ಸಿಎಂ ವಿರುದ್ಧ ಷಡ್ಯಂತ್ರ ಖಂಡಿಸಿ ಆ.೬ರಂದು ಪ್ರತಿಭಟನೆ
ಸಂಜೆವಾಣಿ ವಾರ್ತೆ,
ವಿಜಯಪುರ, ಆ.೫:ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ದ ಆಧಾರ ರಹಿತ ಆಪಾದನೆ ಮಾಡಿ ಅವರ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಷಡ್ಯಂತ್ರ ಮಾಡುತ್ತಿರುವ ಶಕ್ತಿಗಳ ವಿರುದ್ದ ಆ.೬ ರಂದು ಬೃಹತ್ ಪ್ರತಿಭಟನಾ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಕೆಪಿಸಿಸಿ ಸದಸ್ಯ ಅಬ್ದುಲ್ ಹಮೀದ್ ಮುಶ್ರೀಫ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,
ಸಾಮಾಜಿಕ ನ್ಯಾಯದ ತತ್ವವನ್ನು ಆಡಳಿತದಲ್ಲಿ ಅಳವಡಿಸಿಕೊಂಡು ಮುನ್ನಡೆದು ಎಲ್ಲ ವರ್ಗಗಳ ಪ್ರಗತಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶ್ರಮಿಸುತ್ತಿದ್ದಾರೆ. ಆದರೆ ಅವರ ವಿರೋಧಿಗಳು ಅವರ ಹೆಸರಿಗೆ ಮಸಿ ಬಳಿಯುವ ಪ್ರಯತ್ನ ಮಾಡುತ್ತಿವೆ ಎಂದರು.
ಈ ಷಡ್ಯಂತ್ರದ ವಿರುದ್ದ ದಾ.೬ ರಂದು ಬೆಳಗ್ಗೆ ೧೦ ಗಂಟೆಗೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಪ್ರತಿಭಟನೆಯಲ್ಲಿ ೧೦-೧೫ ಸಾವಿರ ಜನರು ಭಾಗವಹಿಸಲಿದ್ದಾರೆ.
ಜಿಲ್ಲೆಯ ಎಲ್ಲ ಕಾಂಗ್ರೆಸ್ ಶಾಸಕರು, ವಿಧಾನ ಪರಿಷತ್ ಸದಸ್ಯರು, ಕ್ಷೇತ್ರದ ಜನ ಭಾಗವಹಿಸಲಿದ್ದಾರೆ ಎಂದರು.
ಸಿದ್ದರಾಮಯ್ಯ ವಿರುದ್ದ ಹೊಟ್ಟೆಯುರಿ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜನಪರ ಕಾಳಜಿ, ಜನಪ್ರಿಯತೆ ಬಗ್ಗೆ ಜೆಡಿಎಸ್ ಹಾಗೂ ಬಿಜೆಪಿಯವರಿಗೆ ಹೊಟ್ಟೆಯುರಿ. ಹೀಗಾಗಿ ಅವರ ಹೆಸರಿಗೆ ಮಸಿ ಬಳಿಯುವ ಪ್ರಯತ್ನ ನಡೆಯುತ್ತಿದೆ ಎಂದು ಅಹಿಂದ ಮುಖಂಡ ಎಸ್.ಎಂ. ಪಾಟೀಲ ಗಣಿಹಾರ ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಪಾದಯಾತ್ರೆಯಲ್ಲಿದ್ದವರೇ ಮಹಾನ್ ಭ್ರಷ್ಟಾಚಾರಿಗಳಿದ್ದಾರೆ. ಇವರೇ ಭ್ರಷ್ಟಾಚಾರದ ಪಿತಮಹರಾಗಿದ್ದಾರೆ. ವಿಜಯೇಂದ್ರ ಅದರ ನೇತೃತ್ವ ವಹಿಸಿದ್ದಾರೆ. ಜೆಡಿಎಸ್ ನವರು ಒತ್ತಾಯ ಮಾಡಿ ಹೋರಾಟ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಮುಡಾದಲ್ಲಿ ನಡೆದ ಹಗರಣ ವಾಸ್ತವದಲ್ಲಿ ಬಿಜೆಪಿ ಸರಕಾರದಲ್ಲಿ ನಡೆದ ಘಟನೆ. ಇದರಲ್ಲಿ ಸಿದ್ದರಾಮಯ್ಯ ಹಾಗೂ ಅದಕ್ಕೂ ಸಂಬAಧಿಸಿದ್ದಲ್ಲ ಎಂದರು.
ದೇವೇಗೌಡರ ಕುಟುಂಬದ ಬಗ್ಗೆ ಯಾರೂ ಚಕಾರ ಎತ್ತುತ್ತಿಲ್ಲ. ಭೂಹಗರಣ ಮಾಡಿದ ಮೊದಲ ವ್ಯಕ್ತಿಯೇ ಎಚ್. ಡಿ.ಕುಮಾರಸ್ವಾಮಿ. ಆದರೆ ಅವರ ಬಗ್ಗೆ ಯಾರೂ ಮಾತನಾಡುತ್ತಿಲ್ಲ. ಆದರೆ ಅವರ ಅಧಿಕಾರಾವಧಿಯಲ್ಲಿ ನಡೆದ ಹಗರಣ ಬಗ್ಗೆ ಚಕಾರ ಎತ್ತುತ್ತಿಲ್ಲ ಎಂದು ದೂರಿದರು.
ಬೊಮ್ಮಾಯಿ ಅವಧಿಯಲ್ಲಿ ಭ್ರಷ್ಟಾಚಾರ ಮಾಡಿದ್ದಾರೆ. ಇದನ್ನು ಸಾಬೀತುಪಡಿಸಬೇಕು ಎಂದರು. ಇವರ ಹಗರಣ ಬಯಲಿಗೆಳೆಯಬೇಕು ಎಂದರು.
ಮುಖ್ಯಮAತ್ರಿ ಸಿದ್ದರಾಮಯ್ಯ ಇಡೀ ರಾಷ್ಟ್ರದಲ್ಲಿ ಮಾದರಿ ಸಿಎಂ ಆಗಿದ್ದಾರೆ.ತಮ್ಮ ಸಮರ್ಥ ನಾಯಕತ್ವವನ್ನು ಬಿಜೆಪಿಯವರಿಗೆ ಸಹಿಸಿಕೊಳ್ಳಲಾಗುತ್ತಿಲ್ಲ ಎಂದರು.
ಅಬ್ದುಲ್‌ರಜಾಕ್ ಹೊರ್ತಿ ಮಾತನಾಡಿ, ಆ. ೬ ರಂದು ಸಿದ್ದೇಶ್ವರ ದೇವಾಲಯದಿಂದ ಹೋರಾಟ ಆರಂಭಗೊಳ್ಳಲಿದೆ,
ಜಿಲ್ಲೆಯ ಎಲ್ಲ ಜನರು ಭಾಗವಹಿಸಿದ್ದಾರೆ.
ಮೋದಿ ಸುಳ್ಳಿನ ಸರದಾರ. ಆದರೆ ಸಿದ್ದರಾಮಯ್ಯ ಅವರು ಕಳಂಕಿತ ವ್ಯಕ್ತಿಯಲ್ಲ,
ತನಿಖೆಯಲ್ಲಿ ಸಿದ್ದರಾಮಯ್ಯ ಗೆಲ್ಲುತ್ತಾರೆ ಎಂದರು.
