ವಿದ್ಯಾರ್ಥಿಗಳನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಪರಿಚಯಿಸಿದ್ದೇನೆ: ಎಂ.ಮಲ್ಲಯ್ಯ
ಸಂಜೆವಾಣಿ ವಾರ್ತೆ
ಭಾರತೀನಗರ: ಆ.05: ಹಲವಾರು ಗ್ರಾಮೀಣ ವಿದ್ಯಾರ್ಥಿಗಳನ್ನು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಪರಿಚಯಿಸಿದ್ದೇನೆ.ಇದರಿಂದ ನನ್ನ ಶಿಕ್ಷಕ ವೃತ್ತಿಗೆ ತೃಪ್ತಿ ತಂದಿದೆ ಎಂದು ದೈಹಿಕ ಶಿಕ್ಷಣ ಶಿಕ್ಷಣ ಎಂ.ಮಲ್ಲಯ್ಯ ತಿಳಿಸಿದರು.
ಇಲ್ಲಿಗೆ ಸಮೀಪದ ಕ್ಯಾತಘಟ್ಟ ಸರ್ಕಾರಿ ಪ್ರೌಢಶಾಲೆಯಲ್ಲಿ ಹಳೆಯ ವಿದ್ಯಾರ್ಥಿಗಳ ಬಳಗದ ವತಿಯಿಂದ ಆಯೋಜಿಸಿದ್ದ ಬೀಳ್ಕೊಡುಗೆ ಮತ್ತು ಗುರುವೃಂದದವರಿಗೆ ಅಭಿನಂದನಾ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.
ಕಳೆದ 27 ವರ್ಷಗಳ ಕಾಲ ಇದೇ ಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿ ಸುಧೀರ್ಘವಾಗಿ ಸೇವೆಸಲ್ಲಿಸಿ ನಿವೃತ್ತಿಗೊಳ್ಳುತ್ತಿದ್ದೇನೆ. ನನ್ನ ಶಿಷ್ಯಂದಿರಲ್ಲಿ 9 ಮಂದಿ ದೈಹಿಕ ಶಿಕ್ಷಣ ಶಿಕ್ಷಕರಾಗಿ ಇವಿಧ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.ಜೊತೆಗೆ ಹಲವಾರು ಕ್ರೀಡಾಪಟುಗಳು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಪದಕಗಳನ್ನು ಗಳಿಸಿದ್ದಾರೆ.ಹಾಗಾಗಿ ನನ್ನ ಶಿಕ್ಷಕ ವೃತ್ತಿ ನನಗೆ ಖುಷಿ ತಂದಿದೆ ಎಂದರು.
ನಾನು ಶಿಕ್ಷಕ ವೃತ್ತಿಯಲ್ಲಿ ಸಾಧನೆ ಮಾಡಬೇಕಾದರೆ ಪೆÇೀಷಕರು ಮತ್ತು ಗ್ರಾಮಸ್ಥರ ಸಹಕಾರ ಬಹಳಷ್ಟು ಇತ್ತು.ಜೊತೆಗೆ ನನ್ನ ವೃತ್ತಿ ಬಾಂಧವರು ಸಹ ನನಗೆ ಬೆಂಬಲ ನೀಡುತ್ತಾ ಪೆÇ್ರೀತ್ಸಾಹಿಸುತ್ತಿದ್ದರು.ಇದರಿಂದ ಮಕ್ಕಳನ್ನು ಕ್ರೀಡೆಯಲ್ಲಿ ಪಳುಗಿಸಲು ಸಾಧ್ಯವಾಯಿತು ಎಂದರು.
ಹಳೆಯ ವಿದ್ಯಾರ್ಥಿಗಳು ನನ್ನನ್ನು ಸನ್ಮಾನಿಸಿ ಗೌರವಿಸುತ್ತಿರುವುದು ನಾನೂ ಎಂದಿಗೂ ಮರೆಯು ವಂತಿಲ್ಲ.ಸರ್ಕಾರದ ನಿಯಮ ಪ್ರಕಾರ ನಾನು ಶಾಲೆಯಿಂದ ನಿವೃತ್ತಿಗೊಳ್ಳುತ್ತಿದ್ದೇನೆ ಹೊರತು ನನ್ನ ಮನಸ್ಸು ಶಾಲೆಯಿಂದ ನಿವೃತ್ತಿಗೊಳ್ಳುತ್ತಿಲ್ಲ.ಸದಾ ಶಾಲೆಯ ಅಭಿವೃದ್ದಿಯ ಮತ್ತು ಮಕ್ಕಳ ಮಕ್ಕಳ ಬಗ್ಗೆ ಚಿಂತಿಸುತ್ತಿರುತ್ತದೆ ಎಂದು ಭಾವುಕರಾದರು.
