ಭದ್ರಾ ನೀರು ಹರಿಸಲು ವೆಲ್ಫೇರ್ ಪಾರ್ಟಿ ಆಗ್ರಹ
ಸಂಜೆವಾಣಿ ವಾರ್ತೆ
ದಾವಣಗೆರೆ.5: ಭದ್ರಾ ಜಲಾಶಯದಿಂದ ಅಚ್ಚುಕಟ್ಟು ಪ್ರದೇಶಕ್ಕೆ ಕೂಡಲೇ ನೀರು ಹರಿಸುಬೇಕು ಎಂದು ವೆಲ್ಫೇರ್ ಪಾರ್ಟಿ ಜಿಲ್ಲಾ ಅಧ್ಯಕ್ಷ ಶಹಬಾಜ್ ಖಾನ್ ಆಗ್ರಹಿಸಿದ್ದಾರೆ.ಭದ್ರಾ ಜಲಾಶಯದಲ್ಲಿ ಸಂಗ್ರಹವಾಗಿರುವ ನೀರಿನಲ್ಲಿ 42 ಟಿ ಎಂ ಸಿ ನೀರನ್ನು ಬಳಕೆ ಮಾಡಬಹುದಾಗಿದ್ದು, ಸಕಾಲಿಕ ನೀರು ಹರಿಸಿದರೆ ಜಲಾಶಯದ ನೀರಿನ ಮಟ್ಟವನ್ನು ಕಂಡುಕೊಳ್ಳಲು ಅನುಕೂವಾಗುವುದರ ಜತೆಗೆ ರೈತರಿಗೂ ಅನುಕೂಲವಾಗಲಿದೆ. ಜಲಾಶಯ ಭರ್ತಿ ಆಗುವವರೆಗೂ ಕಾಯುವುದರಿಂದ ಕೃಷಿ ಚಟುವಟಿಕೆಗೆ ಹಿನ್ನಡೆ ಉಂಟಾಗುತ್ತದೆ. ನೀರು ಬಿಡುಗಡೆ ವಿಳಂಬವಾದರೆ ಇಳುವರಿ ಕುಂಠಿತವಾಗುತ್ತದೆ ಎಂದು ಅವರು ಹೇಳಿದ್ದಾರೆ.ಅಚ್ಚುಕಟ್ಟು ಪ್ರದೇಶದ ರೈತರು ಭತ್ತದ ಸಸಿ ಮಡಿ ಮಾಡಿಕೊಂಡು ಭದ್ರಾ ನೀರಿಗೆ ಕಾಯುತ್ತಿದ್ದಾರೆ. ಇನ್ನು ಕೆಲ ರೈತರು ಸಸಿ ಮಡಿ ಮಾಡಿಕೊಳ್ಳುವ ನೀರಿನ ಅಗತ್ಯವಿದೆ. ಚನ್ನಗಿರಿ ತಾಲೂಕಿನ ಶಾಂತಿ ಸಾಗರ ಕೆರೆಗೆ ಲಕ್ಕಳ್ಳಿ ನಾಲೆಯಿಂದ ನೀರು ಸಂಗ್ರಹಿಸಿ ಬೇರೆ ಜಿಲ್ಲೆಗಳ ಕೆರೆ ತುಂಬುವ ಕೆಲಸವಾಗಿರುವುದು ಇದು ಯಾವ ನ್ಯಾಯ ಎಂದು ಪ್ರಶ್ನಿದ್ದಾರೆ.ನಮ್ಮ ಜಿಲ್ಲೆಯ ರೈತರು ಸಂಕಷ್ಟಕ್ಕೆ ಸಿಲುಕಿಸಿ ಬೇರೆ ಜಿಲ್ಲೆಗಳ ರೈತರ ಬಗ್ಗೆ ಕಾಳಜಿ ವಹಿಸುವುದು ಇದು ನಮ್ಮ ಜಿಲ್ಲೆಯ ರೈತರಿಗೆ ಮಾಡುವ ಅನ್ಯಾಯ. ಆದ್ದರಿಂದ ರಾಜ್ಯ ಸರ್ಕಾರ ಕೂಲಡೇ ಗಮನ ಹರಿಸಬೇಕೆಂದು ಮನವಿ ಮಾಡಿದ್ದಾರೆ