ದಲಿತ ಮುಖಂಡ ಅಡಿವೆಪ್ಪ ಸಾಲಗಲ್ ಮಾತನಾಡಿ, ಸಂವಿಧಾನದ ಆಶಯ ಈಡೇರಿಸುವಲ್ಲಿ ಸಿದ್ದರಾಮಯ್ಯ ಮುಂಚೂಣಿಯಲ್ಲಿದ್ದಾರೆ. ಎಲ್ಲ ವರ್ಗದ ಜನರಿಗೆ ಸಾಮಾಜಿಕ ನ್ಯಾಯದ ಹರಿಕಾರರಾಗಿದ್ದಾರೆ. ಅವರ ಮೇಲಿನ ಆಪಾದನೆಗಳು ಆಪಾದನೆಯೇ ಅಲ್ಲ. ಅವರ ಮೇಲಿನ ಆಪಾದನೆಗಳನ್ನು ಬಿಜೆಪಿಯವರೇ ನಂಬುತ್ತಿಲ್ಲ ಎಂದರು.
ಇನ್ನೊಂದೆಡೆ ಬಿಜೆಪಿಯವರು ದಲಿತರನ್ನು ಎತ್ತಿ ಕಟ್ಟುವ ಕೆಲಸ ನಡೆಸಿದ್ದಾರೆ. ಆದರೆ ಇದಕ್ಕೆ ದಲಿತರು ಗಂಭೀರವಾಗಿ ಪರಿಗಣಿಸಬಾರದು ಎಂದರು. ಇಲ್ಲವಾದಲ್ಲಿ ರಾಜ್ಯಪಾಲರ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಹೇಳಿದರು.
ಶಿವಾಜಿ ಮೆಟಗಾರ ಮಾತನಾಡಿ, ಸಿದ್ದರಾಮಯ್ಯ ಅವರು ಒಂದೇ ವರ್ಗದ ನಾಯಕರಲ್ಲ. ಅವರನ್ನು ಎಲ್ಲರೂ ಇಷ್ಟಪಡುತ್ತಿದ್ದಾರೆ. ಕೇಂದ್ರ ಸರಕಾರ ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದರು.
ಸತ್ಯ ಹರಿಶ್ಚಂದ್ರ ಸಿದ್ದರಾಮಯ್ಯ
ಅವರನ್ನು ಅಳುಗಾಡಿಸಲು ಸಾಧ್ಯವಿಲ್ಲ. ಈ ವಿಷಯದಲ್ಲಿ ಬಿಜೆಪಿಗೆ ಅವಮಾನ ಆಗುತ್ತದೆ ಎಂದರು.
ಜಿಲ್ಲಾ ಕಾಂಗ್ರೆಸ್ ಸಮಿತಿ, ಜಿಲ್ಲಾ ಅಹಿಂದ ಸಂಘಟನೆ ಹಾಗೂ ಸಿದ್ದರಾಮಯ್ಯ ಅಭಿಮಾನಿ ಬಳಗದ ಮುಖಂಡರಾದ
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಲೋಣಿ, ಮುಖಂಡರಾದ ಹಮೀದ್ ಮುಶ್ರೀಫ್, ಎಸ್. ಎಂ ಪಾಟೀಲ ಗಣಿಹಾರ, ಸೋಮನಾಥ ಕಳ್ಳಿಮನಿ, ಸುಭಾಸ ಛಾಯಾಗೋಳ, ಅಬ್ದುಲ್ ರಜಾಕ್ ಹೊರ್ತಿ, ಎಂ. ಸಿ.ಮುಲ್ಲಾ, ಡಾ. ಗಂಗಾಧರ ಸಂಬಣ್ಣಿ, ಡಾ. ರವಿಕುಮಾರ ಬಿರಾದಾರ, ರಾಜೇಶ್ವರಿ ಯರನಾಳ,
ಅಡಿವೆಪ್ಪ ಸಾಲಗಲ್, ನಾಗರಾಜ ಲಂಬು, ಫಯಾಜ್ ಕಲಾದಗಿ, ಶಿವಾಜಿ ಮೆಟಗಾರ, ರವಿ ಕಿತ್ತೂರ, ರಾಜು ತೊರವಿ, ಅಕ್ರಂ ಮಾಶ್ಯಾಳಕರ, ಮಹಾದೇವ ರಾವಜಿ, ಮಲ್ಲು ಬಿದರಿ ಉಪಸ್ಥಿತರಿದ್ದರು.