ಗ್ರಾಮಾಭಿವೃದ್ಧಿ ಯೋಜನೆ ವಾರ್ಷಿಕೋತ್ಸವ
ಸಂಜೆವಾಣಿ ವಾರ್ತೆ
ಹಿರಿಯೂರು: ಆ.4-ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಪಟ್ರೆಹಳ್ಳಿ ಹಾಗೂ ಮೇರಿ ರಸ್ತೆಯ ಕಾರ್ಯಕ್ಷೇತ್ರಗಳಲ್ಲಿತಂಡಗಳ ವಾರ್ಷಿಕೋತ್ಸವ ನಡೆಸಿದರು. ಈ ಸಂದರ್ಭದಲ್ಲಿ ತಂಡದ ಸದಸ್ಯರಿಗೆ ಶಿಸ್ತುಬದ್ಧವಾಗಿ ವ್ಯವಹಾರ ಮಾಡುವ ಬಗ್ಗೆ , ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೌಲಭ್ಯ ಮತ್ತಿತರ ವಿಚಾರಗಳ ಬಗ್ಗೆ ತಿಳಿಸಲಾಯಿತು. ಮೇಲ್ವಿಚಾರಕರಾದ ಚಂದ್ರಶೇಖರ್, ಆಂತರಿಕ ಲೆಕ್ಕಪರಿಶೋಧಕರಾದ ಸುರೇಖಾ, ಸೇವಾ ಪ್ರತಿನಿಧಿ ರಂಗಮ್ಮ ಹಾಗೂ ಪಾರ್ವತಿ ಹಾಗೂ ತಂಡದ ಸದಸ್ಯರು ಪಾಲ್ಗೊಂಡಿದ್ದರು