ನೌಕರರ ಮೂರು ಪ್ರಮುಖ ಬೇಡಿಕೆ ಈಡೇರಿಕೆಗೆ ಸರ್ಕಾರದ ಮೇಲೆ ಒತ್ತಡ: ರಾಜ್ಯಾಧ್ಯಕ್ಷ ಷಡಕ್ಷರಿ
ಸಂಜೆವಾಣಿ ವಾರ್ತೆ,
ವಿಜಯಪುರ,ಆ.೫: ರಾಜ್ಯ ಸರ್ಕಾರಿ ನೌಕರರ ಪ್ರಮುಖ ಮೂರು ಬೇಡಿಕೆಗಳಾದ ಹೊಸ ಪಿಂಚಣಿ ಯೋಜನೆ (ಎನ್ಪಿಎಸ್) ರದ್ದು ಮಾಡಿ ಹಳೆಯ ಪಿಂಚಣಿ ಯೋಜನೆ (ಓಪಿಎಸ್) ಜಾರಿ, ನೌಕರರ ಕುಟುಂಬಗಳಿಗೆ ಉಚಿತ ಆರೋಗ್ಯ ಯೋಜನೆ, ಪದವಿಧರ ಪ್ರಾಥಮಿಕ ಶಾಲಾ ಶಿಕ್ಷಕರ ಸಿ ಆಂಡ್ ಆರ್ ತಿದ್ದುಪಡಿಗೆ ಸರ್ಕಾರದ ಮೇಲೆ ಒತ್ತಡ ಹೇರಲಾಗುವದು ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಸಿ.ಎಸ್.ಷಡಕ್ಷರಿ ಹೇಳಿದರು.
ನಗರದ ಕಂದಗಲ್ ಹನುಮಂತರಾಯ ರಂಗಮAದಿರದಲ್ಲಿ ಶನಿವಾರ ಸಂಜೆ ನಡೆದ ಸರ್ಕಾರಿ ನೌಕರರ ಮಕ್ಕಳ ಪ್ರತಿಭಾ ಪುರಸ್ಕಾರ ಹಾಗೂ ಅಭಿನಂದನಾ ಸಮಾರಂಭ ಮತ್ತು ನೌಕರರಿಗೆ ಅನುಪಮಾ ಸೇವಾ ಪ್ರಶಸ್ತಿ ವಿತರಿಸಿ ಅವರು ಮಾತನಾಡಿದರು.
ಈಗಾಗಲೇ ಹಳೆಯ ಪಿಂಚಣಿ ಮರು ಜಾರಿ ಮಾಡಿದ ರಾಜ್ಯಗಳ ಸಮಗ್ರ ವರದಿ ತಂದು ಸಂಪುಟ ಸಭೆಯಲ್ಲಿ ಇಟ್ಟು ಇಡೇರಿಸುವ ಭರವಸೆಯನ್ನು ಸರ್ಕಾರ ನೀಡಿದೆ. ಆರೋಗ್ಯ ಸಂಜೀವಿನಿ ಯೋಜನೆಗೆ ಒಂದು ಸಾವಿರ ಕೋಟಿ ಹಣ ಕ್ರೋಢೀಕರಿಸಿ ಜಾರಿ ಮಾಡುವ ಭರವಸೆ ನೀಡಿದೆ. ಶಿಕ್ಷಕರ ಸಿ ಆಂಡ್ ಆರ್ ತಿದ್ದುಪಡಿಗೆ ಸಂಪನ್ಮೂಲ ವ್ಯಕ್ತಿಗಳಿಂದ ಸೆಮಿನಾರ ನಡೆಸಿ ಸರ್ಕಾರಕ್ಕೆ ಮನವರಿಕೆ ಮಾಡಿ ಬೇಡಿಕೆ ಈಡೇರಿಸಿಕೊಳ್ಳಲಾಗುವುದು ಎಂದರು.
