ಡೆಂಗ್ಯೂ ಜಾಗೃತಿ ಹಾಗೂ ಗುರುವಂದನೆ ಕಾರ್ಯಕ್ರಮ
ಸಂಜೆವಾಣಿ ವಾರ್ತೆ
ಹಿರಿಯೂರು.4 – ಹಿರಿಯೂರಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಬಸ್ ಸ್ಟ್ಯಾಂಡ್ ಎದುರುಗಡೆ ಇರುವ ಶಾಲೆಯಲ್ಲಿ ಇನ್ನರ್ವಿಲ್ ಕ್ಲಬ್ ವತಿಯಿಂದ ಡೆಂಗ್ಯೂ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ಹೆಲ್ತ್ ಇನ್ಸ್ಪೆಕ್ಟರ್ ಆದಂತಹ  ಸೋಮಲಾಪುರ ಇವರು ಮಕ್ಕಳಿಗೆ ಡೆಂಗ್ಯೂ ಬಗ್ಗೆ ಹಾಗೂ ಅದರ ನಿಯಂತ್ರಣದ ಬಗ್ಗೆ ತಿಳಿಸಿಕೊಟ್ಟರು. ಈಡಿಶ್ ಸೊಳ್ಳೆಯಿಂದ ಡೆಂಗ್ಯೂ ಬರುತ್ತದೆ ಸೊಳ್ಳೆಗಳು 30 ದಿನ ಮಾತ್ರ ಬದುಕಿರುತ್ತವೆ ಆ ಕಾಲಘಟ್ಟದಲ್ಲಿ ಅವು ಮೂರು ಸಾರಿ ಮೊಟ್ಟೆಗಳ ನೀಡುತ್ತವೆ ಒಂದು ಸರಿ ಮೊಟ್ಟೆ ಸುಮಾರು 400 ಮೊಟ್ಟೆಗಳನ್ನು ಇಡುತ್ತವೆ ಅಲ್ಲಿಗೆ ಮೂರು ಸಾರಿ ಅಂದರೆ 200 ಮೊಟ್ಟೆಗಳನ್ನು ಸೊಳ್ಳೆಗಳು ತಮ್ಮ 30 ದಿನದ ಜೀವಿತಾವಧಿಯಲ್ಲಿ ಉತ್ಪತ್ತಿ ಮಾಡುತ್ತವೆ ಈ ಸೊಳ್ಳೆಗಳು ಮಧ್ಯಾಹ್ನ ಹೊತ್ತಿನಲ್ಲೂ ಕೂಡ ಕಚ್ಚಿದರೆ ಡೆಂಗ್ಯೂ ಬರುತ್ತದೆ ಆದ್ದರಿಂದ ಮನೆಯಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು ಹಾಗೂ ನೀರು ನಿಲ್ಲದಂತೆ ಮನೆಯ ಆಸು ಪಾಸಿನಲ್ಲಿ ಅಂದರೆ ಪಾರ್ಟ್ ನಲ್ಲಿ ಅಥವಾ ಟೈಗರ್ಗಳಲ್ಲಿ ಅಥವಾ ಪ್ಲಾಸ್ಟಿಕ್ ಮುರಿದ ಸಾಮಾನುಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳುವುದು ಅತ್ಯವಶ್ಯಕ ಹಾಗೆಯೇ ಒಳ್ಳೆಯ ಗಾಳಿ ಸೊಳ್ಳೆಯ ನಿಯಂತ್ರಣಕ್ಕೆ ಉತ್ತಮ ಮದ್ದು ಎಂದರೆ ತುಳಸಿ ಗಿಡಗಳನ್ನು ಮನೆಯ ಸುತ್ತ ಹೆಚ್ಚಾಗಿ ಬೆಳೆಸಿಕೊಳ್ಳುವುದು ಚಂಡು ಹೂವಿನ ಗಿಡಗಳನ್ನು