ಲೆಜೆಂಡ್ ಕಿಶೋರ್ ಕುಮಾರ್ ಅವರ 95 ನೇ ಜನ್ಮದಿನ
ಕಲಬುರಗಿ:ಆ.4:ಕಲಬುರಗಿ ಸಾರ್ವಜನಿಕ ಉದ್ಯಾನವನದಲ್ಲಿರುವ ಗುಲಬರ್ಗಾ ಕ್ಲಬ್ ನಲ್ಲಿ ಲೆಜೆಂಡ್ ಕಿಶೋರ್ ಕುಮಾರ್ ಅವರ 95 ನೇ ಜನ್ಮದಿನವನ್ನು ಡಾ ಸುರೇಶ್ ಎಲ್. ಶರ್ಮಾ ಮತ್ತು ರತ್ನಾಕರ್ ದೇಶಮುಖ ಅವರು ಆಯೋಜಿಸಿದ ಕಾರ್ಯಕ್ರಮದಲ್ಲಿ
ಮುಖ್ಯ ಅತಿಥಿಗಳಾಗಿ ಡಾ. ರವೀಂದ್ರ ಆರ್. ಶಾ,ಡಾ. ಶರಣಬಸಪ್ಪ ಕಾಮರೆಡ್ಡಿ,ಡಾ.ಅನರೂಪ್ ಶಾಹಾ. ಶಿವಕುಮಾರ್ ಡಿ.ಪವಾರ್,ಡಾ.ಸುರೇಶ್ ಎಲ್.ಶರ್ಮಾ ಲಕ್ಷ್ಮೀಕಾಂತ ಮೈಲಾಪುರ, ಸೈಯದ್ ಒಸ್ಮಾನ್ ಪಾಷಾ,
ಸೂರಜ ತಿವಾರಿ ಮಾಜಿ ಕಾರ್ಪೊರೇಟರ್ ವೇದಿಕೆ ಮೇಲೆ ಇದ್ದರು.
KANGEN WATER® ಪ್ರಾಯೋಜಿಸಿದ ನಿಮ್ಮ ನೀರನ್ನು ಬದಲಿಸಿ, ನಿಮ್ಮ ಜೀವನವನ್ನು ಬದಲಾಯಿಸಿ. ಎನಜಿಕ್ ಪ್ರಾಪ್ ರಾಘವೇಂದ್ರ ಎ. ಕಲ್ಯಾಣಕರ, ರತ್ನಾಕರ ದೇಶಮುಖ ಸಂಯೋಜಕ ವಾಲ್ಮೀಕ ಕಾಂಬಳೆ ಆಯೋಜಿಸಿದ್ದರು.
ಕಿಶೋರ್ ಕುಮಾರ್ ಕುರಿತು ರಸಪ್ರಶ್ನೆಯಲ್ಲಿ ವಿಜೇತರಿಗೆ ಕಾಣಿಕೆಯನ್ನು ನೀಡಿದರು.
ಮತ್ತು ಕಲಾವಿದ ಕಿಶೋರ್ ಕುಮಾರ್ ಹಾಡುಗಳನ್ನು ರತ್ನಾಕರ್, ವಾಲ್ಮೀಕಿ, ರಾಧಾ,ನೀಲೋಫರ್, ಪ್ರಮೋದ ಅವರು ಹಾಡುಗಳನ್ನು ಹಾಡಿ ರಂಜಿಸಿದರು.