ಡಾ. ಎಂ.ಎಚ್ ದಿವಾಕರ್, ಎಸ್.ಎನ್. ಹನುಮಂತಪ್ಪ ಇವರಿಗೆ ಪಿಹೆಚ್ ಡಿ ಪ್ರದಾನ
ಸಂಜೆವಾಣಿ ವಾರ್ತೆ
ದಾವಣಗೆರೆ.ಆ.೫; ಯುಬಿಡಿಟಿ ಇಂಜಿನಿಯರಿಂಗ್ ಕಾಲೇಜಿನ ಮೆಕ್ಯಾನಿಕಲ್ ವಿಭಾಗದಲ್ಲಿ ಸಹಪ್ರಾಧ್ಯಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಡಾ. ಎಮ್.ಎಚ್ ದಿವಾಕರ್ ಇವರು ಯುಬಿಟಿಡಿಸಿಇ ಪ್ರಾಧ್ಯಾಪಕ ಡಾ. ಎಸ್. ಬಸವರಾಜಪ್ಪ ಇವರ ಮಾರ್ಗದರ್ಶನದಲ್ಲಿ ‘ಇನ್ವೆಸ್ಟಿಗೇಷನ್ ಆನ್ ಎಫೆಕ್ಟ್ ಆಫ್ ಟೆಂಪ್ರಢಚರ್ ಆನ್ ವಿಯರ್ ಬಿಹೇವಿಯರ್ ಆಫ್ ಹೈಬ್ರಿಡ್ ಮೆಟಲ್ ಮ್ಯಾಟ್ರಿಕ್ಸ್ ಕಾಂಪೋಜಿಟ್ಸ್’ ಎಂಬ ವಿಷಯದ ಕುರಿತು ಮಂಡಿಸಿದ ಪ್ರಬಂಧಕ್ಕೆ ಹಾಗೂ ಯುಬಿಟಿಡಿ ಇಂಜಿನಿಯರಿಂಗ್ ಕಾಲೇಜಿನ ಎಲೆಕ್ಟ್ರಾನಿಕ್ಸ್ ವಿಭಾಗದಲ್ಲಿ ಸಹ ಪ್ರಾಧ್ಯಾಪಕರಾಗಿರುವ ಎಸ್.ಎನ್. ಹನುಮಂತಪ್ಪ ಇವರು ಕೆಎಸ್ಎಸ್ಎಮ್ಇ ಕಾಲೇಜಿನ ಎಲೆಕ್ಟ್ರಾನಿಕ್ಸ್ ವಿಭಾಗದ ಪ್ರಾಧ್ಯಾಪಕ ಡಾ. ವಿ. ಗಿರೀಶ್ ಇವರ ಮಾರ್ಗದರ್ಶನದಲ್ಲಿ ‘ಡಿಸೈನ್ ಆಫ್ ಎನರ್ಜಿ ಎಫ್ಫಿಶಿಯಂಟ್ ಎಂಡ್ ಫ್ಯಾಕಲ್ಟಿ ಟೋಲ್ರಂಟ್ ವೈರ್ ಲೆಸ್ ಸೆನ್ಸಾರ್ ಅಕ್ಚುಟರ್ ನೆಟ್ವರ್ಕ್ಸ್’ ಎಂಬ ವಿಷಯದ ಮೇಲೆ ಮಂಡಿಸಿದ ಪ್ರಬಂಧಕ್ಕೆ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು 24ನೇ ವಾರ್ಷಿಕ ಘಟಿಕೋತ್ಸವದಲ್ಲಿ ಇವರಿಬ್ಬರಿಗೂ ಪಿ.ಹೆಚ್ ಡಿ ಪದವಿಯನ್ನು ನೀಡಿ ಗೌರವಿಸಿದೆ.