ವಕೀಲರ ಸಂಘದ ಚುನಾವಣೆ  ಅಧ್ಯಕ್ಷರಾಗಿ ರಾಮಬ್ರಹಂಉಳಿದಂತೆ ಏ ಪ್ಯಾನಲ್ ಗೆ ಹೆಚ್ಚಿನ ಸ್ಥಾನ

* ನಾಳೆಗೆ ಅಧಿಕೃತ ಫಲಿತಾಂಶ
* ಕಾರ್ಯದರ್ಶಿ ಫಲಿತಾಂಶಕ್ಕೆ ಆಕ್ಷೇಪ
* ಇಸಿ ಎ ಪ್ಯಾನಲ್ ಗೆ 9, ಬಿ.ಪ್ಯಾನಲ್ ಗೆ ಒಬ್ಬರು ಆಯ್ಕೆ
* ಜಂಟಿ ಕಾರ್ಯದರ್ಶಿಯಾಗಿ ಎರ್ರೆಮ್ಮ
* ಖಜಾಂಚಿಯಾಗಿ ಕೆ.ಜಿ. ಬಸವರಾಜ್
* ಉಪಾಧ್ಯಕ್ಷರಾಗಿ ಕೆ.ಯಶೋಧರ ಮೂರ್ತಿ ಆಯ್ಕೆ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ:ಅ,4- ಇಲ್ಲಿನ ಬಳ್ಳಾರಿ ವಕೀಲರ ಸಂಘದ  ಪದಾಧಿಕಾರಿಗಳು ಮತ್ತು ಕಾರ್ಯಕಾರಿ ಸಮಿತಿ ಸದಸ್ಯತ್ವಕ್ಕೆ ನಡೆದ ಚುನಾವಣೆಯ ಮತಗಳ ಎಣಿಕೆ ಕಾರ್ಯ ನಿನ್ನೆ ರಾತ್ರಿ ಮುಕ್ತಸಯಗೊಂಡರೂ, ಕಾರ್ಯದರ್ಶಿ ಸ್ಥಾನದ ಫಲಿತಾಂಶಕ್ಕೆ ಆಕ್ಷೇಪಣೆ ಮಾಡಿರುವುದರಿಂದ ಅಧಿಕೃತ ಫಲಿತಾಂಶ ನಾಳೆ ಪ್ರಕಟಿಸಲಿದೆಂದು ಚುನಾವಣಾಧಿಕಾರಿ ವೆಂಟರೆಡ್ಡಿ ಸಂಜೆವಾಣಿಗೆ ತಿಳಿಸಿದ್ದಾರೆ.
ಬಲ್ಲ ಮೂಲಗಳ ಪ್ರಕಾರ ಫಲಿತಾಂಶ ಹೀಗಿದೆ:
ಅಧಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದ  ಪಿ.ರಾಮಬ್ರಹಂ ಅವರು ಚಲಾವಣೆಗೊಂಡ 890 ಮತಗಳಲ್ಲಿ 462 ಮತ ಪಡೆದರೆ, ಎಲ್.ಟಿ.ಶೇಖರ್ ಅವರು 420 ಮತ ಪಡೆದಿದ್ದಾರೆ. 8 ಮತಗಳು ತೊರಸ್ಕೃತಗೊಂಡಿವೆಯಂತೆ.
ಉಪಾಧ್ಯಕ್ಷ ಸ್ಥಾನಕ್ಕೆ ಎ ಪ್ಯಾನಲ್ ನ ಯಶೋಧರ ಮೂರ್ತಿ 45 ಮತಗಳ ಅಂತರದಿಂದ, ಖಜಾಂಚಿ ಸ್ಥಾನಕ್ಕೆ 20 ಮತಗಳ ಅಂತರದಿಂದ ಕರೂರಿನ ಬಸವರಾಜ್ ಗೆಲುವು ಸಾಧಿಸಿದ್ದಾರಂತೆ.
ಜಂಟಿ ಕಾರ್ಯದರ್ಶಿ ಮಹಿಳಾ ಮೀಸಲಾತಿಯಲ್ಲಿ ಎತ್ರೆಮ್ಮ ಅವರು 30 ಮತಗಳ ಅಂತರದಿಂದ ಆಯ್ಕೆಯಾಗಿದ್ದಾರಂತೆ.
ಇನ್ನು ಕಾರ್ಯದರ್ಶಿ ಸ್ಥಾನದ ಮತಗಳ ಎಣಿಕೆ ಮೊದಲ ಬಾರಿ ನಡೆದಾಗ ಒಂದು ಮತದ ಅಂತರದಿಂದ ಅನ್ಸರ್ ಭಾಷಾ ಗೆದ್ದಿದ್ದಾರೆ ಎಂದಿತ್ತು. ಮರು ಎಣಿಕೆ ನಡೆಸಿದ್ದಾಗ ಸಮನಾಗಿ ಬಂದು ಒಂದು ಮತ ಪತ್ರದ ಬಗ್ಗೆ  ಪ್ರತಿಸ್ಪರ್ಧಿ ಗುರುಬಸವರಾಜ್  ಆಕ್ಷೇಪ ವ್ಯಕ್ತಪಡಿಸಿರುವುದರಿಂದ ಈ ಬಗ್ಗೆ ಚುನಾವಣಾಧಿಕಾರಿಗಳು ನಾಳೆ ನಿರ್ಣಯ ತೆಗೆದುಕೊಳ್ಳಲಿದ್ದಾರಂತೆ.
ಕಾರ್ಯಕಾರಿ ಸಮಿತಿಯ ಮಹಿಳಾ ಮೀಸಲಾತಿಯಲ್ಲಿ ಈ ಮೊದಲೇ ಇಬ್ಬರು ಅವಿರೋಧವಾಗಿ ಆಯ್ಕೆಯಾಗಿದ್ದರು.
ಉಳಿದ ಹತ್ತು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಏ ಪ್ಯಾನಲ್ ನಿಂದ 9 ಜನ ಆಯ್ಕೆಯಾದರೆ ಬಿ.ಪ್ಯಾನಲ್ ನಿಂದ ಒಬ್ಬರು ಆಯ್ಕೆಯಾಗಿದ್ದಾರೆ.
ಆಯ್ಕೆಯಾದವರು ಮತ್ತು ಅವರು ಪಡೆದ ಮತಗಳು: ಬಿ. ರಾಘವೇಂದ್ರ ಮೋಹನ್(489), ಡಿ.ಗೋವಿಂದಯ್ಯ ವಿಷ್ಣು(485) ಎಂ.ಕೆ.ಮೂರ್ತಿ(434), ಟಿ.ನಾಗನಗೌಡ(521), ಹುಲುಗಪ್ಪಹೆಚ್(473), ಹಂಪಯ್ಯ ಹೆಚ್(422).ಕೆ.ಬಸರೆಡ್ಡಿ(485),  ಶೇಖಣ್ಣ(620), ಸತ್ತಾರ್ ಮತ್ತು ಇರ್ಫಾನ್ (530) ಹಾಗು ಡಿ.ಮಲ್ಲಿಕಾರ್ಜುನ(419) ಮತ ಪಡೆದಿದ್ದಾರಂತೆ.
ತಮ್ಮ ಆಯ್ಕೆ ಬಗ್ಗೆ ಸಂತಸ ವ್ಯಕ್ತಪಡಿಸಿದ ರಾಮಬ್ರಹಂ ಅವರು  ತಮ್ಮ ಆಯ್ಕೆ ಬಗ್ಗೆ ಸಂತಸ ವ್ಯಕ್ತಪಡಿಸಿದ ರಾಮಬ್ರಹಂ ಅವರು ನನ್ನ ಗೆಲುವಿಗೆ ಮತ ನೀಡಿದವರು ನೇರವಾಗಿ ಕಾರಣರಾದರೂ ಅನೇಕರ ಸಹಕಾರ ಸ್ಮರಿಸಲೇ ಬೇಕು. ಎಲ್ಲರ ಸಹಕಾರ ಪಡೆದು ಸಂಘದ ಬೆಳವಣಿಗೆ ಯುವ ವಕೀಲರ ಕೌಶಲ್ಯ ಅಭಿವೃದ್ದಿಗೆ ಪೂರಕವಾಗಿ ಕಾರ್ಯಕ್ರಮ ಹಮ್ಮಿಕೊಳ್ಳಲಿದೆಂದು ಹೇಳಿದರು.
ವಕೀಲ ವೃಂದದಲ್ಲಿ ಎದುರಿಸಿದ್ದ ಐದು ಚುನಾವಣೆಗಳಲ್ಲಿ ಸೋತಿದ್ದ ಇವರಿಗೆ ಮತದಾರ ಈ ಬಾರಿ ಕೈ ಹಿಡಿದಿದ್ದಾನೆ ಎನ್ನಬಹುದು
ಇನ್ನು ಏ ಪ್ಯಾನಲ್ ನ ಅಧ್ಯಕ್ಷ ಅಭ್ಯರ್ಥಿ ಎಲ್.ಟಿ.ಶೇಖರ್ ಸೋಲು ಗೆಲಯವಿನ ಮೆಟ್ಟಿಲು ಎಂಬ ಗಾದೆ ಇದೆ. ಮತದಾರರ ತೀರ್ಪನ್ನು ಗೌರವಿಸುವೆ. ನಮ್ಮ ಪ್ಯಾನಲ್ ನಿಂದ ಹೆಚ್ಚಿನ ಜನರು ಆಯ್ಕೆಯಾಗಿದ್ದಾರೆ. ಅವರೆಲ್ಲರ ಮೂಲಕ ಸಂಘದಲ್ಲಿ ಉತ್ತಮ ಕಾರ್ಯಕೈಗೊಳ್ಳಲಿದೆಂದಿದ್ದಾರೆ.