ಗಂಗಾ ನಗರದಲ್ಲಿ  ಮನೆಗಳು ಜಲಾವೃತ;  ಸ್ಥಳಕ್ಕೆ ತಹಶೀಲ್ದಾರ್ ಭೇಟಿ- ಪರಿಶೀಲನೆ
ಸಂಜೆವಾಣಿ ವಾರ್ತೆ
ಹರಿಹರ ಆ 4; ಮೈದುಂಬಿ ಹರಿಯುತ್ತಿರುವ ತುಂಗಭದ್ರಾ ನದಿಯ ನೀರು ಗಂಗಾ ನಗರದಲ್ಲಿ ಏಳು ಮನೆಗಳು ಜಲಾವೃತಗೊಂಡಿದೆ ಸ್ಥಳಕ್ಕೆ ಸ್ಥಳಕ್ಕೆ ತಹಶೀಲ್ದಾರ್ ಕಂದಾಯ ಇಲಾಖೆಯ ತಂಡ ಭೇಟಿ ನೀಡಿ ಜಲಾವೃತಗೊಂಡ ಮನೆಗಳ ನಿವಾಸಿಗಳನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರ ಗೊಳಿಸುವುದಕ್ಕೆ ಮುಂದಾದರು ಈ ಸಂದರ್ಭದಲ್ಲಿ ತಹಶೀಲ್ದಾರ್ ಗುರು ಬಸವರಾಜ ಮಾತನಾಡಿ ಭದ್ರ ಡ್ಯಾಮ್ ಯಿಂದ ಹೆಚ್ಚುವರಿ ನೀರನ್ನು ಹೊರ ಬಿಟ್ಟಿರುವ ಕಾರಣ ತುಂಗಾಭದ್ರ ನದಿ ಮೈದುಂಬಿ ಹರಿಯುತ್ತಿದ್ದು ನದಿಯ ಪಾತ್ರದಲ್ಲಿರುವಂತ ಗಂಗಾ ನಗರದಲ್ಲಿ 7 ಮನಗಳಿಗೆ ನೀರು ನುಗ್ಗಿದ್ದು ಅವರನ್ನು ಕೂಡಲೇ ಎಪಿಎಂಸಿ ಆವರಣದ ಗೋದಾಮಿನಲ್ಲಿ ಕಾಳಜಿ ಕೇಂದ್ರ ತೆರೆದು   ಬೆಳಗಿನ ತಿಂಡಿ ಮಧ್ಯಾಹ್ನ ಮತ್ತು ರಾತ್ರದ ಊಟದ ವ್ಯವಸ್ಥೆಯನ್ನು ಕೂಡ ಮಾಡಲಾಗಿದೆ ಇಲ್ಲಿನ ನಿವಾಸಿಗಳಿಗೆ ಕಾಳಜಿ ಕೇಂದ್ರಕ್ಕೆ ತೆರಳವಂತೆ ಹೇಳಿದ್ದೇವೆ ಎಂದರು.ಹಲಸಬಾಳು ಗ್ರಾಮದ ಮೀನುಗಾರ ಮನೆಗಳಿಗೆ ನೀರು ನುಗ್ಗಿದ್ದು ಹರಳಳ್ಳಿ ಗ್ರಾಮದಲ್ಲಿ ದನದ ಕೊಟ್ಟಿಗೆ ಮತ್ತು ಒಂದು ಮನೆ ಭಾಗಶಃ ಕೊಕ್ಕನೂರು ಗ್ರಾಮದ ಕಚ್ಚಾ ಮನೆ ಬಿದ್ದಿದ್ದು  ನದಿಯಲ್ಲಿ ನೀರಿನ ಹರಿವು ಏರಿಕೆ ಆಗಿರುವುದರಿಂದ  ಗ್ರಾಮಾಂತರ ಪ್ರದೇಶದಲ್ಲಿ ನದಿ ಪಾತ್ರದಲ್ಲಿರುವಂತ ಗ್ರಾಮಗಳಿಗೆ ತೆರಳಿ  ನದಿ ಪಾತ್ರದ ತೆಗ್ಗು ಪ್ರದೇಶದಲ್ಲಿ ಇರುವಂತಹ ನಿವಾಸಿಗಳು ಎತ್ತರ ಪ್ರದೇಶಕ್ಕೆ ತೆರಳಬೇಕು ಜನಜಾನುವಾರುಗಳನ್ನು ನದಿಯ ಹತ್ತಿರ ಬಿಡದಂತೆ ನೋಡಿಕೊಳ್ಳಬೇಕು ಎಂದು ತಿಳಿ ಹೇಳಲಾಗಿದೆ  ನದಿಯ ದಡದಲ್ಲಿ ಪೊಲೀಸ್ ಮತ್ತು ಕಂದಾಯ ನಗರಸಭೆ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ ಸಾರ್ವಜನಿಕರು ಎಚ್ಚರಿಕೆ ಜಾಗೃತಿಯಿಂದ ಇರಬೇಕೆಂದು ಹೇಳಿದರು ನಿನ್ನೆ ನೀರಿನ ಹರಿವು ಪ್ರಮಾಣ ಇಂದು ಪ್ರಮಾಣ ಕಡಿಮೆಯಾಗಿದೆ ಎಂದು ತಿಳಿದು ಬಂದಿದೆ. ನಗರ ಗ್ರಾಮ ಆಡಳಿತ ಅಧಿಕಾರಿಯ ಎಚ್‌ಜಿ  ಹೇಮಂತ್ ಕುಮಾರ್. ರಾಜಸ್ವನೀರಿಕ್ಷಕ ಸಮೀರ್ ಅಹ್ಮದ್. ಎಎಸ್ಐ ವಿಜಯ್ ನಗರಸಭೆ ಕಂದಾಯ ಪೊಲೀಸ್ ಇಲಾಖೆ ಸಿಬ್ಬಂದಿ ವರ್ಗದವರು ಇದ್ದರು.