ಕ್ಯಾತಘಟ್ಟ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಹೆಚ್.ಎಂ.ರಮೇಶ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ,ಎಂ. ಮಲ್ಲಯ್ಯ ಅವರ ಕಾರ್ಯ ಪ್ರವೃತ್ತಿ ನೆನೆದು,ಇವರು ಎಲ್ಲರಿಗೂ ಮಾದರಿ, ಇಂತಹ ದೈಹಿಕ ಶಿಕ್ಷಣ ಶಿಕ್ಷಕರು ಎಲ್ಲಾ ಶಾಲೆಗಳಲ್ಲಿ ಇದ್ದರೆ ಶಾಲೆಗೆ ಶೋಭೆ ಇದ್ದಂತೆ ಎಂದು ನುಡಿದರು.
ಎಂ ಮಲ್ಲಯ್ಯ ನವರಿಗೆ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಶಿಕ್ಷಕರ ಹಾಗೂ ವಿವಿಧ ಸಂಘ ಸಂಸ್ಥೆಗಳಿಂದ ಗೌರವ ಸಮರ್ಪಣೆಯ ಮಹಾಪೂರವೇ ಹರಿದು ಬಂದಿರುವುದರಿಂದ ನಮ್ಮ ಶಾಲೆಗೆ ಕೀರ್ತಿ ಪತಾಕೆ ಹಾರಿಸಿದೆ ಎಂದರು.
ಗುರುಗಳಿಗೆ ಅಭಿನಂದನೆ : ಇದೇ ಸಂದರ್ಭದಲ್ಲಿ 1994 ರಿಂದ 2024 ರವರೆಗೂ ಶಾಲೆಯಲ್ಲಿ ಸೇವೆಸಲ್ಲಿಸಿದ ಗುರುಗಳಿಗೆ ಹಳೆಯ ವಿದ್ಯಾರ್ಥಿಗಳು ಅಭಿನಂದಿಸಿ ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ. ಶ್ರೀಕಂಠೇಗೌಡ ಹಾಗೂ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯ ವಿವೇಕಾನಂದರವರು ಭಾಗವಹಿಸಿ ಸನ್ಮಾನಿಸಿ ಎಂ ಮಲ್ಲಯ್ಯನವರ ನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ಅಭಿನಂದಿಸಿದರು.
ವೇದಿಕೆಯಲ್ಲಿ ಕ್ಯಾತಘಟ್ಟ ಸರ್ಕಾರಿ ಪ್ರೌಢಶಾಲೆಯಲ್ಲಿ ಕರ್ತವ್ಯ ನಿರ್ವಹಿಸಿದ ಮತ್ತು ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರುಗಳಾದ ಈರೇಗೌಡ, ಹೆಚ್ ವೀಣಾ, ವಿ ಮಾರುತಿ, ಶಿವಕುಮಾರಸ್ವಾಮಿ, ವೈ ಎಸ್ ಬಸವರಾಜು, ಚಿಕ್ಕಬೋರಯ್ಯ, ನಾಗೇಶ್ ಮತ್ತು ಕೆ.ಟಿ.ಸುನೀತಾ, ಪುಟ್ಟರಾಮ ರಾಜೇ ಅರಸ್, ಸಿ ಕೆ ರಾಜಣ್ಣ, ಎಂ ಕೃಷ್ಣಮೂರ್ತಿ ಮತ್ತು ಹೆಚ್ ಡಿ ಸುಭಾಷ್ ಚಂದ್ರ, ಪಿ. ಸಿದ್ದರಾಜು, ಅಪ್ಪಾಜಿಗೌಡ, ಪುಟ್ಟಸ್ವಾಮಿ ಮತ್ತು ವರಲಕ್ಷಿ ಮತ್ತು ಶಾಂತಮ್ಮ ಉಪಸ್ಥಿತರಿದ್ದರು.