ಕಾರ್ಖಾನೆ ಅಭಿವೃದ್ಧಿಗೆ ಶ್ರಮಿಸುವೆ
ಚನ್ನಮ್ಮನ ಕಿತ್ತೂರು, ಆ೫: ತಾಲೂಕಿನ ಶ್ರೀ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಗೆ ಬೇಕಾಗುವ ಸಹಕಾರವನ್ನು ಸರ್ಕಾರದಿಂದ ಕೊಡಿಸಲಾಗುವುದೆಂದು ಖಾನಾಪೂರ ಶಾಸಕ ವಿಠ್ಠಲ ಹಲಗೇಕರ ಹೇಳಿದರು.
ಶ್ರೀ ಮಲಪ್ರಭಾ ಸಹಕಾರ ಸಕ್ಕರೆ ಕಾರ್ಖಾನೆ ಕಾರ್ಮಿಕರ ಹಿತರಕ್ಷಣಾ ಸಂಘದ ವತಿಯಿಂದ ಖಾನಾಪೂರದ ಸ್ವ-ಬಿಜೆಪಿಯ ಕಛೇರಿಯಲ್ಲಿ ಸನ್ಮಾನÀ ಸ್ವೀಕರಿಸಿ ಮಾತನಾಡಿ, ಈ ಕಾರ್ಖಾನನೆಯ ಹಿತದೃಷ್ಟಿಯಿಂದ ಆಡಳಿತ ಮಂಡಳಿ ಮತ್ತು ಕಾರ್ಮಿಕ, ರೈತರÀನ್ನು ಒಗ್ಗೂಡಿಸಿಕೊಂಡು ಅಭಿವೃದ್ಧಿಗೆ ಶ್ರಮಿಸುತ್ತೇನೆ. ನಿಮ್ಮೇಲ್ಲರ ಸಹಕಾರ ಅಗತ್ಯವೆಂದರು.
ರಾಜಕೀಯ ಮಾಡದೇ ಜಾತಿ-ಭೇದ ಮರೆತು ಅಭಿವೃದ್ದಿಗೆ ನಾವೆಲ್ಲರೂ ಕೈಜೋಡಿಸೋಣ ಮತ್ತು ನನ್ನ ಒಡೆತನದ ಮಹಾಲಕ್ಷಿö್ಮÃ ಸೊಸೈಟಿಯಿಂದ ಸಾಲ ನೀಡುತ್ತೇನೆ. ಮತ್ತು ಕಾರ್ಖಾನೆ ಸಹಕಾರ ರಂಗದಲ್ಲಿ ಇರುವ ಹಾಗೇ ನೋಡಿಕೊಳ್ಳುತ್ತೇನೆ ಎಂದು ಭರವಸೆ ನೀಡಿದರು. ಇನ್ಮುಂದೆ ಖಾನಾಪೂರದ ಲೈಲಾ ಶುರ‍್ಸ್ ಮಲಪ್ರಭಾ ಸಕ್ಕರೆ ಕಾರ್ಖಾನೆ ಒಗ್ಗಟಿನಿಂದ ಜಂಟಿಯಾಗಿ ಕಾರ್ಯನಿರ್ವಹಿಸಲಿದ್ದು. ಎಲ್ಲರನ್ನೂ ಗಣನಿಗೆ ತೆಗೆದುಕೊಂಡು ರೈತರ ಹಿತ ಕಾಪಾಡುವಲ್ಲಿ ಯೋಗ್ಯವಾದ ಕಬ್ಬಿನ ದರ ನೀಡುವುದರ ಜೊತೆಗೆ ಕಾರ್ಖಾನೆಯನ್ನು ಬೆಳೆಸುತ್ತೇನೆಂದರು.
ಈ ವೇಳೆ ಕಾರ್ಖಾನೆ ಕಾರ್ಮಿಕರ ಹಿತರಕ್ಷಣಾ ಸಂಘಟಿಕರಾದ ರಾಜೇಂದ್ರ ಶಿರಮೋಜಿ, ಮಹಾಂತೇಶ ಸಾಣಿಕೊಪ್ಪ, ಶ್ರೀಶೈಲ ಪಾಶ್ಚಾಪೂರ, ಲಕ್ಷö್ಮಣ ಶ್ರೀಪತಿ, ಮಹಾಂತೇಶ ಹೊಂಡಪ್ಪನವರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.