ಕನ್ನಡ ಸಾಹಿತ್ಯದ ಬೇರು ಹಲ್ಮಿಡಿ ಶಾಸನ : ಸೋಮಲಿಂಗ ಗೆಣ್ಣೂರ
ಸಂಜೆವಾಣಿ ವಾರ್ತೆ,
ವಿಜಯಪುರ,ಆ.೫:ಕನ್ನಡ ಭಾಷೆಗೆ ಎರಡು ಸಾವಿರದ ಐದು ನೂರು ವರ್ಷಗಳ ಗಟ್ಟಿಯಾದ ಇತಿಹಾಸವಿದ್ದು ಶ್ರೀ ವಿಜಯನ ಕವಿರಾಜಮಾರ್ಗ ಕನ್ನಡಕ್ಕೆ ದಿಕ್ಸೂಚಿಯಾದರೆ ಹಲ್ಮಿಡಿ ಶಾಸನ ಕನ್ನಡ ಸಾಹಿತ್ಯದ ಬೇರು ಎಂದು ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಅಭಿಪ್ರಾಯ ಪಟ್ಟರು. ಭಾನುವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಜಿಲ್ಲಾ ತಾಲೂಕ, ನಗರ ಘಟಕಗಳ ಸಹಯೋಗದಲ್ಲಿ ಜಚನಿ, ಲಿಂ. ಶಿವಪ್ಪ ಮಲ್ಲಪ್ಪ ಅವರಾದಿ, ಕೊಂಡಗೂಳಿ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು ಆಲಮೇಲ ಕಡಣಿ ಸಾಹಿತ್ಯ ಸಮ್ಮೇಳನದ ದತ್ತಿ ಹೆಸರಿನ ದತ್ತಿ ನಿಧಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತ ಮಾತೃಭಾಷೆಯಲ್ಲಿ ಓದುವ ಬರೆಯುವ ಸಾಮರ್ಥ್ಯ ಬೆಳೆÀಸುವ ಮೂಲಕ ಕನ್ನಡವನ್ನು ಬೆಳಸುವ ಕಾಯಕವಾಗಬೇಕು ಎಂದರು.
ಅಧ್ಯಕ್ಷತೆ ವಹಿಸಿದ ಜಿಲ್ಲಾ ಕೇಂದ್ರ ಕಾರಾಗೃಹದ ಅಧೀಕ್ಷಕ ಡಾ. ಐ.ಜಿ. ಮ್ಯಾಗೇರಿ ಮಾತನಾಡಿ, ಹಲಸಂಗಿ ಗೆಳೆಯರ ಮೂಲಕ ನಾಡಿನ ಶ್ರೇಷ್ಠ ಸಾಹಿತಿಗಳು, ಚಿಂತಕರನ್ನು ಕರೆಯಿಸಿ ಸಾಹಿತ್ಯ ಚಟುವಟಿಕೆಗಳನ್ನು ನಡೆಯಿಸಿ ಕನ್ನಡ ಸಾರಸ್ವತ ಲೋಕವನ್ನು ಶ್ರೀಮಂತಗೊಳಿಸಿದರು. ವಚನಗಳನ್ನು ಸಂಗ್ರಹಿಸಿ, ಪ್ರಕಟಿಸಿ ನಾಡಿಗೆ ಪರಿಚಯಿಸಿದ ಡಾ. ಫ.ಗು. ಹಳಕಟ್ಟಿಯವರು ಪ್ರಾತಸ್ಮರಣೀಯರು ಎಂದರು.
ಸಿಕ್ಯಾಬ್ ಪಪೂ ಕಾಲೇಜಿನ ಉಪನ್ಯಾಸಕ ಯು.ಎನ್. ಕುಂಟೋಜಿ ಜಚನಿ ಕುರಿತು ಮಾತನಾಡಿ, ಜಚನಿಯವರು ಆರು ಸಾವಿರ ವಚನಗಳನ್ನು ರಚಿಸಿದ್ದು, ನಾಲ್ಕು ನೂರು ಗ್ರಂಥಗಳನ್ನು ಪ್ರಕಟಿಸಿ ಒಂದು ವಿಶ್ವವಿದ್ಯಾಲಯ ಮಾಡವ ಕಾರ್ಯವನ್ನು ಏಕವ್ಯಕ್ತಿಯಾಗಿ ಮಾಡಿದ್ದಾರೆ. ಸಾಹಿತ್ಯದ ಮುಖಾಂತರ ಅಸ್ಪೃಶ್ಯತೆ ನಿವಾರಣೆ ಮಾಡಿದ ಶ್ರೇಯಸ್ಸು ಜಚನಿ ಅವರಿಗೆ ಸಲ್ಲುತ್ತದೆ ಎಂದರು.
