ಜೇನುಪೆಟ್ಟಿಗೆ ಇಡಿ ಸೂರ್ಯಕಾಂತಿ ಬೆಳೆ ಇಳುವರಿ ಹೆಚ್ಚಿಸಿ
ಸಂಜೆವಾಣಿ ವಾರ್ತೆ
ಚಿತ್ರದುರ್ಗ.4; ಸೂರ್ಯಕಾಂತಿ ಬೆಳೆಯಲ್ಲಿ ಇಳುವರಿ ಹೆಚ್ಚಿಸಲು ಎಕೆರೆಗೆ 3 ರಿಂದ 4 ಜೇನುಪೆಟ್ಟಿಗೆಯನ್ನು ಇಡಬೇಕು ಎಂದು ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ನಿರ್ದೇಶಕ ಆರ್.ರಜನೀಕಾಂತ ರೈತರಿಗೆ ಸಲಹೆ ನೀಡಿದರು.ಹಿರಿಯೂರು ತಾಲ್ಲೂಕಿನ ಬಬ್ಬೂರು ಫಾರಂನ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಸೋಮವಾರ ಹೈದಾರಬಾದ್‌ನ ಭಾರತೀಯ ಎಣ್ಣೇ ಕಾಳು ಬೆಳೆೆಗಳ ಸಂಶೋಧನಾ ಕೇಂದ್ರ ಮತ್ತು ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಅಖಿಲ ಭಾರತೀಯ ಸುಸಂಘಟಿತ ಸೂರ್ಯಕಾಂತಿ ವಿಭಾಗ ಸಹಯೋಗದಲ್ಲಿ ಚಿತ್ರದುರ್ಗ ಜಿಲ್ಲೆಯ ರೈತರಿಗೆ“ ಸೂರ್ಯಕಾಂತಿ ಮತ್ತು ಹರಳು ಬೆಳೆಯ ಸುಧಾರಿತ ಬೇಸಾಯ ತಾಂತ್ರಿಕತೆಗಳ ಕುರಿತು ಒಂದು ದಿನದ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಜಿಲ್ಲೆಯಲ್ಲಿ ಶೇಂಗಾ ನಂತರ ಸೂರ್ಯಕಾಂತಿ ಬೆಳೆ 3500 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದು, ಪ್ರಸಕ್ತ ಮೊಗ್ಗು, ಹೂ ಮತ್ತು ಕಾಳು ಕಟ್ಟುವ ಹಂತದಲ್ಲಿದೆ. ಕರ್ನಾಟಕವು ದೇಶದ ಶೇ. 48 ಭಾಗ ಸೂರ್ಯಕಾಂತಿ ಉತ್ಪಾದನೆ ಮಾಡುತ್ತಿದ್ದು, ಅಗ್ರ ಸ್ಥಾನದಲ್ಲಿದೆ ಎಂದರು.ಇತ್ತೀಚಿನ ದಿನಗಳಲ್ಲಿ ಸೂರ್ಯಕಾಂತಿ ಬೆಳೆಯ ವಿಸ್ತೀರ್ಣ ಕ್ಷೀಣಿಸುತ್ತಿದ್ದು ಹಾಗೂ ಸೂರ್ಯಕಾಂತಿ ಎಣ್ಣೆಯ ಹೆಚ್ಚಿನ ಬೇಡಿಕೆಯಿಂದ ಈ ಬೆಳೆಯ ವಿಸ್ತೀರ್ಣ ಮತ್ತು ಉತ್ಪಾದನೆ ಹೆಚ್ಚಿಸವುದು ಅವಶ್ಯಕವಾಗಿದ್ದು, ಕೇಂದ್ರ ಸರ್ಕಾರ ಪ್ರಸಕ್ತ ಹಂಗಾಮಿಗೆ ಸೂರ್ಯಕಾಂತಿ ಬೆಳೆಯ ಕನಿಷ್ಟ ಬೆಂಬಲ ಬೆಲೆಯನ್ನು ಪ್ರತಿ ಕ್ವಿಂಟಾಲ್‌ಗೆ ರೂ. 7280/- ಅನ್ನು ನಿಗದಿಪಡಿಸಿದೆ ಎಂದು ಹೇಳಿದರು.ಇದೇ ರೀತಿ ಜಿಲ್ಲೆಯಲ್ಲಿ ಹರಳು ಬೆಳೆ 650 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದು, ಬೆಳೆಯು ಬೆಳವಣಿಗೆ ಹಂತದಲ್ಲಿದ್ದು ಇದನ್ನು ಮಿಶ್ರಬೆಳೆಯಾಗಿ (5 ಸಾಲು ಶೇಂಗಾ ಬೆಳೆ ನಂತರ 1 ಸಾಲು ಹರಳು) ಅಥವಾ ಏಕಬೆಳೆಯಾಗಿ ಅಥವಾ ಬದುಗಳ ಮೇಲೆ ಬೆಳೆಯಬಹುದಾಗಿದೆ. ಈ ನಿಟ್ಟಿನಲ್ಲಿ ಈ ಬೆಳೆಗಳ ವಿಸ್ತೀರ್ಣ ಮತ್ತು ಉತ್ಪಾದನೆ ಹೆಚ್ಚಿಸಲು ಕೇಂದ್ರ ಸರ್ಕಾರದ ರಾಷ್ಟಿçÃಯ ಖಾದ್ಯ ತೈಲ ಎಣ್ಣೇ ಕಾಳು ಅಭಿಯಾನದಡಿ ಕೃಷಿ ಇಲಾಖೆಯಿಂದ ಜಿಲ್ಲೆಯಲ್ಲಿ ಸೂರ್ಯಕಾಂತಿ ಬೆಳೆಯ ನೂತನ ಅಲ್ಪಾವಧಿ ತಳಿಯಾದ ಕೆಬಿಎಸ್,ಹೆಚ್. -78 ಮತ್ತು ಹರಳು ಬೆಳೆಯ ಸಂಕರಣ ತಳಿಗಳಾದ ಐಸಿಹೆಚ್-5, ಐಸಿಹೆಚ್-66ಗಳನ್ನು ಕ್ರಮವಾಗಿ 250 ಮತ್ತು 500 ಹೆಕ್ಟೇರ್ ಪ್ರದೇಶದಲ್ಲಿ ಚಳ್ಳಕೆರೆ, ಹಿರಿಯೂರು ಮತ್ತು ಮೊಳಕಾಲ್ಮೂರು ತಾಲ್ಲೂಕುಗಳಲ್ಲಿ ಪ್ರಾತ್ಯಕ್ಷಿಗಳನ್ನು ಹಮ್ಮಿಕೊಂಡಿದ್ದು, ರೈತಭಾಂದವರು ಸದುಪಯೋಗ ಪಡೆದುಕೊಳ್ಳುವಂತೆ ಕೋರಿದರು.ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಸೂರ್ಯಕಾಂತಿ ತಳಿ ಅಭಿವೃದ್ಧಿ ವಿಜ್ಞಾನಿ ಡಾ. ಎಸ್.ಡಿ ನೆಹರು ಅವರು ಸೂರ್ಯಕಾಂತಿ ಬೆಳೆಯಲ್ಲಿ ಬಿಡುಗಡೆಯಾದ ಅಧಿಕ ಇಳುವರಿ ನೀಡುವ ಅಲ್ಪಾವಧಿ ತಳಿಗಳಾದ ಕೆಬಿ.ಎಸ್,ಹೆಚ್-78 ಮತ್ತು ಕೆಬಿಎಸ್,ಹೆಚ್. -90 ತಳಿಗಳ ವಿಶೇಷತೆಗಳ ಕುರಿತು ಮಾಹಿತಿ ನೀಡಿದರು.ಕೃಷಿ ವಿಶ್ವವಿದ್ಯಾಲಯ ಬೇಸಾಯಶಾಸ್ತçಜ್ಞ ಡಾ. ಕೆ.ಎಸ್ ಸೋಮಶೇಖರ್ ಮಾತನಾಡಿ, ಬೆಂಗಳೂರಿನಿAದ ಹೊಸದಾಗಿ ಬಿಡುಗಡೆಯಾದ ಕೆಬಿಎಸ್,ಹೆಚ್. -90 ತಳಿಯ ಪ್ರಾತ್ಯಕ್ಷಿಕೆಯನ್ನು ಹಿರಿಯೂರು ತಾಲ್ಲೂಕಿನ ಮಲ್ಲಪ್ಪನಹಳ್ಳಿ ಗ್ರಾಮದಲ್ಲಿ ಕೈಗೊಳ್ಳಲಾಗಿದೆ. ಸೂರ್ಯಕಾಂತಿ ಬೆಳೆಯನ್ನು ನೀರು ಬಸಿದು ಹೋಗುವಂತಹ ಎಲ್ಲಾ ತರಹದ ಫಲವತ್ತಾದ ಮಣ್ಣಿನಲ್ಲಿ ವರ್ಷದ 3 ಹಂಗಾಮುಗಳಲ್ಲಿಯೂ ಬೆಳೆಯಬಹುದಾಗಿದ್ದು, ಈ ಮೇಲಿನ ತಳಿಗಳು ಅಲ್ಪಾವಧಿ ತಳಿಗಳಾಗಿರುವುದರಿಂದ ಸಮಯಕ್ಕೆ ಸರಿಯಾಗಿ ಮಣ್ಣು ಪರೀಕ್ಷೆಆಧಾರಿತ ಶಿಫಾರಿತ ರಸಗೊಬ್ಬರ ಬಳಕೆ, ಹೂ ಅರಳುವ ಸಮಯದಲ್ಲಿ ಬೋರಾಕ್ಸ್ ಪ್ರತಿ ಲೀಟರ್ ನೀರಿಗೆ 2 ಗ್ರಾಂ ಪ್ರಮಾಣದಲ್ಲಿ ಬೆರೆಸಿ ಸಿಂಪರಣೆಯಿAದ ಕಾಳು ಕಟ್ಟುವಿಕೆ ಹೆಚ್ಚಾಗುವ ಜೊತೆಗೆ, ಕಾಳಿನ ತೂಕ, ಎಣ್ಣೆಯ ಅಂಶ ಮತ್ತು ಹೆಚ್ಚಿನ ಇಳುವರಿ ಪಡೆಯಲು ಸಾಧ್ಯ. ಮೊಳಕೆಯೊಡೆದ 10-12 ದಿವಸದೊಳಗೆ ಪ್ರತಿಗುಣಿಯಲ್ಲಿ ಆರೋಗ್ಯವಂತ ಒಂದು ಗಿಡವನ್ನು ಬಿಟ್ಟು ಉಳಿದವುಗಳನ್ನು ತೆಗೆಯುವುದರಿಂದ ಹೆಚ್ಚಿನ ಇಳುವರಿ ಪಡೆಯಲು ಸಾಧ್ಯ ಹಾಗೂ ಈ ಬೆಳೆಯಲ್ಲಿ ಎಲ್ಲಾ ಬೇಸಾಯ ಕ್ರಮಗಳನ್ನು ಬಿತ್ತನೆ ಮಾಡಿದ 30-35 ದಿನದೊಳಗೆ ಸಮಯಕ್ಕೆ ಸರಿಯಾಗಿ ಮಾಡಬೇಕು ಎಂದರು.