ನ್ಯಾಯಮೂರ್ತಿ ವೆಂಕಟಪ್ಪ ಹೊಸಮುನಿರಂದ ನ್ಯಾಯಾಲಯಕ್ಕೆ ಬೇಟಿ
ಶಿಡ್ಲಘಟ್ಟಆ೫:ನ್ಯಾಯಾಲಯಕ್ಕೆ ಅಗತ್ಯ ಮೂಲಭೂತ ಸೌಲಭ್ಯ ಮೊದಲ ಮತ್ತು ಎರಡನೇ ಮಹಡಿಗೆ ಲಿಪ್ಟ್, ಮತ್ತು ಪ್ರತ್ಯೇಕ ವಕೀಲರ ಭವನಕ್ಕೆ ಅನುಮತಿ ಕೊರಿ ಕರ್ನಾಟಕ ಉಚ್ಚ ನ್ಯಾಯಾಲಯ ಮತ್ತು ಚಿಕ್ಕಬಳ್ಳಾಪುರ ಆಡಳಿತಾತ್ಮಕ ನ್ಯಾಯಮೂರ್ತಿಗಳಾದ ಆರ್.ರವಿ ವೆಂಕಟಪ್ಪ ಹೊಸಮನಿ ರವರಿಗೆ ಮನವಿ ನೀಡಿದರು.
ಶಿಡ್ಲಘಟ್ಟ ತಾಲ್ಲೂಕಿನ ನ್ಯಾಯಾಲಯ ನಿರ್ಮಾಣವಾಗಿ ಸುಮಾರು ೪೫ ವರ್ಷಗಳು ತುಂಬಿದೆ ಆದರೂ ಸರಿಯಾದ ಮೂಲಭೂತ ಸೌಲಭ್ಯಗಳು ಇಲ್ಲದೆ ೯೦ ಕ್ಕೂ ಹೆಚ್ಚು ಇರುವ ವಕೀಲರು ತಮ್ಮ ವೃತ್ತಿಯನ್ನು ನಡೆಸಿಕೊಂಡು ಹೋಗುತ್ತಿದ್ದೇವೆ.
ಎಂದು ಹಿರಿಯ ವಕೀಲರಾದ ಪಾಪರೆಡ್ಡಿ ತಿಳಿಸಿದರು.ಈ ನ್ಯಾಯಾಲಯದಲ್ಲಿ ಹಿರಿಯ ಸಿವಿಲ್ ನ್ಯಾಯಾಲಯ, ಪ್ರದಾನ ಸಿವಿಲ್ ನ್ಯಾಯಾಲಯ, ಹೆಚ್ಚುವರಿ ಸಿವಿಲ್ ನ್ಯಾಯಾಲಯ ಒಟ್ಟು ಮೂರು ನ್ಯಾಯಾಲಯಗಳು ಕಾರ್ಯ ನಿರ್ವಸುತ್ತಿದ್ದು ಮೂರು ಮಹಡಿಗಳ ಕಟ್ಟಡವಾಗಿರುವುದರಿಂದ ಪ್ರತಿದಿನ ಹೊರ ತಾಲ್ಲೂಕು ಹಾಗೂ ಜಿಲ್ಲೆಗಳಿಂದ ಇತರೆ ಪಕೀಲರು ಮತ್ತು ಸ್ಥಳೀಯ ಕಕ್ಷಿದಾರರು. ವಯೋವೃದ್ಧ ಕಕ್ಷಿದಾರರು ಹಾಗೂ ಸಾರ್ವಜನಿಕರು ಬಂದು
ತಮ್ಮ ಕೆಲಸ ಕಾರ್ಯಗಳನ್ನು ಮತ್ತು ದಾವೆಗಳನ್ನು ನಡೆಸಿಕೊಳ್ಳುವಂತ ನ್ಯಾಯಾಲಯದಲ್ಲಿ ಮೂರನೇ ಮಹಡಿಗೆ ವಯೋ ವೃದ್ಧರು, ವಿಕಲಚೇತನರು, ಹಿರಿಯ ವಕೀಲರು, ಸೇರಿದಂತೆ ಮಹಡಿಯ ಮೇಲೆ ಹತ್ತಿ ಇಳಿಯಲು ತುಂಬಾ ತೊಂದರೆಗಳು ಅನುಭವಿಸಿವಂತಾಗಿರುತ್ತವೆ ಮೊದಲ ಮತ್ತು ಎರಡನೇ ಮಹಡಿಗೆ ಹತ್ತಿ ಇಳಿಯಲು ಲಿಪ್ಟ್ ಅವಶ್ಯಕತೆ ಇದ್ದು, ಜೊತೆಗೆ ನಮ್ಮ ವಕೀಲರ ಸಂಘದ ಕಾರ್ಯ ಚಟುವಟಿಕೆಗಳಿ ಪ್ರತ್ಯೇಕ ವಕೀಲರ ಭವನವನ್ನು ನಿರ್ಮಿಸಲುಅನುಮತಿ ನೀಡಿ ಅನುದಾನ ಮಂಜೂರು ಮಾಡಿಕೊಡಬೇಕೆಂದು ಕೋರಿದರು.
ನ್ಯಾಯಾಲಯದ ಹಿಂಭಾಗದಲ್ಲಿ ನಿರ್ಮಿಸಿದ್ದ ಕ್ಯಾಂಟೀನ್ ಈಗಾಗಲೆ ಮುಚ್ಚಿದ್ದ ಕಾರಣ ತಿಳಿದುಕೊಂಡು ಈ ಕಟ್ಟಡವನ್ನು ದುರಸ್ತಿಗೊಳಿಸಿ ವಕೀಲರಿಗೆ ಮತ್ತು ಕಕ್ಷಿದಾರರಿಗೆ ಅನುವಾಗುವಂತೆ ಕ್ಯಾಂಟೀನ್ ಮತ್ತು ವಿಶ್ರಾಂತಿ ನಿಲಯವನ್ನು ನಿರ್ಮಿಸಲು ಸೂಚನೆ ನೀಡಿದರು.
ಚಿಕ್ಕಬಳ್ಳಾಪುರ ಸತ್ರ ನ್ಯಾಯಾಧೀಶರಾದ ನೇರಳೆ ವೀರಭದ್ರಯ್ಯ ಭವಾನಿ, ಶಿಡ್ಲಘಟ್ಟ ನ್ಯಾಯಾಧೀಶರಾದ ಪೂಜಾ ಹಾಗೂ ವಕೀಲರ ಸಂಘದ ಪದಾಧಿಕಾರಿಗಳು, ವಕೀಲರು ಸಿಬ್ಬಂದಿ ಹಾಜರಿದ್ದರು.