ಸಾಹಿತ್ಯ, ಸಂಗೀತ ಹಾಗೂ ರಂಗಭೂಮಿಗೆ ಜಿಲ್ಲೆಯ ಕೊಡುಗೆ ಅಪಾರ: ಡಾ ಸಂಗಮೇಶ ಮೇತ್ರಿ
ಸಂಜೆವಾಣಿ ವಾರ್ತೆ,
ವಿಜಯಪುರ,ಆ.೫:ಸಾಹಿತ್ಯ, ಸಂಗೀತ ಹಾಗೂ ರಂಗಭೂಮಿಗೆ ಜಿಲ್ಲೆಯ ಕೊಡುಗೆ ಅಪಾರ. ಸಾಹಿತ್ಯ ರಚಿಸುವುದÀರ ಮೂಲಕ ರಾಜ್ಯ ಮತ್ತು ಜಿಲ್ಲಾ ಮಟ್ಟದ ದತ್ತಿ ಪ್ರಶಸ್ತಿಗಳನ್ನು ತಮ್ಮ ಮುಡಿಗೇರಿಸಿಕೊಂಡ ಸಾಧಕರು ಅಭಿನಂದನಾರ್ಹರು ಎಂದು ಜಿಲ್ಲಾ ಕಸಾಪ ಗೌರವ ಕೋಶಾಧ್ಯಕ್ಷ ಡಾ. ಸಂಗಮೇಶ ಮೇತ್ರಿ ಅಭಿಪ್ರಾಯ ವ್ಯಕ್ತಪಡಿಸಿದರು.
ಭಾನುವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸಭಾಂಗಣದಲ್ಲಿ ಹಮ್ಮಿಕೊಂಡ ೨೦೨೩- ೨೪ ನೇ ಸಾಲಿನ ವಿವಿಧ ಕ್ಷೇತ್ರಗಳ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿ, ಪ್ರಕಟಣೆಯ ಕಷ್ಟಕಾಲದಲ್ಲಿಯೂ ಇಂತಹ ಮೌಲಿಕ ಕೃತಿಗಳನ್ನು ರಚಿಸಿರುವ ಲೇಖಕರು ಅಭಿನಂದನೆಗೆ ಅರ್ಹರಾಗಿದ್ದಾರೆ, ಅವರಿಂದ ಇನ್ನಷ್ಟು ಶ್ರೇಷ್ಟ ಕೃತಿಗಳು ಹೊರಬರಲಿ ಎಂದರು.
ಕಾರ್ಯಕ್ರಮ ಉದ್ದೇಶಿಸಿ ಡಾ. ಮಾಧವ ಗುಡಿ ಮಾತನಾಡಿ, ಮೂವತ್ತಕ್ಕೂ ಹೆಚ್ಚು ಕೃತಿಗಳು ಪ್ರಶಸ್ತಿಗಾಗಿ ಬಂದಿದ್ದು ಅವುಗಳಲ್ಲಿ , ಅತ್ಯುತ್ತಮವಾದ ಏಳು ಕೃತಿಗಳು ಆಯ್ಕೆಯಾಗಿದ್ದು, ಕಾದಂಬರಿ, ಕವನ ಸಂಕಲನ, ಸಂಶೋಧನಾ ಕೃತಿ ಹೀಗೆ ಹಲವಾರು ಕೃತಿಗಳಲ್ಲಿ ಗೊರುಚ ರಾಜ್ಯ ದತ್ತಿ ಪ್ರಶಸ್ತಿ ಡಾ. ಸುಜಾತಾ ಚಲವಾದಿ ಅವರ ಬುದ್ಧ ಇದ್ದನಲ್ಲಿ ಕೃತಿಗೆ ಲಭಿಸಿರುವದು ಬಹಳ ಸಂತೋಷ. ರಾಜ್ಯ ಮಟ್ಟದ ಪ್ರಶಸ್ತಿ ಪಡೆದು ಜಿಲ್ಲೆಗೆ ಹೆಸರು ತಂದ ನಾಟಕ ಅಕಾಡಮಿ ಮಾಜಿ ಅಧ್ಯಕ್ಷ ಎಲ್.ಬಿ. ಶೇಖ ಅವರು ಗುಬ್ಬಿ ವೀರಣ್ಣ ರಾಜ್ಯ ಪ್ರಶಸ್ತಿ ಪುರಸ್ಕೃತರು. ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷ ಸಂಗಮೇಶ ಚೂರಿ ಅವರು ಪಾಟೀಲ ಪುಟ್ಟಪ್ಪ ಸ್ಮಾರಕ ಮಾಧ್ಯಮ ರಾಜ್ಯ ಪ್ರಶಸ್ತಿ ಪುರಸ್ಕೃತರು ಅವರು ಪ್ರಶಸ್ತಿ ಪಡೆದು ನಮ್ಮ ಜಿಲ್ಲೆಗೆ ಕೀರ್ತಿ ತಂದದ್ದಕ್ಕಾಗಿ ಗೌರವಿಸುತ್ತಿರುವದು ಕಸಾಪಕ್ಕೆ ಹೆಮ್ಮೆ ತರುವ ವಿಷಯವಾಗಿದೆ ಎಂದರು.