ಶರಣ ಸಾಹಿತ್ಯದ ಕುರಿತು ಉಪನ್ಯಾಸ ನೀಡಿದ ಶಿಕ್ಷಕಿ ಶಿಲ್ಪಾ ಭಷ್ಮೆ, ಜನವಾಣಿಯನ್ನು ದೇವವಾಣಿಯನ್ನಾಗಿಸಿದ ಕೀರ್ತಿ ಶರಣ ಸಾಹಿತ್ಯಕ್ಕೆ ಸಲ್ಲುತ್ತದೆ ಎಂದರು.
ಮುಖ್ಯ ಅತಿಥಿ ಟಿ.ಎಸ್. ಗೊರವರ ಅಕ್ಷರ ಸಂಗಾತ ಸಾಹಿತ್ಯ ಮಾಸ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿದರು. ವೇದಿಕೆಯಲ್ಲಿ ಅಶೋಕ ಕೋಳಾರಿ, ಅಭಿಷೇಕ ಚಕ್ರವರ್ತಿ, ರಾಜೇಸಾಬ ಶಿವನಗುತ್ತಿ ಉಪಸ್ಥಿತರಿದ್ದರು.
ಮಹ್ಮದಗೌಸ ಹವಾಲ್ದಾರ್ ಸ್ವಾಗತಿಸಿದರು. ಡಾ. ಆನಂದ ಕುಲಕರ್ಣಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಮಮತಾ ಮುಳಸಾವಳಗಿ ನಿರೂಪಿಸಿದರು. ಸಿದ್ದರಾಮಯ್ಯ ಲಕ್ಕುಂಡಿಮಠ ವಂದಿಸಿದರು.
ಕಾರ್ಯಕ್ರಮದಲ್ಲಿ ಕಸಾಪ ಅಧ್ಯಕ್ಷ ಹಾಸಿಂಪೀರ ವಾಲೀಕಾರ, ಡಾ. ಸಂಗಮೇಶ ಮೇತ್ರಿ, ಡಾ. ಮಾಧವ ಗುಡಿ, ಪ್ರೊ. ಸುಭಾಷಚಂದ್ರ ಕನ್ನೂರ, ಕಮಲಾ ಮುರಾಳ, ಶಿಲ್ಪಾ ಹಂಜಿ, ಎಸ್.ಎಲ್. ಇಂಗಳೇಶ್ವರ, ಜಯಶ್ರೀ ಹಿರೇಮಠ, ಜಿ.ಎಸ್. ಬಳ್ಳೂರ, ಟಿ.ಆರ್. ಹಾವಿನಾಳ, ಬಿ.ಎಂ. ಆಜೂರ, ಎಸ್.ಎಂ. ಕಣಬೂರ, ಕೆ.ಎಸ್. ಹಣಮಾಣಿ, ವ್ಹಿ.ಎಸ್. ಖಾಡೆ, ಎನ್.ಆರ್. ಕುಲಕರ್ಣಿ, ಅರುಂಧತಿ ಸಿ, ಮಹಿಬೂಬಸಾಬ ಕೊಲ್ಹಾರ, ಅಹ್ಮದ ವಾಲೀಕಾರ, ಶ್ರೀಕಾಂತ ನಾಡಗೌಡ, ಗಂಗಮ್ಮ ರಡ್ಡಿ, ಲತಾ ಗುಂಡಿ, ಯುವರಾಜ ಚೋಳಖೆ ಮುಂತಾದವರು ಉಪಸ್ಥಿತರಿದ್ದರು.