ರೈತರಿಗೆ ಉಚಿತ ಆರೋಗ್ಯ ತಪಾಸಣೆ
ಸಂಜೆವಾಣಿ ವಾರ್ತೆ
ನಂಜನಗೂಡು: ಆ.05:- ತಾಲೂಕಿನ ಸುಯೋಗ ಆಸ್ಪತ್ರೆ ಮತ್ತು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಯುಕ್ತ ಶ್ರಯದಲ್ಲಿ ರೈತರಿಗೆ ಮತ್ತು ಗ್ರಾಮಸ್ಥರಿಗೆ ಉಚಿತ ಆರೋಗ್ಯ ಶಿಬಿರವನ್ನು ತಾಲೂಕಿನ ಹೆಗ್ಗಡ ಹಳ್ಳಿ ಗ್ರಾಮದಲ್ಲಿ ಆಯೋಜಿಸಲಾಗಿತ್ತು ಕಾರ್ಯಕ್ರಮವನ್ನು ಸುಯೋಗ್ ಮುಖ್ಯಸ್ಥ ಮತ್ತು ಡಾ.ಯೋಗಣ್ಣ ಮತ್ತು ರೈತ ಸಂಘದ ಅಧ್ಯಕ್ಷ ವಿದ್ಯಾಸಾಗರ್ ಉದ್ಘಾಟಿಸಿದರು.
ವಿದ್ಯಾಸಾಗರ್ ಮಾತನಾಡುವ ಮುನ್ನ ಗ್ರಾಮದ ಯಶವಂತ್ ಯುವಕ ರೈತ ನಿಧನ ಹೊಂದಿದ್ದರು ಆದ್ದರಿಂದ ಸಭೆಯಲ್ಲಿ ಒಂದು ನಿಮಿಷ ಮೌನ ಆಚರಣೆ ಮಾಡಲಾಯಿತು ಪ್ರತಿಯೊಬ್ಬ ರೈತರಿಗೆ ಆರೋಗ್ಯ ಬಹಳ ಮುಖ್ಯ ಸುಯೋಗ ಆಸ್ಪತ್ರೆ ಡಾಕ್ಟರ್ ಯೋಗಣ್ಣ ಅವರ ಆಶ್ರಯದಲ್ಲಿ ಉಚಿತವಾಗಿ ವೇದಿಕೆ ತಪಾಸಣೆ ಮಾಡುತ್ತಿದ್ದಾರೆ ಇದರಿಂದ ಪ್ರತಿಯೊಬ್ಬರೂ ಅನುಕೂಲವಾಗುತ್ತದೆ ಪ್ರತಿ ತಿಂಗಳು ಒಂದೊಂದು ಗ್ರಾಮದಲ್ಲಿ ಮಾಡಬೇಕೆಂದು ಬಯಸಿದ್ದೇವೆ ಅದರಂತೆ ಪ್ರತಿ ತಿಂಗಳು ಒಂದೊಂದು ಗ್ರಾಮದಲ್ಲಿ ನಡೆಯುತ್ತದೆ ಎಲ್ಲ ರೈತ ಕುಟುಂಬಗಳು ಬಂದು ಇದರ ಸದುಪಯೋಗಪಡಿಸಬೇಕೆಂದು ಮನವಿ ಮಾಡಿದರು.
