ಸ್ವಚ್ಚತೆಯ ಕೊರತೆಯಿಂದ ಸೊಳ್ಳೆಗಳ ಉತ್ಪಾದನೆಯಾಗಿ ಡೆಂಗ್ಯೂ ಮಲೇರಿಯ
ಸಂಜೆವವಾಣಿ ವಾರ್ತೆ
ಸಂಡೂರು :ಆ:4: ರಾಜ್ಯದಲ್ಲಿ ಉತ್ತಮ ಮಳೆಯ ಜೊತೆಗೆ ರೈತರಿಗೆ ಸಂತಸವಾದರೆ ಸಾರ್ವಜನಿಕರಿಗೆ ಸೊಳ್ಳೆಯ ಉತ್ಪಾದನೆ ಹೆಚ್ಚಾಗಿ ಡೆಂಗ್ಯೂ, ಮಲೇರಿಯಾದಂತ ಜ್ವರದ ಭಾದೆ ಹೆಚ್ಚಾಗುತ್ತಿದ್ದು ಅದರಿಂದ ರಕ್ಷಣೆ ಪಡೆಯಬೇಕಾದರೆ ಸ್ವಚ್ಚತೆ ಕಾಪಾಡಿಕೊಳ್ಳಿ ಎಂದು ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಡಾ. ರವಿಯವರು ಅಭಿಪ್ರಾಯಪಟ್ಟರು.
ಅವರು ತಾಲೂಕಿನ ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರದ ಎನ್.ಎಸ್.ಎಸ್. ಘಟಕದ ವತಿಯಿಂದ ಸಂಡೂರು ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಡೆಂಗ್ಯೂ, ಇತರ ರೋಗಗಳ ಜಾಗೃತಿ ಕಾರ್ಯಕ್ರಮವನ್ನು ಚಾಲನೆ ನೀಡಿ ಮಾತನಾಡಿ ಸೊಳ್ಳೆಗಳ ಉತ್ಪಾದನೆಗೆ ಪ್ರಮುಖವಾಗಿ ಎಲ್ಲೆಂದರಲ್ಲಿ ನೀರು ಇರುವುದು ಅವುಗಳನ್ನು ತಕ್ಷಣ ನಿಲ್ಲದಂತೆ ಕ್ರಮವಹಿಸುವಮೂಲಕ ಸೊಳ್ಳೆಗಳನ್ನು ತಡೆಯಬಹುದು, ಅದಕ್ಕೆ ಕೇಂದ್ರದ ಎನ್.ಎಸ್.ಎಸ್ ಘಟಕಗಳು ಸ್ವಚ್ಚತೆಯ ಅಂದೋಲನದ ಜೊತೆಗೆ ಜಾಗೃತಿಯನ್ನು ಮೂಡಿಸುವಂತಹ ಮಹತ್ತರ ಕಾರ್ಯವನ್ನು ಹಮ್ಮಿಕೊಂಡಿದ್ದು ಇದಕ್ಕೆ ಪೂರಕವಾಗಿ ಪುರಸಭೆಯ ಎಲ್ಲಾ ಸಿಬ್ಬಂದಿ ಕೈಜೋಡಿಸಿದ್ದು ಸಂತಸವನ್ನು ಉಂಟುಮಾಡಿದೆ ಎಂದರು.
ಪುರಸಭೆಯ ಮುಖ್ಯಾಧಿಕಾರಿ ಕೆ.ಜಯಣ್ಣ ಅವರು ಮಾತನಾಡಿ ಸೊಳ್ಳೆಗಳು ಉತ್ಪಾದನೆಯಾಗಲು ತೆಂಗಿನ ಎಳೆನೀರಿನ್ನು ಕುಡಿದು ಬಿಸಾಡಿದರಲ್ಲಿ ನೀರು ತುಂಬುತ್ತಿವೆ, ಟೈರಗಳಲ್ಲಿ, ಹಳೆ ಕೊಡ, ಬಾಟಲಿಗಳಲ್ಲಿ , ತೊಟ್ಟಿಗಳಲ್ಲಿ ನೀರು ಬಾಯಿ ತೆರೆದಿಟ್ಟರೆ ಅಲ್ಲಿಯೂ ಸಹ ಸೊಳ್ಳೆ ಉತ್ಪಾದನೆಯಾಗುತ್ತವೆ. ಅದ್ದರಿಂದ ಅವುಗಳನ್ನು ಸ್ವಚ್ಚತೆ ಮಾಡುವುದು ಅತಿ ಅಗತ್ಯವಾಗಿದೆ. ಅಲ್ಲದೆ ಪ್ರತಿಯೊಬ್ಬರು ರೋಗ ಬರುವುದಕ್ಕಿಂತ ಮೊದಲು ಎಚ್ಚರಿಕೆ ಅತಿ ಅಗತ್ಯವಾಗಿದೆ, ಇಂದು ನಿರ್ಲಕ್ಷಯದಿಂದ ಈ ರೀತಿಯ ಸೊಳ್ಳೆ ಉತ್ಪಾದನೆಯಾಗಿ ರೋಗಗಳು ಬರಲು ಕಾರಣ, ಪುರಸಭೆ ನಿರಂತರವಾಗಿ ಕಸ ಸಂಗ್ರಹ ಮಾಡುತ್ತಿದೆ ಅದರಲ್ಲೂ ಹಸಿ ಕಸ, ಒಣ ಕಸ ವಿಂಗಡನೆಮಾಡಲು ಸಮಯವಿಡಿಯುತ್ತದೆ ಸಾರ್ವಜನಿಕರೇ ಅದನ್ನು ವಿಂಗಡಿಸಿಕೊಟ್ಟಾಗ ಇನ್ನೂ ಬೇಗ ಕೆಲಸವಾಗುತ್ತದೆ, ಅದ್ದರಿಂದ ಸಾರ್ವಜನಿಕರ ಸಹಕಾರವಿಲ್ಲದೆ ಯಾವುದೇ ಅಂದೋಲನ ಯಶಸ್ವಿಯಾಗಲು ಸಾಧ್ಯವಿಲ್ಲ, ಸ್ವಚ್ಚತೆ ಕಾಪಾಡಲು ಸಾರ್ವಜನಿಕರು ಸಹಕರಿಸಿದಾಗ ಮಾತ್ರ ನಾವು ಸುಂದರ ಪಟ್ಟಣವನ್ನು ಕಟ್ಟಲು ಸಾಧ್ಯ ಎಂದರು.
    ಪಿ.ಎಸ್.ಐ. ಹಾಗೂ ಸಿಬ್ಬಂದಿಗಳು, ಪುರಸಭೆಯ ಸಿಬ್ಬಂದಿವರ್ಗದವರು, ಹಾಗೂ ಸಾರ್ವಜನಿಕರು ವಿದ್ಯಾರ್ಥಿಗಳು ಪುರಸಭೆಯ ಬಸ್ ನಿಲ್ದಾಣದಲ್ಲಿ ಜಾಗೃತಿಯ ಘೋಷಣೆಗಳನ್ನು ಕೂಗುವ ಮೂಲಕ ಜಾಗೃತಿಯನ್ನು ಉಂಟುಮಾಡಿದರು.
ಕಾರ್ಯಕ್ರಮದಲ್ಲಿ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ ಸ್ನಾತಕೋತ್ತರ ಕೇಂದ್ರ ನಂದಿಹಳ್ಳಿ ಉಪನ್ಯಾಸಕರಾದ ಚೌಡಪ್ಪ ಅವರು ಮಾತನಾಡಿ ಸ್ವಚ್ಚತೆ ಉತ್ತಮ ಆರೋಗ್ಯ ಅಭಿವೃದ್ಧಿಗೆ ರಹದಾರಿಯಾಗಿದೆ. ಆರೋಗ್ಯವೇ ಭಾಗ್ಯ ಎಂಬ ತತ್ವದಡಿಯಲ್ಲಿ ಪ್ರತಿಯೊಬ್ಬರಿಗೂ ಉತ್ತಮ ಆರೋಗ್ಯ , ಚಿಕಿತ್ಸೆ ಒದಗಿಸುವುದು ಅಲ್ಲದೆ ಸ್ವಚ್ಚತೆ ಬಹು ಮುಖ್ಯ ಉದ್ದೇಶವಾಗಿದೆ ಎಂದರು. ಪ್ರಾಸ್ತಾವಿಕವಾಗಿ ಡಾ ಸುಮಾ ಕೆಜಿ ಅವರು ಮಾತನಾಡಿದರು,ಡಾ.ಚೌಡಪ್ಪ ರಾಷ್ಟ್ರೀಯ ಸೇವಾ ಯೋಜನೆ ಅಧಿಕಾರಿಗಳು ಸ್ವಾಗತಿಸಿದರು.ಯಾಸಿನ ಅವರು ಪ್ರಾರ್ಥಿಸಿದರು.ಹುಲ್ಲಪ್ಪ ಅವರು ಕಾರ್ಯಕ್ರಮವನ್ನು ವಂದಿಸಿದರು.
ಇದೇ ಸಂದರ್ಭದಲ್ಲಿ ಪಟ್ಟಣದಲ್ಲಿ ಸ್ವಚ್ಚತೆ ಮತ್ತು ಜಾಗೃತಿಯನ್ನು ವಿದ್ಯಾರ್ಥಿಗಳು ಮೂಡಿಸಿದರು.