ಬದುಕುವ ಗ್ಯಾರಂಟಿಯೇ ಇರಲಿಲ್ಲಾ ದುರಂತದಲ್ಲಿ ಪಾರಾಗಿ ಬಂದ ಮಹಿಳೆ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಆ.05:- ಆ ಮಳೆಯ ನೀರಲ್ಲಿ ಬದುಕುವಗ್ಯಾರಂಟಿಯೇಇರಲಿಲ್ಲಾ, ಗುಡ್ಡದ ಮೇಲೆ ನಾವು ನಿಂತಿದ್ದೆವು. ಎಲ್ಲವೂಕೊಚ್ಚಿಕೊಂಡು ಹೋಗುತ್ತಿತ್ತುಎಂದುದುರಂತದಲ್ಲಿ ಪಾರಾಗಿ ಬಂದ ಮಹಿಳೆ ಕಣ್ಣೀರು ಹಾಕಿದರು.
ಕೇರಳದ ವಯನಾಡು ಭೂ ಕುಸಿತದಲ್ಲಿ ಪಾರಾಗಿ ಸ್ವಗ್ರಾಮಗುಂಡ್ಲುಪೇಟೆತಾಲೂಕಿನ ಕೋಡಗಳ್ಳಿಗೆ ಬಂದಿರುವಗೌರಮ್ಮ ಈಗಲೂ ದುರಂತದಲ್ಲಾದಆಘಾತದಿಂದ ಚೇತರಿಸಿಕೊಂಡಿಲ್ಲ. ಅಂದುಇಡೀರಾತ್ರಿ ಮಳೆಯಲ್ಲಿ ತೊಯ್ದು, ಕೊನೆಗೆ ಸುರಕ್ಷಿತವಾಗಿ ಮನೆಗೆ ಬಂದಿದ್ದಾರೆ.
ಕೇರಳದ ವಯನಾಡಿನಚೂರಲ್ ಮಲೆ ಟೀ ಎಸ್ಟೇಟ್‍ನಲ್ಲಿ 30 ವರ್ಷಗಳಿಂದ ಕೆಲಸ ಮಾಡಿಜೀವನಕಟ್ಟಿಕೊಂಡಿದ್ದಗುಂಡ್ಲುಪೇಟೆತಾಲೂಕಿನ ಕೋಡಹಳ್ಳಿ ಗ್ರಾಮದಗೌರಮ್ಮಅವರಕುಟುಂಬ, ಹಸುಗಳ ಕಿರುಚಾಟದಿಂದಜೀವ ಉಳಿಸಿಕೊಂಡು ಗುಡ್ಡ ಕುಸಿತದ ಘಟನೆಯಲ್ಲಿ ಬದುಕುಳಿದಿದ್ದಾರೆ.
ಹಸುಗಳ ಕಿರುಚಾಟದಿಂದಎದ್ದೆವು: ಕೋಡಹಳ್ಳಿಯ ಗೌರಮ್ಮ, ಮಗ ವಿನೋದ್, ಅಣ್ಣ ಸಿದ್ದರಾಜು, ಅತ್ತಿಗೆಜಯಮ್ಮ, ಅಣ್ಣನ ಮಗ ಮಹೇಶ್‍ಐದು ಮಂದಿ ಚೂರಲ್ ಮಲೆಯಲ್ಲಿದುರಂತ ನಡೆದ ಸೋಮವಾರರಾತ್ರಿ ಎಂದಿನಂತೆ ಊಟ ಮುಗಿಸಿ ಮಲಗಿದ್ದರು. ಮಧ್ಯರಾತ್ರಿಕುಟುಂಬಸ್ಥರು ಸಾಕಿದ್ದ 18 ಹಸುಗಳ ಕಿರುಚಾಟಜೋರಾದ ಹಿನ್ನೆಲೆಯಲ್ಲಿಎದ್ದು ನೋಡಿದಾಗಿ ಕೊಟ್ಟಿಗೆಯೊಳಗೆ ನೀರು ನುಗ್ಗಿ ಹಸುಗಳ ದೇಹಕ್ಕೆಆವರಿಸತೊಡಗಿತ್ತು. ಎಲ್ಲಾ ಹಸುಗಳ ಹಗ್ಗ ಚಿಚ್ಚಿ ಬಿಟ್ಟಿದ್ದಾರೆ. ನಂತರಕುಟುಂಬದ 6, ಅಕ್ಕಪಕ್ಕದ 12 ಮಂದಿ ಸೇರಿಒಟ್ಟು 18 ಮಂದಿ ಪಕ್ಕದಗುಡ್ಡವನ್ನೇರಿ, ತಾವಿದ್ದ ಪ್ರದೇಶದಿಂದ 5 ಕಿ.ಮೀ ಮೇಲೆ ಹತ್ತಿ ಬಚಾವಾಗಿದ್ದಾರೆ.
