ಮಳೆಗಾಲದಲ್ಲಿ ಒಂಟಿ ಮರದ ಕೆಳಗೆ ನಿಲ್ಲದೆ ಸಿಡಿಲಿನಿಂದ ರಕ್ಷಿಸಿಕೊಳ್ಳಿ.
ಸಂಜೆವಾಣಿ ವಾರ್ತೆ
ಚಿತ್ರದುರ್ಗ.5  ಮಳೆಗಾಲದಲ್ಲಿ ಹೆಚ್ಚು ಗುಡುಗು, ಸಿಡಿಲು ಸಂಭವಿಸುವ ಸಂದರ್ಭದಲ್ಲಿ, ರೈತರು, ಕೂಲಿ ಕಾರ್ಮಿಕರು, ಗುಡ್ಡಗಾಡಿನಲ್ಲಿ ವಾಸಿಸುವರು, ಹೆಚ್ಚು ಸಿಡಿಲು ಬಡಿದು ಸಾಯುತ್ತಿರುವುದು ಆತಂಕಕಾರಿಯಾಗಿದೆ. ಅವರನ್ನು ಈ ಪ್ರಕೃತಿ ವಿಕೋಪದಿಂದ ರಕ್ಷಿಸುವ ಮಾರ್ಗಗಳನ್ನ ಜನರಿಗೆ ತಲುಪಿಸಿ, ಜೀವ ರಕ್ಷಣೆ ಮಾಡಬೇಕು. ಮಳೆಗಾಲದಲ್ಲಿ ಜನರು ಎತ್ತರದ ಒಂಟಿ ಮರದ ಕೆಳಗೆ ನಿಲ್ಲದೆ, ಸುರಕ್ಷ ಸ್ಥಳಕ್ಕೆ ತೆರಳಿ ಸಿಡಿಲಿನಿಂದ ಜೀವ ರಕ್ಷಿಸಿಕೊಳ್ಳಿ ಎಂದು ಕರ್ನಾಟಕ ಜ್ಞಾನ-ವಿಜ್ಞಾನ ಸಮಿತಿ ಮತ್ತು ಕರ್ನಾಟಕ ಸರ್ವೋದಯ ಮಂಡಳಿಯ ಜಿಲ್ಲಾಧ್ಯಕ್ಷರಾದ ಡಾ. ಎಚ್. ಕೆ. ಎಸ್. ಸ್ವಾಮಿಯವರು ವಿನಂತಿಸಿಕೊAಡಿದ್ದಾರೆ.ಬಹಳಷ್ಟು ಜನರಿಗೆ ಮಳೆಗಾಲದಲ್ಲಿ ಸಿಡಿಲು ಬಡಿದು ಸಾಯುವ ದೃಶ್ಯ ಆತಂಕಕಾರಿಯಾಗಿದೆ. ಅವರನ್ನು ರಕ್ಷಿಸುವ ಕೆಲಸ ಪ್ರತಿಯೊಬ್ಬ ವೈಜ್ಞಾನಿಕ ತಿಳುವಳಿಕೆಯುಳ್ಳ ವ್ಯಕ್ತಿಯ ಕರ್ತವ್ಯವಾಗಿದೆ. ಸಿಡಿಲು ಬಡಿಯುವ ಬಗ್ಗೆ ಸಾಕಷ್ಟು ವೈಜ್ಞಾನಿಕ ಮಾರ್ಗಗಳನ್ನ ಕಂಡುಕೊAಡು, ಮನುಷ್ಯ ಅವುಗಳಿಂದ ಬಚಾವಾಗುವುದನ್ನ ಕಲಿತಿದ್ದಾನೆ, ಆದರೆ ಅದನ್ನ ರೈತರಿಗೆ, ಕೂಲಿಕಾರ್ಮಿಕರಿಗೆ, ಕುರಿ ಕಾಯುವವರಿಗೆ, ತಿಳಿಸುವವರಿಲ್ಲದೆ ಹೆಚ್ಚು ಸಾವುಗಳಾಗುತ್ತಿವೆ ಎಂದಿದ್ದಾರೆ.