ಎಂಎಸ್‌ಎಂಇಗೆ ಕನಿಷ್ಠ ವೇತನ ಜಾರಿಗೆ ಕಾಸಿಯಾ ಆಗ್ರಹ
(ಸಂಜೆವಾಣಿ ಪ್ರತಿನಿಧಿಯಿಂದ)
ಬೆಂಗಳೂರು,ಆ.೪:ದೇಶದ ಎಂಎಸ್‌ಎಂಇಗಳಿಗೆ ಸಾಮಾನ್ಯ ಕನಿಷ್ಠ ವೇತನ ನೀತಿ ಜಾರಿಗೊಳಿಸಬೇಕೆಂದು ಕಾಸಿಯಾ ಅಧ್ಯಕ್ಷ ಎಂ.ಜಿ. ರಾಜಗೋಪಾಲ್ ಒತ್ತಾಯಿಸಿದ್ದಾರೆ.
ಕೇಂದ್ರ ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಸಚಿವೆ ಶೋಭಾಕರಂದ್ಲಾಜೆ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು. ಎಂಎಸ್‌ಎಂಇಗಳನ್ನು ಆದ್ಯತೆಯ ಸಾಲಕ್ಕಾಗಿ ಪರಿಗಣಿಸಲಾಗಿದ್ದರೂ ಸಹ ಬ್ಯಾಂಕ್‌ಗಳು ವಿದಿಸುತ್ತಿರುವ ಬಡ್ಡಿ ದರ ಮಧ್ಯಮ ಮತ್ತು ಬೃಹತ್ ಕೈಗಾರಿಕೆಗಳು ನೀಡುವ ಸಾಲದ ಬಡ್ಡಿ ದರಕ್ಕಿಂತ ಅಧಿಕವಾಗಿದ್ದು, ಎಂಎಸ್‌ಎಂಇಗಳು ಪಡೆಯುವ ಸಾಲದ ಬಡ್ಡಿ ದರವನ್ನು ಕಡಿಮೆ ಮಾಡುವಂತೆ ಮನವಿ ಮಾಡಿದರು.
ಪ್ರಸ್ತುತ ಎನ್‌ಪಿಎ ಮಾನದಂಡವು ೯೦ ದಿನಗಳಿಗೆ ಇರುವ ಅವದಿಯನ್ನು ೧೮೦ ದಿನಗಳಿಗೆ ಏರಿಸುವ ಮೂಲಕ ಎಂಎಸ್‌ಎಂಇಗಳನ್ನು ಮತ್ತಷ್ಟು ಬಲಪಡಿಸಬೇಕೆಂದು ಹೇಳಿದರು.