ಕೆ.ಎಸ್. ಸೋಮಾಪೂರ ಅವರು ರಚಿಸಿದ ಬಯಕೆಗಳ ಬೆನ್ನೇರಿ ಕಾದಂಬರಿಗೆ ಕಡಣಿ ಸಾಹಿತ್ಯ ಸಮ್ಮೇಳನದ ದತ್ತಿ ಪ್ರಶಸ್ತಿ ಅರ್ಹರಿಗೆ ದೊರೆತಿರುವದು ಹೆಮ್ಮೆಯಿದೆ ಎಂದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕೊಡಮಾಡುವ ಜಿಲ್ಲಾ ಪ್ರಶಸ್ತಿಗಳನ್ನು ಮಲ್ಲಿಕಾರ್ಜುನ ಜೇವರಗಿ ಬರೆದ ಮಹಾಕವಿ ರಾಘವಾಂಕನ “ಸಿದ್ದರಾಮ ಚಾರಿತ್ರ‍್ಯದ ಸಾಂಸ್ಕೃತಿಕ ಅಧ್ಯಯನ ” ಕೃತಿಗೆ, ವಿದ್ಯಾ ಕಲ್ಯಾಣಶೆಟ್ಟಿ ಅವರು ಬರೆದ ” ಕಾವ್ಯ ಕನ್ನಿಕೆ ” ಕವನ ಸಂಕಲನ “ಕೃತಿಗೆ, ಪರವೀನಬಾನು ಶೇಖ ಬರೆದ “ಬಾಲಮಂದಾರ” ಕೃತಿ. ಮಕ್ಕಳ ಕವನ ಸಂಕಲನಕ್ಕೆ, ರಾಚು ಕೊಪ್ಪ .”ಬರೆದ ಸೀಸದ ಕಡ್ಡಿ” ಕವನ ಸಂಕಲನಕ್ಕೆ, ಎಸ್.ಎಸ್. ಸಾತಿಹಾಳ. ಬರೆದ “ಏನು ಚಂದವೋ” ಕೃತಿಗೆ ಜಿಲ್ಲಾ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಪ್ರಶಸ್ತಿ ಪಡೆದ ಎಲ್ಲರಿಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ ಹಾಗೂ ಪದಾಧಿಕಾರಿಗಳು ಅಭಿನಂದಿಸಿದರು.
ಸಮಾರಂಭದಲ್ಲಿ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ , ಜಿಲ್ಲಾ ಕೇಂದ್ರ ಕಾರಾಗೃಹದ ಅಧೀಕ್ಷಕ ಡಾ. ಐ.ಜಿ. ಮ್ಯಾಗೇರಿ, ಅಶೋಕ ಕೋಲಕಾರಿ, ಅಭಿಷೇಕ ಚಕ್ರವರ್ತಿ, ಸುಭಾಷ ಕನ್ನೂರ, ಡಾ. ಆನಂದ ಕುಲಕರ್ಣಿ, ಜಯಶ್ರೀ ಹಿರೇಮಠ, ಕಮಲಾ ಮುರಾಳ, ಶಿಲ್ಪಾ ಭಸ್ಮೆ, ಮಮತಾ ಮಳಸಾವಳಗಿ, ರಾಜು ಅಂಗಡಿ, ರಾ.ಶಿ. ವಾಡೇದ, ರೂಪಾ ರಜಪೂತ, ಎಂ.ಎಸ್. ಚೌಧರಿ, ಗೀತಾ ಕುಲಕರ್ಣಿ, ಡಾ. ಸುರೇಶ ಕಾಗಲಕರ, ಶಶಿಕಲಾ ನಾಯ್ಕೋಡಿ, ಜಿ.ಎಸ್. ಬಳ್ಳೂರ, ಸಂತೋಷ ಕಲ್ಯಾಣಶೆಟ್ಟಿ, ಶ್ರೀಧರ ಹೆಗಡೆ, ಶ್ರೀನಿವಾಸ ಹುನಗುಂದ, ಶುಭಾನಾ ಗದ್ಯಾಳ, ಸಿದ್ರಾಮಯ್ಯ ಲಕ್ಕುಂಡಿಮಠ, ಅಶೋಕ ಸಿರಗುಪ್ಪಿ, ಸುಕನ್ಯಾ ದೊಡಮನಿ, ಸಿದ್ಧಾರೂಢ ಕಟ್ಟಿಮನಿ, ಎ.ಡಿ. ಮುಲ್ಲಾ ಮುಂತಾದವರು ಉಪಸ್ಥಿತರಿದ್ದರು.
ಇದೇ ವೇಳೆ ಸಿದ್ಧು ಮೇಲಿನಮನಿ ಹಾಗೂ ಮೆಹತಾಬ್ ಕಾಗವಾಡ ತತ್ವ ಪದಗಳನ್ನು ಹಾಡಿ ರಂಜಿಸಿದರು.