ಅಪರಾಧ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿ :  ಎ.ಎಸ್.ಐ ಎನ್. ರೇಖಾ  ಸಲಹೆ
ಸಂಜೆವಾಣಿ ವಾರ್ತೆ
ಹಿರಿಯೂರು: ಆಗಸ್ಟ್ 4 – ಇಂದು ಸೈಬರ್ ಕ್ರೈಂ, ಫೋಕ್ಸೋ, ಅಲ್ಲದೆ  ಬಾಲ್ಯ ವಿವಾಹಗಳು  ಕಂಡು ಬರುತ್ತಿವೆ,   ಯುವ ಜನತೆ  ಸಾಕಷ್ಟು ಮೊಬೈಲ್ ಬಳಕೆ ಮಾಡುತ್ತಿದ್ದು ಮೊಬೈಲ್ ಬಳಕೆಯಿಂದ ಅನುಕೂಲಗಳಿಗಿಂತ ದುಷ್ಪರಿಣಾಮಗಳು ಹೆಚ್ಚಾಗಿ ಕಂಡು ಬರುತ್ತಿವೆ,  ಆದುದರಿಂದ ಯುವ ಜನತೆಯಲ್ಲಿ ಹಾಗೂ ಪೋಷಕರಲ್ಲಿ ಜಾಗೃತಿ ಮೂಡಿಸಲು ಸಂಘ ಸಂಸ್ಥೆಗಳು ಅಪರಾಧ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಬೇಕು ಎಂದು ಎ ಎಸ್ ಐ ಎನ್.ರೇಖಾ ಸಲಹೆ ನೀಡಿದರು. ಜೀವದಾತೆ ಫೌಂಡೇಶನ್ ವತಿಯಿಂದ ಏರ್ಪಡಿಸಿದ್ದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಜೀವದಾತೆ ಫೌಂಡೇಶನ್ ಸಂಸ್ಥಾಪಕರಾದ ಅಭಿನಂದನ್ ಮಾತನಾಡಿ  ಪೊಲೀಸ್ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ  ಶ್ರೀಮತಿ ಎನ್.ರೇಖಾ ರವರು  ಎ ಎಸ್ ಐ ಆಗಿ  ಬಡ್ತಿ ಹೊಂದಿರುವುದು ಹಾಗೂ ಇಲಾಖೆಯಲ್ಲಿ ಉತ್ತಮ ಕಾರ್ಯ ನಿರ್ವಹಿಸಿ ಇಲಾಖೆಯ ಪ್ರಶಂಸೆಗೆ   ಪಾತ್ರರಾಗಿರುವುದು ಹೆಮ್ಮೆಯ ವಿಷಯ ಎಂದರು ಹಾಗೂ ತಮ್ಮ ಸಂಸ್ಥೆ ವತಿಯಿಂದ ಸಾಕಷ್ಟು ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದು  ನಿಮ್ಮ ಸೂಕ್ತ ಸಲಹೆ ಮತ್ತು ಸೂಚನೆಗಳನ್ನು ಸದಾ ಸ್ವಾಗತಿಸುವುದಾಗಿ ತಿಳಿಸಿದರು. ಕಾರ್ಯಕ್ರಮದಲ್ಲಿ ಎ.ಎಂ.ಎಸ್ ಕಂಪ್ಯೂಟರ್ ಸಂಸ್ಥೆಯ ಸಂಸ್ಥಾಪಕರಾದ ಮುರಳಿಧರ್, ಜೀವದಾತೆ ಸಂಸ್ಥೆಯ ಸದಸ್ಯರಾದ ಹನುಮಂತು, ಯೋಗೇಶ್, ರಾಕೇಶ್, ಸೋಮಶೇಖರ್, ಗುರುಮೂರ್ತಿ, ಭರತ್ ಗೌಡ, ಹಾಗೂ ರವೀಂದ್ರನಾಥ್, ಕಿರಣ್  ಮಿರಜ್ಕರ್, ಎಂ.ಪ್ರಕಾಶ್, ಅಮೃತ ಲಕ್ಷ್ಮಿ ಮತ್ತಿತರರು ಉಪಸ್ಥಿತರಿದ್ದರು.