ಹೆಚ್ಚಾಗಿ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು ಹಾಗೂ ಚರಂಡಿಗಳ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು ಎಂದು ತಿಳಿಸಿದರು ಹಾಗೆ ಆಶ ಕಾರ್ಯಕರ್ತೆಯಾದಂತಹ ಚಂದ್ರಮ್ಮ ಅವರು ಉಪಸ್ಥಿತರಿದ್ದರು ಈ ಸಂದರ್ಭದಲ್ಲಿ ಇನ್ನರ್ವೀಲ್ ಅಧ್ಯಕ್ಷ ರಾದಂತಹ ಸುಚಿತ್ರ ಅಮರ್ ನಾಥ್ ಅವರು ಮಕ್ಕಳಿಗೆ ಡೆಂಗ್ಯೂ ಬಾರದಂತೆ ಮಕ್ಕಳು ಮೈತುಂಬ ಉಡುಪನ್ನು ಧರಿಸಿಕೊಳ್ಳಬೇಕು ಹಾಗೂ ಜ್ವರ ಎಂದು ನಿರ್ಲಕ್ಷ ಮಾಡದೆ ತಕ್ಷಣ ಚಿಕಿತ್ಸೆ ಪಡೆದುಕೊಳ್ಳಬೇಕು ಹಾಗೂ ಮನೆಯಲ್ಲಿ ಒಂದಾದರೂ ಸಸಿ ನೆಡಬೇಕು ಉತ್ತಮ ಗಾಳಿ ಸಿಗುತ್ತದೆ ಮಕ್ಕಳು ಆದಷ್ಟು ಸ್ವಚ್ಛತೆಯ ಕಡೆ ಗಮನ ಕೊಡಬೇಕು ಕೈಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಮನೆಯನ್ನು ಸ್ವಚ್ಛಗೊಳಿಸುವಲ್ಲಿ ಮಕ್ಕಳದು ಪಾತ್ರ ಬಹಳ ಮುಖ್ಯ ಎಂದು ತಿಳಿಸಿದರು  ಹಾಗೂ ಇನ್ನರ್ವೀಲ್ ಸದಸ್ಯರುಗಳಾದ ಸರ್ವ ಮಂಗಳ ರಮೇಶ್, ಲಕ್ಷ್ಮಿ ರಾಜೇಶ್, ರಚನಾ ಅನಂತ್, ಲತಾ ಶಿವಪ್ರಸಾದ್, ಸ್ವರ್ಣ ಲತಾ ರೆಡ್ಡಿ, ಸುವರ್ಣ ಪ್ರಶಾಂತ್, ಸೌಮ್ಯ ಪ್ರಶಾಂತ್ ಹಾಗೂ ಶಾಲೆಯ ಎಲ್ಲಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು ಇದೇ ಸಂದರ್ಭದಲ್ಲಿ ಶಾಲೆಯ ಆಭರಣದಲ್ಲಿ ತೆಂಗಿನ ಸಸಿಗಳನ್ನು ಇನ್ನರ್ವಿಲ್ ಕ್ಲಬ್ ನ ಕಡೆಯಿಂದ ನೀಡಲಾಯಿತು ಹಾಗೂ ಗುರು ಪೂರ್ಣಿಮಾ ಪ್ರಯುಕ್ತ ಶಾಲೆಯ ಶಿಕ್ಷಕರುಗಳಿಗೆ ಎಲ್ಲರಿಗೂ ವಿದ್ಯಾರ್ಥಿ ವಿದ್ಯಾರ್ಥಿನಿಯರಿಂದ ಪಾದಪೂಜೆ ಮಾಡಿಸುವ ಮೂಲಕ ಗುರುಗಳಿಂದ ಆಶೀರ್ವಾದ ನೀಡಲಾಯಿತು ಹಾಗೂ ಗುರುಗಳಿಗೆ ಸನ್ಮಾನ ಮಾಡಲಾಯಿತು