ಆ.10 ರಿಂದ ರಂಗನಾಥಸ್ವಾಮಿ ಬ್ರಹ್ಮರಥೋತ್ಸವ ಆರಂಭ
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಆ.05: ತಾಲ್ಲೂಕಿನ ಬೂಕನಕೆರೆ ಹೋಬಳಿಯ ಬೆಟ್ಟದ ಹೊಸೂರು ಗ್ರಾಮದಲ್ಲಿರುವ ಬೋಳಾರೆ ಉದ್ಭವ ರಂಗನಾಥ ಸ್ವಾಮಿಯ ಬ್ರಹ್ಮರಥೋತ್ಸವ ಮತ್ತು ಶ್ರಾವಣ ಮಾಸದ ಪೂಜಾ ಕಾರ್ಯಕ್ರಮಗಳು ಆ.10ರಿಂದ ಆರಂಭವಾಗಲಿವೆ ಎಂದು ಬೋಳಾರೆ ರಂಗನಾಥಸ್ವಾಮಿ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಬಿ.ಟಿ.ವೆಂಕಟೇಶ್ ತಿಳಿಸಿದರು.
ಬೋಳಾರೆ ರಂಗನಾಥಸ್ವಾಮಿ ದೇವಸ್ಥಾನದಲ್ಲಿ ನಡೆದ ದೇವಸ್ಥಾನದ ಆಡಳಿತ ಮಂಡಳಿಯ ಪೂರ್ವಭಾವಿ ಸಭೆಯ ನಂತರ ಮಾತನಾಡಿ ಕಡೆಯ ಶ್ರಾವಣ ಶನಿವಾರದಂದು ಬೆಳಿಗ್ಗೆ 10.30ರಿಂದ ಪೂಜಾ ಕೈಂಕರ್ಯಗಳನ್ನು ನಡೆಸಲಾಗುತ್ತಿದೆ. ಆ.10ರಂದು ಅಟ್ಟುಪ್ಪೆ ಗ್ರಾಮಸ್ಥರಿಂದ ಅನ್ನದಾನ,
ಆ.17ರಂದು ಮಡುವಿನ ಕೋಡಿ ಮತ್ತು ಮತ್ತಿಕೆರೆ ಗ್ರಾಮಸ್ಥರು ಅನ್ನ ದಾಸೋಹ ಏರ್ಪಡಿಸುವರು. ಆ.24ರಂದು ಲಕ್ಷಿಸಾಗರ ಮತ್ತು ನೀಲನಹಳ್ಳಿ ಗ್ರಾಮಸ್ಥರು, ಆ.31ರ ಕಡೇ ಶನಿವಾರದಂದು ದೇವಸ್ಥಾನ ಟ್ರಸ್ಟ್ ನೇತೃತ್ವದಲ್ಲಿ ಬ್ರಹ್ಮರಥೋತ್ಸವವನ್ನು ನಡೆಸಲಾಗುವುದು ಎಂದರು. ಬ್ರಹ್ಮರಥೋತ್ಸವದಂದು
ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಶಾಸಕರಾದ ಎಚ್.ಟಿ.ಮಂಜು, ದರ್ಶನ್ ಪುಟ್ಟಣ್ಣಯ್ಯ, ಮಾಜಿ ಶಾಸಕರಾದ ಕೆ.ಬಿ.ಚಂದ್ರಶೇಖರ್, ಬಿ.ಪ್ರಕಾಶ್, ಮಾಜಿ ಸಚಿವರುಗಳಾದ ಕೆ.ಸಿ.ನಾರಾಯಣಗೌಡ, ಸಿ.ಎಸ್.ಪುಟ್ಟರಾಜು ಭಾಗವಹಿಸುವರು ಎಂದು ತಿಳಿಸಿದರು. ಗೌರವಾಧ್ಯಕ್ಷ ಪುಟ್ಟಸ್ವಾಮಿ, ಸುದರ್ಶನ್, ಮಹೇಶ್, ರಂಗಸ್ವಾಮಿ, ಬೆಟ್ಟೇಗೌಡ ವೆಂಕಟರಮಣೇಗೌಡ, ಜವರೇಗೌಡ, ನಾಗಣ್ಣ, ನಾಗೇಗೌಡ, ರಂಗಪ್ಪ, ರೇವಣ್ಣ, ನಾಗರಾಜೇಗೌಡ, ಎಚ್.ಬಿ.ಸುಂದರ್, ಮನೋಹರ್, ಬಲ್ಲೇನಹಳ್ಳಿ ಮಂಜುನಾಥ್ ಹಾಜರಿದ್ದರು.