ಸರ್ಕಾರದ ಜೊತೆ ಯಾವುದೇ ಸಂಘರ್ಷ ಮಾಡಿಕೊಳ್ಳದೆ ಪ್ರೀತಿ ವಿಶ್ವಾಸ ಅಭಿಮಾನದಿಂದ ಒತ್ತಡ ಹೇರಿ ನೌಕರರ ಬೇಡಿಕೆಗಳನ್ನು ಈಡೇರಿಸಿಕೊಳ್ಳಲಾಗುವುದು. ಕೇಂದ್ರದಲ್ಲಿ ೨೦೨೬ ಕ್ಕೆ ವೇತನ ಆಯೋಗ ಜಾರಿಯಾಗುವದು. ಏಳನೇ ವೇತನ ಆಯೋಗದ ವರದಿಯಲ್ಲಿ ರಾಜ್ಯ ಸರ್ಕಾರಿ ನೌಕರರಿಗೂ ಕೇಂದ್ರ ಮಾದರಿ ವೇತನ ಜಾರಿ ಮಾಡಬೇಕು ಎಂದು ಸ್ಪಸ್ಟವಾಗಿ ಬರೆಯಲಾಗಿದ್ದು, ೨೦೨೬ರ ನಂತರದಲ್ಲಿ ಕೇಂದ್ರ ಮಾದರಿ ವೇತನ ಪಡೆಯೋಣ ಎಂದರು.
ಗುರಿಯನ್ನು ಮುಟ್ಟಲು ಸತತ ಪ್ರಯತ್ನದಿಂದ ಶ್ರಮ ಪಡುತ್ತಾ ಮುಂದಿನ ಜೀವನ ಉಜ್ಬಲಗೊಳಿಸಿಕೊಂಡು ನಿಮ್ಮ ತಂದೆ ತಾಯಿಯನ್ನು ಚನ್ನಾಗಿ ನೋಡಿಕೊಳ್ಳಿ ಎಂದು ಮಕ್ಕಳಿಗೆ ಕಿವಿ ಮಾತು ಹೇಳಿದರು. ಇಡೀ ರಾಜ್ಯದಲ್ಲಿ ಪ್ರತಿಭಾ ಪುರಸ್ಕಾರಕ್ಕೆ ಹೆಚ್ಚು ಆಯ್ಕೆಯಾದ ಟಾಪ ೫ ರಲ್ಲಿ ಈ ವಿಜಯಪುರ ಮಕ್ಕಳ ಸಾಧನೆ ಆಗಿದೆ ಎಂದರು.
ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಮಾತನಾಡಿ, ಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ತರುವ ಕಾರ್ಯ ಮಾಡುವೆ. ಮಕ್ಕಳಷ್ಟು ದೊಡ್ಡ ಸಂಪತ್ತು ಜಗತ್ತಿನಲ್ಲಿ ಯಾವುದು ಇಲ್ಲ. ೦ ರಿಂದ ೧೮ ವಯಸ್ಸಿನ ಎರಡು ಕೋಟಿಗೂ ಹೆಚ್ಚು ಮಕ್ಕಳ ಸೇವೆ ಮಾಡುವ ದೇಶದ ಏಕೈಕ ಅಕಾಡೆಮಿಯಾಗಿದೆ. ನೊಂದವರ, ಅಸಹಾಯಕರ ಮಕ್ಕಳ ಮೊಗದಲ್ಲಿ ಮಂದಹಾಸ ಮೂಡಿದರೆ ಅದೇ ನನಗೆ ಸಾರ್ಥಕತೆ. ನಿಮ್ಮ ಜನ್ಮ ದಿನ ಇದ್ದಾಗ ಬಾಲ ಮಂದಿರದಲ್ಲಿ ಆಚರಿಸಿ ಆ ಮಕ್ಕಳಿಗೆ ಮಂದಹಾಸ ತುಂಬಿ ಆ ಮಕ್ಕಳ ಆತ್ಮವಿಶ್ವಾಸ ಹೆಚ್ಚಿಸಿ ಎಂದರು.
