6 ತಿಂಗಳು ಮಕ್ಕಳಿಗೆ ಎದೆಹಾಲು ನೀಡಿ ಸ್ತನ ಕ್ಯಾನ್ಸರ್‌ನಿಂದ ದೂರವಿರಿ
ಶಿಡ್ಲಘಟ್ಟ.ಆ೫:ತಾಯಂದಿರು ಮಕ್ಕಳಿಗೆ ೬ ತಿಂಗಳು ತುಂಬುವವರೆಗೂ ಕೇವಲ ಎದೆಹಾಲನ್ನು ಮಾತ್ರ ಕೊಡಬೇಕು ಎಂತಹ ಬೇಸಿಗೆ ಇದ್ದರೂ ನೀರನ್ನು ಕುಡಿಸುವ ಅವಶ್ಯಕತೆ ಇರುವುದಿಲ್ಲ, ಕನಿಷ್ಟ ೨ ವರ್ಷ ಸರಿಯಾಗಿ ಎದೆಹಾಲುಣಿಸುವ ತಾಯಿಂದಿರಿಗೆ ಸ್ತನ ಕ್ಯಾನ್ಸರ್ ಹಾಗೂ ಗರ್ಭಕೋಶದ ಕ್ಯಾನ್ಸರ್ ಬರುವುದಿಲ್ಲ ಎಂದು ಶಿಡ್ಲಘಟ್ಟ ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ ಮನೋಹರ್ ತಿಳಿಸಿದರು.
ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ವಿಶ್ವ ಸ್ತನ್ಯ ಪಾನ ದಿನಾಚರಣೆಯಲ್ಲಿ ಸ್ತನ್ಯಪಾನವನ್ನು ಸಂರಕ್ಷಿಸಿ, ಪೋತ್ಸಾಹಿಸಿ ಎಂಬ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಮಾತನಾಡಿದರು.
ಮಗು ಜನಿಸಿದ ಅರ್ಧ ಗಂಟೆಯಿಂದ ೧ ಗಂಟೆಯೊಳಗೆ ಮೊದಲ ಬಾರಿಗೆ ಎದೆಹಾಲುಣಿಸಿದರೆ ಅದು ಹಳದಿ ವರ್ಣದ ಗಟ್ಟಿಹಾಲು ಮಗುವಿಗೆ ಮೊದಲ ಲಸಿಕೆ ಇದ್ದಂತೆ ಅದರಲ್ಲಿ
ಪೌಷ್ಟಿಕಾಂಶ ಉತ್ಕೃಷ್ಟವಾಗಿದ್ದು, ರೋಗನಿರೋಧಕ ಶಕ್ತಿಯನ್ನು ಹೊಂದಿರುತ್ತದೆ ನಿಮ್ಮ ಮಕ್ಕಳಿಗೆ ಮುಂಬರುವ ದೀರ್ಘಕಾಲಿನ ಕಾಯಿಲೆಗಳನ್ನು ತಡೆಗಟ್ಟುವ ಸಲುವಾಗಿ ಮತ್ತು ಮಗುವಿನ ಜಠರ ಸ್ವಚ್ಛವಾಗುತ್ತದೆ ಎಂದರು.
ಎದೆಹಾಲು ಬಿಟ್ಟು ಮಗುವಿಗೆ ಹರಳೆಣ್ಣೆ, ಜೇನುತುಪ್ಪ, ಸಕ್ಕರೆನೀರು, ಹಸುವಿನ ಹಾಲು, ಪೌಡರ್ ಹಾಲನ್ನು ಕೊಡಬಾರದು. ೬ ತಿಂಗಳು ಕೇವಲ ಎದೆಹಾಲು ನೀಡಿ ೬ ತಿಂಗಳು ತುಂಬಿದ ನಂತರ ಎದೆಹಾಲಿನೊಂದಿಗೆ ಪೋಷಕವಾದ ಮೆದು ಆಹಾರ ಆರಂಭಿಸಬೇಕು. ಇದು ನಿಮ್ಮ ಮಗುವಿನ ಮೆದುಳು ಬೆಳವಣಿಗೆಗೂ ಅವಶ್ಯಕ ಹಾಗೂ ಮಗುವಿನ ಬುದ್ಧಿಮಟ್ಟವನ್ನು ಹೆಚ್ಚಿಸುತ್ತದೆ ಎಂದರು.
ಆರು ತಿಂಗಳುಸೂಕ್ತ ರೀತಿಯಲ್ಲಿ ತಾಯಿ ಮಗುವಿಗೆ ಎದೆಹಾಲುಣಿಸುವುದರಿಂದ ತಾಯಿ ಬೇಗ ಗರ್ಭ ಧರಿಸುವುದಿಲ್ಲ ಹಾಗೂ ತಾಯಿ?ಮಗುವಿನ ಬಾಂಧವ್ಯ ಹೆಚ್ಚುತ್ತದೆ. ಕೆಲವರು ತಮ್ಮ ಸೌಂದರ್ಯ ಆಳಾಗುತ್ತದೆ ಎಂದು ಪೌಡರ್ ಹಾಲು, ಬಾಟಲಿ ಹಾಲಿಗೆ ಮಾರು ಹೋಗುವ ತಾಯಂದಿರು ಇದ್ದಾರೆ. ಅವರು ದಿನದಿಂದ ದಿನಕ್ಕೆ ಅವರ ಆರೋಗ್ಯ ಕೆಡುವುದುಂಟು ಗಮನಿಸಿ ಎಂದು ತಾಯಂದಿರಿಗೆ ಪೌಡರ್ ಹಾಲು, ಬಾಟಲಿ ಹಾಲಿನ ಅಪಾಯದ ಬಗ್ಗೆ ತಾಯಂದಿರಲ್ಲಿ ಜಾಗೃತಿ ಮೂಡಿಸುವ ಮಾಹಿತಿಯನ್ನು ನೀಡಿದರು.
ವಿಶ್ವ ಸ್ತನ್ಯ ಪಾನ ದಿನಾಚರಣೆ ಕಾರ್ಯಕ್ರಮದಲ್ಲಿ ಮಕ್ಕಳ ತಜ್ಞ ಡಾ ಮಾಧವ್, ಡಾ ಸುಗುಣ, ಡಾ ಸ್ವಾತಿ, ಡಾ ವಿನಯ್ ಗಡ್, ಮತ್ತು ಮೇಲ್ವಿಚಾರಕರು ಆರೋಗ್ಯ ಸಿಬ್ಬಂದಿಗಳು ಹಾಜರಿದ್ದರು.