಮಂಜುನಾಥ ರಾವ್ ರವರುಗಳು ಭಾಗವಹಿಸಿದ್ದರು.