ಕೆಹೆಚ್ ಬಿ ತುಂಗಭದ್ರಾ ಬಡಾವಣೆ ಸಂಘ ಉದ್ಘಾಟನೆ
ಸಂಜೆವಾಣಿ ವಾರ್ತೆ
ದಾವಣಗೆರೆ.ಆ.೫: ಈಚೆಗೆ ಕೆಹೆಚ್ ಬಿ ತುಂಗಭದ್ರಾ ಬಡಾವಣೆ ಹಿರಿಯ ನಾಗರೀಕರ ಸಂಘವನ್ನು ನಗರದ ಹೊರವಲಯದಲ್ಲಿರುವ ಹೊಸ ಕುಂದುವಾಡದಲ್ಲಿ ಜಿಲ್ಲಾ ನ್ಯಾಯಾಧೀಶರಾದ ಎಂ.ಹೆಚ್. ಅಣ್ಣಯ್ಯನವರು ಉದ್ಘಾಟಿಸಿದರು.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮೂರನೇ ಜಿಲ್ಲಾ ನ್ಯಾಯಾಲಯದ ಜಿಲ್ಲಾನ್ಯಾಯಾಧೀಶರಾದ ಶಿವಾನಂದ ಪಾಟೀಲ್ ಸಲಗರ್, ನಿವೃತ್ತ ಹೆಚ್ಚುವರಿ ಪೊಲೀಸ್ ಅಧೀಕ್ಷಕ  ರವಿ ನಾರಾಯಣ್, ಸಂಘದ ಅಧ್ಯಕ್ಷ ಕೆ. ವಾಸುದೇವ, ಉಪಾಧ್ಯಕ್ಷ  ಎಂ .ಎಸ್ ರೇವಣ್ಣ, ಎನ್.ಎಂ. ಲಿಂಗೇಶ್ ಉಪಸ್ಥಿತರಿದ್ದರು.