ಎತ್ತರದ ಪ್ರದೇಶದಲ್ಲಿ ಮಳೆ ಬಂದಾಗ, ಗುಡುಗು ಸಿಡಿಲು ಇದ್ದಾಗ ಒಂಟಿ ಎತ್ತರದ ಮರದ ಕೆಳಗೆ ನಿಂತು, ಸಿಡಿಲು ಬಡಿಸಿಕೊಂಡು ಸಾಯುವ ಸಂದAರ್ಭಗಳು ಹೆಚ್ಚಾಗಿರುತ್ತವೆ. ಹಾಗಾಗಿ ಸಿಡಿಲು ಬರುತ್ತಿದ್ದರೆ, ಎತ್ತರದ ಪ್ರದೇಶದಲ್ಲಿ, ಒಂಟಿ ಮರದ ಕೆಳಗಡೆ ನಿಲ್ಲದೆ, ತಗ್ಗಿನ ಪ್ರದೇಶಕ್ಕೆ ಬಂದು, ಸಿಡಿಲಿಂದ ರಕ್ಷಣೆ ಪಡೆಯಬೇಕು. ಯಾವುದೇ ಕಬ್ಬಿಣದ, ನೀರಿನ ಸಂಪರ್ಕವಿಲ್ಲದAತ ಜಾಗದಲ್ಲಿ ಆಶ್ರಯ ಪಡೆಯಬೇಕು ಎಂದಿದ್ದಾರೆ.ಕುರಿ ಮೇಯಿಸಲು ಅರಣ್ಯದ ಕಡೆ, ಗುಡ್ಡದ ಕಡೆ, ಹೋಗುವಂತಹ ರೈತರು ಎಚ್ಚರಿಕೆಯಿಂದ ಇರಬೇಕು. ಯಾವುದೇ ಎತ್ತರದ ಮರದ ಕೆಳಗೆ, ಎತ್ತರದ ದಿಬ್ಬದ ಮೇಲೆ ನಿಲ್ಲದೆ, ತಗ್ಗಿನ ಪ್ರದೇಶಕ್ಕೆ ಬರಬೇಕು. ಸಣ್ಣ ಅಥವಾ ಚಿಕ್ಕಮರದ ಕೆಳಗೆ ಆಶ್ರಯ ಪಡೆಯಬಹುದು. ವಿದ್ಯುತ್ ಕಂಬ, ಟೆಲಿಫೋನ್ ಕಂಬದ ಕೆಳಗೆ ಆಶ್ರಯ ಪಡೆಯಬಾರದು. ಯಾವುದೇ ಆಶ್ರಯ ತಾಣವಿಲ್ಲದಿದ್ದರೆ, ತಗ್ಗಿನ ಪ್ರದೇಶದಲ್ಲಿ ಮಂಡಿ ಊರಿ ಕುಳಿತು, ತಲೆಯನ್ನು ಬಗ್ಗಿಸಿ, ಕಿವಿಗಳನ್ನು ಮುಚ್ಚಿಕೊಳ್ಳಬೇಕು. ಕುರಿಗಳ ಗುಂಪಿನಲ್ಲಿದ್ದರೆ, ಗುಂಪನ್ನ ಚದುರಿಸಿಕೊಳ್ಳಬೇಕು, ಹೆಚ್ಚು ಜನ ಇದ್ದರೆ ಗುಂಪನ್ನ ಕಡಿಮೆ ಮಾಡಲು ಪ್ರಯತ್ನಿಸಬೇಕು. ಗುಂಪಿನಿAದ ಅಂತರವನ್ನು ಕಾಯ್ದುಕೊಳ್ಳಬೇಕು ಎಂದರು.