ಲೈಟ್‍ಇಲ್ಲದೆಕತ್ತಲೆಯಲ್ಲಿ ಕೈಗೆ ಸಿಗುವ ಬೇಲಿ, ಕಲ್ಲು ಹಿಡಿದುಗುಡ್ಡ ಹತ್ತಿದೆವು, ನಾವು ಬದುಕಲು ಸಾಧ್ಯವಿಲ್ಲ ಎಂಬ ಆಲೋಚನೆಯೂ ಸಹ ಬಂದಿತ್ತು. ಸದ್ಯದೇವರಕೃಪೆಯಿಂದ ಹೇಗೋ ಬಚಾವ್‍ಆದೆವುಎಂದುಗೌರಮ್ಮದುರಂತದ ಭೀಕರತೆ ಬಿಚ್ಚಿಟ್ಟರು.
ಮನೆ, ಅಂಗನವಾಡಿ, ಶಾಲೆ ಎಲ್ಲವೂ ನಿರ್ನಾಮ: ಗುಡ್ಡ ಕುಸಿತ ಮೊದಲಿಗೆಕುಂಜರಿ ಎಂಬ ಗುಡ್ಡದಲ್ಲಿ ಸಂಭವಿಸಿತ್ತು. ನಂತರ ಮುಂಡಕ್ಕೈ, ಚೂರಲ್ ಮಲೆ, ಪಡವಟ್ಟಿಗುಡ್ಡಕ್ಕೂ ಆವರಿಸಿತು. ದುರಂತದಲ್ಲಿ ಮುಂಡಕ್ಕೈನಲ್ಲಿದ್ದ ಬಹುತೇಕ ಮನೆಗಳು ಕೊಚ್ಚಿಹೋಗಿವೆ. ರಾತ್ರಿ ಕಳೆದು ಬೆಳಗಾದ ನಂತರ ನೋಡಿದರೆ ನಮ್ಮ ಮನೆ, ಮಕ್ಕಳು ಓದಿದಅಂಗನವಾಡಿ, ಶಾಲೆ ಎಲ್ಲವೂ ನೀರಿನಲ್ಲಿಕೊಚ್ಚಿ ನಿರ್ನಾಮವಾಗಿದ್ದವು. ಇದನ್ನುಕಂಡುಎದೆಯಲ್ಲಿ ನಡುಕ ಹುಟ್ಟಿಸಿತು” ಎಂದುಕಣ್ಣೀರಿಟ್ಟರು.
ಪಕ್ಕದ ಗುಡ್ಡದಲ್ಲಿ ನಾವು ಇರುವ ಮಾಹಿತಿ ತಿಳಿದ ನಂತರ ಮಂಗಳವಾರ ಸೇನಾ ಹೆಲಿಕಾಪ್ಟರ್‍ನಲ್ಲಿಮೆಪ್ಪಾಡಿಯನಿರಾಶ್ರಿತಕೇಂದ್ರಕ್ಕೆತಂದುಬಿಟ್ಟರು. ಸದ್ಯಚಾಮರಾಜನರಕ್ಕೆಅಣ್ಣಸಿದ್ದರಾಜು, ಅತ್ತಿಗೆಜಯಮ್ಮ ತೆರಳಿದ್ದು, ನಾನುಗುಂಡ್ಲುಪೇಟೆಯ ಕೋಡಹಳ್ಳಿಗ್ರಾಮಕ್ಕೆಬಂದಿದ್ದೇನೆ. ಮಗವಿನೋದ್, ಅಣ್ಣನಮಗಮಹೇಶ್‍ಇಬ್ಬರುಮೆಪ್ಪಾಡಿಯಲ್ಲಿಯೇಇದ್ದಾರೆಎಂದುಗೌರಮ್ಮಮಾಹಿತಿನೀಡಿದರು.