ಎಚ್‌ಡಿಕೆ ವಿರುದ್ಧ ನಾರಾಯಣಸ್ವಾಮಿ ವಾಗ್ದಾಳಿ
ಬಂಗಾರಪೇಟೆ,ಆ,೫-ಸಿದ್ದರಾಮಯ್ಯ ಅವರ ಒಳ್ಳೆಯ ಆಡಳಿತ ನೋಡಿ ಸಹಿಸಲಾಗದೆ ಬಿಜೆಪಿ-ಜೆಡಿಎಸ್ ನವರು ದೊಂಬರಾಟ ಮಾಡುತ್ತಿದ್ದಾರೆ ಎಂದು ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ವಾಗ್ದಾಳಿ ನಡೆಸಿದರು.
ಸುದ್ಧಿಗಾರರೊಂದಿಗೆ ಬಿಜೆಪಿ ಜೆಡಿಎಸ್ ಪಾದಯಾತ್ರೆ ಕುರಿತು ಮಾತನಾಡಿ, ಸಿದ್ದರಾಮಯ್ಯ ಅವರು ತಪ್ಪು ಮಾಡಿಲ್ಲ ಹೀಗಾಗಿ ಅವರು ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ, ಅಲ್ಲದೆ ಕುಮಾರಸ್ವಾಮಿ ಕೇಂದ್ರದಲ್ಲಿ ಮಂತ್ರಿ ಆದ ತಕ್ಷಣ ಇಲ್ಲಿ ಶುರು ಮಾಡಿದ್ದಾರೆ, ನಮಗೆ ಎಲ್ಲವೂ ಅರ್ಥ ಆಗುತ್ತಿದೆ, ಹೀಗಾಗಿ ನಿಮ್ಮ ರಾಜಕೀಯ ದೊಂಬರಾಟವನ್ನ ನಾವು ಸಹಿಸುವುದಿಲ್ಲ ಎಂದು ಹೇಳಿದರು.
ಇನ್ನೂ ನಿಮ್ಮದೇ ಸರ್ಕಾರ ಸೈಟ್ ನೀಡಿದೆ, ನಿಮ್ಮ ಸರ್ಕಾರ ಹಾಗೂ ಮುಡಾ ಸದಸ್ಯರನ್ನ ನಾವು ದುರ್ಬಳಕೆ ಮಾಡಿಕೊಳ್ಳಲು ಆಗುತ್ತದೆಯೆ ಎಂದು ಪ್ರಶ್ನಿಸಿದರು, ಅಲ್ಲದೆ ನಿಮ್ಮ ಸರ್ಕಾರದಲ್ಲಿಯೇ ಕುಮಾರಸ್ವಾಮಿ, ಸಾ.ರಾ.ಮಹೇಶ್, ಜಿ.ಟಿ.ದೇವೇಗೌಡ ಸೈಟ್ ತೆಗೆದುಕೊಂಡಿದ್ದಾರೆ. ಅದು ಬೊಮ್ಮಾಯಿ ಅವರು ಸಿಎಂ ಆದಾಗ ತೆಗೆದುಕೊಂಡಿರುವುದು, ಹೀಗಾಗಿ ಸಿದ್ದರಾಮಯ್ಯ ಅವರು ಯಾವುದೇ ತಪ್ಪು ಮಾಡಿಲ್ಲ, ಇದೊಂದು ರಾಜಕೀಯ ದೊಂಬರಾಟ ಎಂದು ಹೇಳಿದರು.
