ಎಸ್ಎಸ್ಎಲ್ಸಿ  ಪೂರಕ ಪರೀಕ್ಷೆಕೂಡ್ಲಿಗಿಯಿಂದ 3ಕಿಮೀ ದೂರದಲ್ಲಿ  ಪರೀಕ್ಷಾ  ಕೇಂದ್ರ, ವ್ಯವಸ್ಥೆ ಕಲ್ಪಿಸದ ತಾಲೂಕು ಶಿಕ್ಷಣ ಇಲಾಖೆ.
ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಆ.4 :- ಮಕ್ಕಳ ಭವಿಷ್ಯಕ್ಕೆ ಅನುಕೂಲವಾಗಲೆಂದು ಸರ್ಕಾರ ವಿವಿಧ ರೀತಿಯ ಅನೇಕ ತರನಾದ ಯೋಜನೆಗಳನ್ನು ಜಾರಿಗೆ ತಂದು ಭವಿಷ್ಯ ರೂಪಿಸಲು ಮುಂದಾದರೆ ಕೂಡ್ಲಿಗಿ ತಾಲೂಕು  ಶಿಕ್ಷಣ ಇಲಾಖೆಯ ಎಡವಟ್ಟಿನಿಂದ  ಕೂಡ್ಲಿಗಿ ಪಟ್ಟಣದಿಂದ ಸುಮಾರು ಮೂರು ಕಿಲೋಮೀಟರ್ ದೂರದಲ್ಲಿರುವ ತಾಹ ಶಾಲೆಯಲ್ಲಿ ಹಾಲಿ ನಡೆಯುತ್ತಿರುವ ಪ್ರಸಕ್ತ ಸಾಲಿನ  ಪೂರಕ  ಪರೀಕ್ಷಾ ಕೇಂದ್ರ ತೆರೆದು  ಪರೀಕ್ಷೆ ಬರೆಯುವ ಮಕ್ಕಳಿಗೆ ಬಸ್ಸಿನ ವ್ಯವಸ್ಥೆ ಸಹ  ಕಲ್ಪಿಸದೆ ಪರೀಕ್ಷಾ ಬರೆಯುವ ವಿದ್ಯಾರ್ಥಿಗಳಿಗೆ ಹಾಗೂ ಅವರ ಪಾಲಕರಿಗೆ ಪರೀಕ್ಷಾ ಕೇಂದ್ರಕ್ಕೆ ಬಂದೋಗಲು ಹಣದ ಅಡಚಣೆ ಹಾಗೂ ಸಮಯದ  ಆತಂಕ ಸೃಷ್ಟಿಸಿದೆ.
ಹೌದು, ಪೂರಕ ಪರೀಕ್ಷಾ ಕೇಂದ್ರಗಳಾಗಿ ಪಟ್ಟಣದಲ್ಲಿರುವ ಸರ್ಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಪ್ರೌಢ ಶಾಲಾ ವಿಭಾಗದಲ್ಲಿ ಮತ್ತು ಮತ್ತೊಂದು ಪಟ್ಟಣದ ಹೊರವಲಯದ ಬಡೇಲಡಕು ರಸ್ತೆಯ ಮೂರು ಕಿಲೋಮೀಟರ್ ದೂರದ ತಾಹ ಎನ್ನುವ ಶಾಲೆಯಲ್ಲಿ ಪರೀಕ್ಷಾ ಕೇಂದ್ರ ತೆರೆದಿದ್ದು ಪಟ್ಟಣದಲ್ಲಿರುವ ಪರೀಕ್ಷಾ ಕೇಂದ್ರ ವಿದ್ಯಾರ್ಥಿಗಳಿಗೆ  ಅನುಕೂಲವಾಗಿದ್ದು ಆದರೆ ತಾಹ ಶಾಲೆಯ ಪರೀಕ್ಷಾ ಕೇಂದ್ರಕ್ಕೆ ಬಂದೋಗಲು ವ್ಯವಸ್ಥೆ ಸರಿ ಇಲ್ಲದೆ ಸಾರಿಗೆ ವ್ಯವಸ್ಥೆ ಇಲ್ಲದೆ ಮಕ್ಕಳ ಹಾಗೂ ಪೋಷಕರ ಪರದಾಟ ಹೇಳತೀರದು ಈಗಾಗಲೇ ಪೂರಕ ಪರೀಕ್ಷೆಗೆ ಸಂಬಂಧಿಸಿದಂತೆ  ಎರಡು ವಿಷಯಗಳ  ಪರೀಕ್ಷೆಗಳನ್ನು ಬರೆಯಲಾಗಿದೆ ಅಲ್ಲದೆ ಬಡ ಮಕ್ಕಳು ಪರೀಕ್ಷಾ ಕೇಂದ್ರಕ್ಕೆ ಬಂದೋಗಲು ಹಣವಿಲ್ಲದೆ ಮೂರು ಕಿಲೋಮೀಟರ್ ನಡೆದುಕೊಂಡೆ ಬಂದು ಪರೀಕ್ಷಾ ಕೇಂದ್ರ ತಲುಪುತ್ತಿದ್ದಾರೆ ಅಲ್ಲದೆ ಬೇಗ ಬರಬೇಕೆಂದರೆ ತಾಲೂಕಿನಿಂದ ಸುಮಾರು ಕಿಲೋಮೀಟರ್ ನಿಂದ ಪಟ್ಟಣಕ್ಕೆ ಬಂದು ಅಲ್ಲಿಂದ ಮೂರು ಕಿಲೋಮೀಟರ್ ದೂರದ  ಬಡೇಲಡಕು ರಸ್ತೆಯಲ್ಲಿರುವ ತಾಹ ಪ್ರಾಥಮಿಕ ಶಾಲೆಯ  ಪರೀಕ್ಷಾ ಕೇಂದ್ರಕ್ಕೆ ಬರಬೇಕೆಂದರೆ ಸಮಯದ ಕೊರತೆ ಹೆಚ್ಚಾಗಿ ವಿದ್ಯಾರ್ಥಿ ಪರೀಕ್ಷೆ ಬರೆಯಲು ಗಾಬರಿಯ  ಆತಂಕ ಮೂಡುತ್ತಿದೆ. ಎರಡು ದಿನ ಈ ಸ್ಥಿತಿ ಕಂಡ ತಾಲೂಕು ಆಡಳಿತವಾಗಲಿ ಶಿಕ್ಷಣ ಇಲಾಖೆಯಾಗಲಿ ಪರೀಕ್ಷೆ ಆರಂಭ ಹಾಗೂ ಮುಗಿದ ನಂತರದಲ್ಲಿ ಸಾರಿಗೆ ಬಸ್ಸಾಗಲಿ, ಶಾಲಾ ಬಸ್ಸಿನ ವ್ಯವಸ್ಥೆ ಕಲ್ಪಿಸಬೇಕಿದೆ.
ಶಾಸಕರಿಗೊಂದು ಕಿವಿ ಮಾತು : ಶಿಕ್ಷಣಕ್ಕೆ ಒತ್ತು ಕೊಡುವ ತಾವುಗಳು ತಾಲೂಕಿನ ದೂರದ ಗ್ರಾಮೀಣ ಭಾಗದಿಂದ ಪಟ್ಟಣಕ್ಕೆ ಪೂರಕ ಪರೀಕ್ಷೆ ಬರೆಯಲು ಬರುತ್ತಿದ್ದು ಒಂದು ಕೇಂದ್ರ ಸರ್ಕಾರಿ ಜೂನಿಯರ್ ಕಾಲೇಜ್ ಆವರಣದಲ್ಲಿ ನಡೆಯುತ್ತಿದ್ದರೆ ಮತ್ತೊಂದು ಅನೇಕ ಶಾಲೆ ಮತ್ತು ಕಾಲೇಜುಗಳು ಪಟ್ಟಣದೊಳಗೆ ಇದ್ದರೂ ತಾಲೂಕು ಶಿಕ್ಷಣ ಇಲಾಖೆ ಮೂರು ಕಿಲೋಮೀಟರ್ ದೂರದ ತಾಹ ಶಾಲೆಗೆ ಪೂರಕ ಪರೀಕ್ಷಾ ಕೇಂದ್ರ ತೆರೆಯುವ ಅವಶ್ಯಕತೆ ಇರುತ್ತಿರಲಿಲ್ಲ ಇಲಾಖೆಯ ಎಡವಟ್ಟಿನ ತೀರ್ಮಾನದಿಂದ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಹಾಗೂ ಪಾಲಕ ಪೋಷಕರಿಗೆ ಸಮಯದ ಅಭಾವದೊಂದಿಗೆ ಬಡ ಕುಟುಂಬದ ಮಕ್ಕಳು ಈ ಕೇಂದ್ರಕ್ಕೆ ಬಂದೋಗಲು ಆಟೋದಲ್ಲಿ ಬರಬೇಕೆಂದರೆ 100ರೂ ಗೂ ಹೆಚ್ಚು ಹಣ ವ್ಯಹಿಸಬೇಕಾಗಿದೆ ಹಣವಿಲ್ಲದೆ ಇರುವವರು ಮೂರು ಕಿಲೋಮೀಟರ್ ನಡೆದುಕೊಂಡೆ ಬಂದು ಪರೀಕ್ಷೆ ಎದುರಿಸಬೇಕಾಗಿದೆ ಇದನ್ನು ಗಮನಿಸಿ ನಾಳೆಯಿಂದ ಪರೀಕ್ಷಾ ಕೇಂದ್ರಕ್ಕೆ ಬಂದೋಗಲು  ವಿದ್ಯಾರ್ಥಿಗಳಿಗೆ ಬಸ್ಸಿನ ವ್ಯವಸ್ಥೆ ಕಲ್ಪಿಸಿದಲ್ಲಿ ಮಕ್ಕಳ ಭವಿಷ್ಯಕ್ಕೆ ತಮ್ಮ ಕಳಕಳಿಯ ಸಹಕಾರ ತುಂಬಾನೇ ಅನುಕೂವಾಗಲಿದೆ ಎನ್ನುತ್ತಾರೆ ಪರೀಕ್ಷೆ ಬರೆಯುವ ಮಕ್ಕಳ ಪಾಲಕ ಪೋಷಕರು.