ಶ್ರೀ ಶಿವಾನಂದ ತೀರ್ಥ ಗುರು ಜಯಂತ್ಯೋತ್ಸವ
ಸಂಜೆವಾಣಿ ವಾರ್ತೆ
ದಾವಣಗೆರೆ.ಆ.4;. ನಗರದ ಜಯದೇವ ವೃತ್ತದಲ್ಲಿರುವ ಅಧ್ಯಾತ್ಮ ಮಂದಿರದಲ್ಲಿ ಶ್ರೀ ಶಿವಾನಂದ ತೀರ್ಥ ಗುರುಗಳವರ ಜಯಂತ್ಯೋತ್ಸವ ನಿಮಿತ್ತ ತೊಟ್ಟಿಲೋತ್ಸವವನ್ನು ನೆರವೇರಿಸಲಾಯಿತು. ರಾಜನಹಳ್ಳಿ ಹರಿಹರಪ್ಪ ಟ್ರಸ್ಟಿನ ಶ್ರೀಧರ ಶ್ರೇಷ್ಠಿ,ಗೀತಾ ಶ್ರೀಧರ್, ಶಿವರತ್ನಾ, ವೇದಮೂರ್ತಿ ಶಿವರಾಮ ಶಾಸ್ತ್ರೀ ಮುಂತಾದವರು ಅಲ್ಲಿದ್ದರು. ರಾಜನಹಳ್ಳಿ ರಾಮಶ್ರೇಷ್ಟಿ ಸುಪುತ್ರಿ ಸಿ ವಿ ಸುನಂದಮ್ಮ, ಬ್ಯಾಡಗಿ ಗಂಗಪ್ಪ ಶ್ರೇಷ್ಠಿ, ಜಯಲಕ್ಷ್ಮಮ್ಮ ವಿರೂಪಾಕ್ಷ ಶ್ರೇಷ್ಟಿ,  ರಾಜನಹಳ್ಳಿ ಕಾಂತಲಕ್ಷ್ಮಮ್ಮ ಗೋಪಾಲಕೃಷ್ಣ ಶ್ರೇಷ್ಟಿ ಮತ್ತು ಮಕ್ಕಳ ಹೆಸರಿನಲ್ಲಿ ಸೇವಾ ವಿಧಿಗಳು ನೆರವೇರಿದವು.  ಹಿರಿಯ ಪತ್ರಕರ್ತ ಡಾ.ಎಚ್ ಬಿ ಮಂಜುನಾಥ ವಿಶೇಷ ಆಹ್ವಾನಿತರಾಗಿದ್ದ ರು.