ಡಾಕ್ಟರ್ ಯೋಗಣ್ಣ ಮಾತನಾಡಿ ಇತ್ತೀಚಿನ ದಿನಗಳಲ್ಲಿ ವೈದ್ಯಕೀಯ ಸೇವೆ ವಾಣಿಜ್ಯಮಯವಾಗಿದೆ ಎಂದು ವಿಸಾದ ವ್ಯಕ್ತಪಡಿಸಿದರು ಕಾರ್ಯಕ್ರಮ ಉದ್ಘಾಟಿಸಿ ಮುಂದುವರೆದ ಮಾತನಾಡಿ ನಾನು ಒಬ್ಬ ರೈತನ ಮಗ ರೈತನ ಕಷ್ಟ ಏನೆಂಬುದು ತಿಳಿದಿದ್ದೇನೆ ನಮ್ಮ ವೈದ್ಯಕೀಯ ಸೇವೆಯನ್ನು ಪ್ರತಿ ಹಳ್ಳಿಯಲ್ಲಿ ಆರೋಗ್ಯ ಸೇವೆ ತೆಗೆದುಕೊಂಡು ಹೋಗಬೇಕೆಂಬುದೇ ನಮ್ಮ ಗುರಿ ಆದ್ದರಿಂದ ಈ ಸೇವೆಗೆ ರೈತ ಸಂಘ ಕೈಜೋಡಿಸಿರುವುದು ಬಹಳ ದೊಡ್ಡ ಶಕ್ತಿ ಬಂದಂತಾಗಿದೆ ಪ್ರತಿ ಹಳ್ಳಿಗಳಲ್ಲಿ ಕೂಡ ರೈತ ಸಂಘ ಬಹಳ ಉತ್ತಮ ಕೆಲಸ ಮಾಡುತ್ತಿದೆ ಆದ್ದರಿಂದ ಇವರ ಸಹಯೋಗದೊಂದಿಗೆ ನಮ್ಮ ವೈದ್ಯಕೀಯ ಸೇವೆಯನ್ನು ರೈತರಿಗೆ ತಲುಪಿಸುವ ಸೇವೆ ಮಾಡುತ್ತಿದ್ದೇವೆ ಇಂದು ಮೊದಲ ದಿನ ಹೆಗ್ಗಡಹಳ್ಳಿ ಆರಂಭ ಮಾಡಿದ್ದೇವೆ ತಿಂಗಳಿಗೆ ಒಂದು ಬಾರಿ ಪ್ರತೀ ಹಳ್ಳಿಗೂ ವೈದ್ಯಕೀಯ ಸೇವೆ ಲಭ್ಯವಾಗುತ್ತದೆ ಈ ವೈದ್ಯಕೀಯ ಸೇವೆ ಮಾಡಲು ಒಂದು ವರ್ಷದಿಂದ ಪ್ರಯತ್ನ ಮಾಡಿದ್ದೇವೆ ಅದು ಇಂದು ಈಡೇರಿದೆ 40 ವರ್ಷಗಳಿಂದ ವೈದ್ಯಕೀಯ ಸೇವೆ ಮಾಡುತ್ತಿದ್ದೇವೆ ಆದರೆ ಸರ್ಕಾರ ಒಳ್ಳೆಯ ವೈದ್ಯಕೀಯ ಸೇವೆ ಮಾಡಲು ಆಗುತ್ತಿಲ್ಲ ನಮ್ಮ ಆಸ್ಪತ್ರೆಯಲ್ಲಿ ರೋಗಗಳಿಗೆ ಚಿಕಿತ್ಸೆ ನೀಡಲಾಗುತ್ತದೆ ನೋಡಲು ನಮ್ಮ ಆಸ್ಪತ್ರೆ ಬಹಳ ದೊಡ್ಡದು ವೆಚ್ಚ ಮಾತ್ರ ಚಿಕ್ಕದಾಗಿರುತ್ತದೆ ಭಯಪಡುವ ಅಗತ್ಯವಿಲ್ಲ ಮೊದಲು ನಮ್ಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಮೊದಲು ನಂತರ ಹಣ ಶೋಷಣೆ ಮಾಡದೇ ರೀತಿ ಸೇವೆ ಮಾಡಲು ಸುಯೋಗ ಆಸ್ಪತ್ರೆ ಕಂಕಣಬದ್ಧವಾಗಿದೆ ಎಂದರು
ಪ್ರತಿಯೊಂದು ಮನೆಯಲ್ಲೂ ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದಾರೆ ಪ್ರತಿ ಮನುಷ್ಯ ಕೂಡ ತನ್ನ ಕಾಯಿಲೆ ಬಗ್ಗೆ ಚಿಂತನೆ ಮಾಡದೆ ಸರಿಯಾದ ಸಮಯಕ್ಕೆ ಊಟ ಮಾಡಿದೆ ಹೋಗುತ್ತಿದ್ದಾರೆ ಇಡೀ ಕುಟುಂಬ ಬೀದಿ ಪಾಲಾಗುವ ಪರಿಸ್ಥಿತಿ ಬಂದಿದೆ ಸಕ್ಕರೆ ಕಾಯಿಲೆ ಬರುವಂತೆ ನೋಡಿಕೊಳ್ಳಬೇಕು ಇದು ಬಂದರೆ ಮನುಷ್ಯನನ್ನು ಹಲವಾರು