ತುಂಬು ಗರ್ಭಿಣಿಗೆ ಯಶಸ್ವಿ ನೇತ್ರಚಿಕಿತ್ಸೆ
ಸಂಜೆವಾಣಿ ವಾರ್ತೆ
ಚಿತ್ರದುರ್ಗ.ಆ.5: ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಯಲ್ಲಿ  ನಾಯಕನಹಟ್ಟಿ ಗ್ರಾಮದ ತುಂಬು ಗರ್ಭಿಣಿಯೊಬ್ಬರಿಗೆ ಯಶಸ್ವಿಯಾಗಿ ನೇತ್ರ  ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ.ಎರಡು ಕಣ್ಣುಗಳು ಪೊರೆ ಬಂದು ದೃಷ್ಟಿ ದೋಷದಿಂದ ತೊಂದರೆ ಅನುಭವಿಸಿತ್ತಿದ್ದ ನಾಯಕನಹಟ್ಟಿ ಗ್ರಾಮದ ನಾಗವೇಣಿ ಮಹಂತೇಶ್ ಅಂಧ ಗರ್ಭಿಣಿಯನ್ನು ಮನೆ ಭೇಟಿಯಲ್ಲಿ ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿ ಸುಕನ್ಯಾ, ಆರೋಗ್ಯ ನಿರೀಕ್ಷಣಾಧಿಕಾರಿ ಚೈತ್ರಾ ಅವರು ಪತ್ತೆಹಚ್ಚಿ ಜಿಲ್ಲಾ ಆಸ್ಪತ್ರೆ ನೇತ್ರ ತಜ್ಞರಾದ ಡಾ.ಬಿ.ಜಿ. ಪ್ರದೀಪ್ ಅವರ ನೇತೃತ್ವದಲ್ಲಿ ಕಣ್ಣಿನ ಶಸ್ತ್ರ ಚಿಕಿತ್ಸೆ ನಡೆಸಿ ನಾಗವೇಣಿ ಅವರ ದೃಷ್ಟಿ ದೋಷ ನಿವಾರಣೆ ಮಾಡಿದ್ದಾರೆ.
