ಮೈಸೂರು ಚಲೋ ಪಾದಯಾತ್ರೆಗೆ ತೆರಳಿದ ಬಿಜೆಪಿ ಕಾರ್ಯಕರ್ತರು
ಸಂಜೆವಾಣಿ ವಾರ್ತೆ
ದಾವಣಗೆರೆ.ಆ.೫; ವಾಲ್ಮೀಕಿ ಅಭಿವೃದ್ಧಿ ನಿಗಮದ 187 ಕೋಟಿ ರೂಗಳ ಭ್ರಷ್ಟಾಚಾರ ಮೂಡಾ ನಿವೇಶನ ಹಗರಣಕ್ಕೆ ಸಂಬಂಧಿಸಿದಂತೆ ರಾಜ್ಯ ಕಾಂಗ್ರೆಸ್ ಸರ್ಕಾರದ ಹಗರಣಗಳ ವಿರುದ್ಧ ಬಿ.ಜೆ.ಪಿ. ಬೆಂಗಳೂರಿನಿಂದ ಮೈಸೂರು ಚಲೋ ಪಾದಯಾತ್ರೆಗೆ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ 250 ಕ್ಕೂ ಹೆಚ್ಚು ಕಾರ್ಯಕರ್ತರು  ಬಸ್ ಮುಖಾಂತರ ಪಾದಯಾತ್ರೆಗೆ  ತೆರಳಿದರು.ಈ ಸಂದರ್ಭದಲ್ಲಿ  ಬಿಜೆಪಿ ಹಿರಿಯ ಮುಖಂಡರಾದ ವೈ ಮಲ್ಲೇಶ್, ಮುಖಂಡರಾದ ಬಿಜಿ ಅಜಯ್ ಕುಮಾರ್. ಬಿಜೆಪಿ ರಾಜ್ಯ ಒಬಿಸಿ ಮೋರ್ಚಾದ ಉಪಾಧ್ಯಕ್ಷರಾದ ರಾಜನಹಳ್ಳಿ ಶಿವಕುಮಾರ್, ಮಾಜಿ ಮಹಾನಗರ ಪಾಲಿಕೆಲ ಸದಸ್ಯರಾದ ಶಿವನಗೌಡ ಟಿ ಪಾಟೀಲ್, ಗೌಳಿ ಲಿಂಗರಾಜ್, ರಾಜು ನೀಲಗುಂದ್, ಸಂತೋಷ, ಮಂಜುನಾಥ್,ಸಂತೋಷ್ ಕೋಟಿ, ಗೋವಿಂದ್ ರಾಜ್, ಗುರುರಾಜ ಎನ ಎ. ಕಿಶೋರ್ ಕುಮಾರ್, ಎರಗುಂಟಿ ನಾಗಪ್ಪ, ಹರೀಶ್ ಹೊನ್ನೂರ್,ರವಿ, ಅಣ್ಣಿಗೇರಿ ಶಂಕರ್, ದುರ್ಗೇಶ್, ಇಸ್ತ್ರಿ ರಾಜಣ್ಣ, ನವೀನ, ಯರಿಸ್ವಾಮಿ,ಬೂತ್ ಅಧ್ಯಕ್ಷರುಗಳು  ಕಾರ್ಯಕರ್ತರು ಪಾದಯಾತ್ರೆಗೆ ತೆರಳಿದರು.