ರೋಗಕ್ಕೆ ತುತ್ತು ಮಾಡುತ್ತದೆ ಆದ್ದರಿಂದ ಎಚ್ಚರದಿಂದಿರಬೇಕು ಬಂದ ನಂತರ ಪ್ರತಿ ತಿಂಗಳು ಬಿಪಿ ಶುಗರ್ ಪರೀಕ್ಷೆ ಮಾಡಿಕೊಳ್ಳಬೇಕು ಮೂರು ತಿಂಗಳಿಗೊಮ್ಮೆ ಸಂಪೂರ್ಣ ದೇಹದ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು ನಮ್ಮ ಆಸ್ಪತ್ರೆಯಲ್ಲಿ ಸಕ್ಕರೆ ಕಾಯಿಲೆ ಇರುವವರಿಗೆ ಸೂಕ್ತ ವ್ಯವಸ್ಥೆ ಮಾಡಲಾಗಿದೆ 500 ಕಟ್ಟಿ ನಮ್ಮಲ್ಲಿ ಮೆಂಬರ್ ಆದರೆ ಪ್ರತಿ ತಿಂಗಳು ನಿಮಗೆ ನಾವೇ ಕಾಲ್ ಮಾಡಿ ಬಿ ಪಿ ಶುಗರ್ ಪರೀಕ್ಷೆ ಮಾಡುತ್ತೇವೆ ಕಾರಣ ಇಷ್ಟೇ ನಿಮಗೆ ಕುಟುಂಬದ ಒತ್ತಡದಿಂದ ಇತರ ಪ್ರತಿ ತಿಂಗಳು ಪರೀಕ್ಷೆ ಮಾಡಿಸಲು ಹೋಗುವುದಿಲ್ಲ ಮರೆತು ಬಿಡುತ್ತೀರಿ ಆದ್ದರಿಂದ ಈ ಗ್ರೂಪಿನಲ್ಲಿದ್ದರೆ ನಾವೇ ಪ್ರತಿ ತಿಂಗಳು ಕಾಲ್ ಮಾಡಿ ಪರೀಕ್ಷೆ ಮಾಡುತ್ತೇವೆ ಆದ್ದರಿಂದ ನಿಮ್ಮ ಆರೋಗ್ಯ ಚೆನ್ನಾಗಿರುತ್ತದೆ ಇದರ ಜೊತೆಗೆ ದೇವದಾಸ ಸಂಪೂರ್ಣ ಪರೀಕ್ಷೆ ಮಾಡಬೇಕಾದರೆ ಹೆಚ್ಚು ಹಣ ಖರ್ಚು ಆಗುತ್ತದೆ ನಮ್ಮಲ್ಲಿ 3500 ಕಟ್ಟಿ ನಂಬರಾದರೆ ಮೂರು ತಿಂಗಳಿಗೊಮ್ಮೆ ಎಲ್ಲಾ ತರದ ಪರೀಕ್ಷೆ ಮಾಡಿ ಆರೋಗ್ಯವಾಗಿ ಬದುಕಲು ದಾರಿಯಾಗುತ್ತದೆ ಎಂದು ಇತರ ಸೇವೆಗೆ ಮುಂದಾಗಿದ್ದೇವೆ ನೀವು ಕೂಡ ಇದರ ಸದುಪಯೋಗಪಡಿಸಿಕೊಂಡು ಉತ್ತಮವಾಗಿ ಆರೋಗ್ಯವಾಗಿ ಬದುಕಿ ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಕಾಂತ ಮಾತನಾಡಿ ಮೊದಲ ಬಾರಿಗೆ ನನ್ನ ಅಧ್ಯಕ್ಷತೆಯಲ್ಲಿ ಇಂತಹ ಉತ್ತಮ ಸೇವೆ ನಡೆಯುತ್ತಿದೆ ಮನಸ್ಸಿಗೆ ಮೊದಲು ಆರೋಗ್ಯ ಇದ್ದರೆ ಏನನ್ನಾದರೂ ಪಡೆಯಬಹುದು ಆದ್ದರಿಂದ ಪ್ರತಿಯೊಬ್ಬರಿಗೂ ಕೂಡ ನಮ್ಮ ಗ್ರಾಮದಲ್ಲಿ ನಡೆಯುತ್ತಿರುವ ಉಚಿತ ವೈದ್ಯಕೀಯ ಶಿಬಿರವನ್ನು ಉಪಯೋಗ ಮಾಡಿಕೊಂಡು ಎಲ್ಲರೂ ಕೂಡ ಆರೋಗ್ಯದಿಂದ ಇರಬೇಕೆಂದು ಸಲಹೆ ನೀಡಿದರು
ಈ ಕಾರ್ಯಕ್ರಮದಲ್ಲಿ ರೈತ ಸಂಘದ ತಾಲೂಕು ಅಧ್ಯಕ್ಷ ಸತೀಶ್, ಮೈಸೂರು ಜಿಲ್ಲಾ ಕಾರ್ಯದರ್ಶಿ ರಘು, ಡಾಕ್ಟರ್ ಲಲಿತಾ, ಈಶ್ವರ್, ಪ್ರಭುದೇವ್, ಗುರು, ಚೇತನ್ ಸೇರಿದಂತೆ ಇತರರು ಇದ್ದರು.