ಜಿಲ್ಲಾಧಿಕಾರಿ ಟಿ.ಭೂಬಾಲನ ಮಾತನಾಡಿ, ಈಗ ಕಷ್ಟಪಟ್ಟರೆ ಮುಂದಿನ ಜೀವನ ಸುಖವಾಗಿರುವುದು. ನೀವು ಗುರಿಯನ್ನು ಹೊಂದಿರಬೇಕು. ಆ ಗುರಿ ತಲುಪುವ ನಿಟ್ಟಿನಲ್ಲಿ ನೀವು ಶ್ರಮ ಪಡಬೇಕು. ನಿಮ್ಮ ಕನಸು ನನಸಾಗಲಿ ಎಂದು ಮಕ್ಕಳಿಗೆ ಶುಭ ಹಾರೈಸಿ ನೌಕರರು ಸಮಾಜಕ್ಕೆ ಉತ್ತಮ ಸೇವೆ ಮಾಡುತ್ತಿದ್ದಾರೆ. ಅಂತವರ ಮಕ್ಕಳು ಪ್ರತಿಭಾ ಪುರಸ್ಕಾರ ಪಡೆಯುತ್ತಿರುವದು ಹೆಮ್ಮೆ ಎಂದರು.
ನೌಕರ ಸಂಘದ ಜಿಲ್ಲಾಧ್ಯಕ್ಷ ಸುರೇಶ ಶೇಡಶ್ಯಾಳ ಪ್ರಾಸ್ತಾವಿಕವಾಗಿ ಮಾತನಾಡಿ, ಗ್ಯಾರಂಟಿ ಯೋಜನೆಗಳ ಒತ್ತಡದಲ್ಲಿಯೂ ಸರ್ಕಾರವು ನೌಕರರಿಗೆ ಯಥಾವತ್ತಾಗಿ ಏಳನೇ ವೇತನ ಜಾರಿ ಮಾಡಿದೆ. ಸಂಘದ ಪ್ರಯತ್ನದಿಂದ ವೇತನ ಆಯೋಗ ದೊರೆಯಿತು ಎಂದರು.
ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಬಳ್ಳಾರಿ, ಹಿರಿಯ ಉಪಾಧ್ಯಕ್ಷ ಬಸವರಾಜು, ಡಿಡಿಪಿಯು ಚಂದ್ರಶೇಖರ ಹೊಸಮನಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಸೋನಾವಣೆ ಮಾತನಾಡಿದರು.
ಪಿಯುಸಿಯಲ್ಲಿ ರಾಜ್ಯಕ್ಕೆ ಮೊದಲ ಸ್ಥಾನ ಪಡೆದ ವೇದಾಂತ ನಾವಿ, ಎಸ್ಸೆಸ್ಸೆಲ್ಸಿಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಪ್ರತಿಭಾ ನರೂಟಿ, ನೌಕರರಿಗೆ ಅನುಪಮಾ ಸೇವಾ ಪ್ರಶಸ್ತಿ, ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ, ಜುಬೇರ ಕೆರೂರ, ರಾಜಶೇಖರ ದೈವಾಡಿ, ವಿಜಯಕುಮಾರ ಹತ್ತಿ, ಗಂಗಾಧರ ಜೇವೂರ, ವಿಶ್ವನಾಥ ಬೆಳೆನ್ನವರ, ಸಿದ್ದಣ್ಣ ಸಕ್ರಿ, ಶ್ರೀನಿವಾಸ ತಿಮ್ಮಿಗೌಡ, ಎಂ.ವಿ.ರುದ್ರಪ್ಪ, ಸಿದ್ರಾಮಣ್ಣ, ಬಿ.ಟಿ.ಗೌಡರ, ಶಿವಾನಂದ ಮಂಗನವರ, ಅಶೋಕ ತೆಲ್ಲೂರ, ಎಸ್.ಆರ್. ಪಾಟೀಲ, ಜಗದೀಶ ಬೋಳಸೂರ, ಚನ್ನಯ್ಯ ಮಠಪತಿ, ರವಿ ಬಿರಾದಾರ, ಎಂ.ಜೆ.ಯಕAಚಿ, ರಮೇಶ ನಿಡೋಣಿ, ಪ್ರಶಾಂತ ಪೂಜಾರಿ, ಚಂದ್ರಶೇಖರ ಹೊಸಮನಿ, ನೀಜು ಮೇಲಿನಕೇರಿ, ರವಿ ಉಗಾರ, ವಾಸೀಂ ಚಟ್ಟರಕಿ, ಕಟ್ಟಿಮನಿ, ಪಾಂಡು ಇದ್ದರು.