ಹರಿಹರ ನಗರದ ಖಾಲಿ ನಿವೇಶನಗಳ ಸ್ವಚ್ಛತೆಗೆ ಸೂಚನೆ
ಸಂಜೆವಾಣಿ ವಾರ್ತೆ
ಹರಿಹರ .4 ;ನಗರಸಭೆ ವ್ಯಾಪ್ತಿಯಲ್ಲಿ ಬರುವಂತಹ 31 ವಾರ್ಡ್ಗಳಲ್ಲಿ ಬರುವ ಖಾಲಿ ನಿವೇಶನಗಳ ಮಾಲೀಕರು ಮುಖ್ಯವಾಗಿ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ನಗರಸಭಾ ಆಯುಕ್ತ ಸುಬ್ರಹ್ಮಣ್ಯ ಪಿ ಹೇಳಿದರು ಖಾಲಿ ನಿವೇಶನಗಳಲ್ಲಿ ಅನಗತ್ಯವಾಗಿ ಗಿಡಗಂಟೆಗಳು ಬೆಳೆದಿದ್ದು ಉಗಮ ಸ್ಥಾನವಾಗಿರುತ್ತದೆ ಈಗಾಗಲೇ ರಾಜ್ಯದಲ್ಲಿ ವ್ಯಾಪಕವಾಗಿ ಡೆಂಗ್ಯೂ ಜ್ವರ ಇತರೆ ಸಾಂಕ್ರಾಮಿಕ ರೋಗಗಳು   ಹರಡುತ್ತಿದ್ದು ಇದರಿಂದ ಜನರು ಭಯಭೀತರಾಗಿದ್ದಾರೆ ಆದ್ದರಿಂದ ಕೂಡಲೇ ಖಾಲಿ ನಿವೇಶನಗಳ ಮಾಲೀಕರು ಸ್ವಚ್ಛತೆಗೆ ಗಮನ ಹರಿಸಬೇಕು ಪಾಳು  ಬಿದ್ದಿರುವ ಮನೆ ಶಿಥಿಲ ಗೊಂಡಿರುವ  ಕಟ್ಟಡಗಳನ್ನು ಕೊಡಲೇ ತೆರವುಗೊಳಿಸಬೇಕು   ಗಿಡಗಂಟೆಗಳ ಬೆಳೆದ ನಿಂತಿರುವುದನ್ನು ಸ್ವಚ್ಛತೆಗೆ ಮುಂದಾಗಬೇಕೆಂದು ಸೂಚಿಸಿದರು ಸಂಬಂಧಪಟ್ಟವರು ವಾರದೊಳಗೆ ಸ್ವಚ್ಛಗೊಳಿಸಬೇಕು ಇಲ್ಲದಿದ್ದರೆ ನಗರಸಭೆಯ ಜೆಸಿಬಿ ಮೂಲಕ ಸ್ವಚ್ಛತೆ ಮಾಡಿಸಿ ಅದರ ವೆಚ್ಚವನ್ನು ಕಂದಾಯಕ್ಕೆ ಸೇರಿಸಲಾಗುವುದು ಕೂಡಲೇ ನಿವೇಶನದ ಮಾಲೀಕರು ಸ್ವಚ್ಛತೆಗೆ ಆದ್ಯತೆ ನೀಡಿ ಸಾಂಕ್ರಾಮಿಕ ರೋಗಗಳು ಹರಡುವುದನ್ನು ತಡೆಗಟ್ಟುವುದಕ್ಕೆ ನಗರಸಭೆಯೊಂದಿಗೆ ಕೈಜೋಡಿಸಬೇಕೆಂದು ಮನವಿ ಮಾಡಿದರು