ರಾಜ್ಯಪಾಲರನ್ನ ಮೋದಿ ಅವರ ಬಿಜೆಪಿ ಸರ್ಕಾರ ದುರುಪಯೋಗಪಡಿಸಿಕೊಳ್ಳುತ್ತಿದೆ, ಪಾಪ ರಾಜ್ಯಪಾಲರನ್ನೆ ದಿಕ್ಕು ತಪ್ಪಿಸಿ ಒಂದೇ ದಿನದಲ್ಲಿ ನೋಟೀಸ್ ನೀಡಿದ್ದಾರೆ, ಈ ಹಿಂದೆ ಶಶಿಕಲಾ ಅವರ ವಿರುದ್ದ ನಾವು ದೂರು ನೀಡಿದಾಗ ಮೂರು ತಿಂಗಳಾದರೂ ಕ್ರಮ ತೆಗೆದುಕೊಂಡಿಲ್ಲ, ಯಾರೋ ಸಮಾಜ ಸೇವಕ ಅಬ್ರಹಾಂ ದೂರು ನೀಡಿದಾಗ ಸಂಜೆಯೊಳಗೆ ನೋಟಿಸ್ ನೀಡಿದ್ದಾರೆ ಇದರ ಉದ್ದೇಶ ಏನು ಎಂದು ಪ್ರಶ್ನೆ ಮಾಡಿದರು.
ಈ ಮೂಲಕ ಸಂವಿಧಾನವನ್ನ ಗಾಳಿಗೆ ತೂರಿ ರಾಜ್ಯಪಾಲರನ್ನ ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಗಂಭೀರ ಆರೋಪವೆಸಗಿದರಲ್ಲದೆ, ಏನೇ ನೋಟಿಸ್ ಕೊಟ್ಟರು ನಾವೂ ಸಹ ಕಾನೂನು ಹೋರಾಟಕ್ಕೆ ಸನ್ನದ್ದರಾಗಿದ್ದೇವೆ, ಒಂದು ವೇಳೆ ಸಿದ್ದರಾಮಯ್ಯರನ್ನ ಕೆಳಗಿಳಿಸಿದ್ರೆ ಗ್ರಾಮ ಮಟ್ಟದಲ್ಲಿ ಹೋರಾಟಕ್ಕೆ ಮುಂದಾಗತ್ತೇವೆ ಎಂದು ಎಚ್ಚರಿಕೆ ನೀಡಿದರು.
೪೫ ವರ್ಷಗಳ ಕಾಲ ಕಪ್ಪು ಚುಕ್ಕೆ ಇಲ್ಲದೆ ಆಡಳಿತ ಮಾಡಿರುವುದು ಸಿದ್ದರಾಮಯ್ಯ, ಹೀಗಾಗಿ ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ಅವರ ಪಾತ್ರ ಇಲ್ಲ ರಾಜೀನಾಮೆ ಕೊಡೋಲ್ಲ, ಯಾವುದೆ ಕಾರಣಕ್ಕೂ ರಾಜೀನಾಮೆ ಕೊಡಲ್ಲ ಎಂದರು.
ಇದೇ ವೇಳೆ ಪಾದಯಾತ್ರೆ ಮುಗಿದ ತಕ್ಷಣ ಸಿದ್ದರಾಮಯ್ಯ ಸರ್ಕಾರ ಉಳಿಯೋಲ್ಲ ಎಂಬ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿರಿಗೆ ಟಾಂಗ್ ನೀಡಿದ ಅವರು, ವಿರೋಧ ಪಕ್ಷದ ನಾಯಕತ್ವ ಪಟ್ಟಕೊಟ್ಟ ಮೇಲೆ ಕಾಂಗ್ರೇಸ್ ಮೇಲೆ ಮಾತನಾಡಬೇಕು ಹೀಗಾಗಿ ಅಧಿಕಾರ ಕೊಟ್ಟ ಹುಮ್ಮಸ್ಸಿನಲ್ಲಿ ಮಾತನಾಡಿದ್ದಾರೆ, ಪಾಪ ಹೈಕಮಾಂಡ್ ಹೇಳಿದ್ದು ಅವರ ಬಾಯಲ್ಲಿ ಬರುತ್ತೆ. ಅವರು ಸಹ ಕಾಂಗ್ರೇಸ್ ನಲ್ಲಿದ್ದು ಎಲ್ಲಾ ಸವಲತ್ತು ಬಳಸಿಕೊಂಡಿದ್ದಾರೆ, ಸಿದ್ದರಾಮಯ್ಯ ರಾಜಿನಾಮೆ ಕೊಡೋದು ಅವರ ಭ್ರಮೆ ಎಂದರು.