ಪ್ರತಿಭೆ ಅನಾವರಣಕ್ಕೆ ಪ್ರತಿಭಾ ಕಾರಂಜಿ ಸೂಕ್ತ ವೇದಿಕೆ:ತಹಶೀಲ್ದಾರ್ ಸಯ್ಯದ್ ಕಲೀಂ‌ ಉಲ್ಲಾ
ಸಂಜೆವಾಣಿ ವಾರ್ತೆ
ಜಗಳೂರು.ಆ.೩; ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆ ಅನಾವರಣಕ್ಕೆ ಪ್ರತಿಭಾ ಕಾರಂಜಿ ಸೂಕ್ತ ವೇದಿಕೆ ಎಂದು ತಹಶೀಲ್ದಾರ್ ಸಯ್ಯದ್ ಕಲೀಂ‌ ಉಲ್ಲಾ ಅಭಿಪ್ರಾಯ ವ್ಯಕ್ತಪಡಿಸಿದರು.ಪಟ್ಟಣದ ಇಮಾಂ ಸ್ಮಾರಕ ಶಾಲಾ ಆವರಣದಲ್ಲಿ ಪ್ರಾಥಮಿಕ ಶಾಲೆಯ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಉದ್ಘಾಟಿಸಿ  ಮಾತನಾಡಿದರು.ಆಸಕ್ತಿದಾಯಕ‌ ಕ್ಷೇತ್ರದಲ್ಲಿ ಮಕ್ಕಳನ್ನು ಪೋಷಕರು ಮತ್ತು ಶಿಕ್ಷಕರು ಪ್ರೋತ್ಸಾಹಿಸಬೇಕು.ಅಲ್ಲದೆ ಬಾಲ್ಯದಲ್ಲಿ ಅವರ ಪ್ರತಿಭೆಗಳನ್ನು ಅನಾವರಣಕ್ಕೆ ಪಠ್ಯೇತರ ಚಟುವಟಿಕೆಗಳು ಅಗತ್ಯ.ಮಕ್ಕಳು ಬೌದ್ದಿಕ ಹಾಗೂ ಭೌತಿಕ ವಿಕಸನ ಸ್ಪರ್ಧಾತ್ಮಕ ಜಗತ್ತಿಗೆ ಪೂರಕವಾಗಬೇಕು’ ಎಂದು ತಿಳಿಸಿದರು.ಬಿಇಓ ಹಾಲಮೂರ್ತಿ ಮಾತನಾಡಿ,ಬಾಲ್ಯಾವಸ್ಥೆಯಲ್ಲಿ ಮಕ್ಕಳು ಟಿವಿ‌,ಮೊಬೈಲ್ ಗೀಳಿನಿಂದ ಹೊರಬಂದು ಜಾನಪದ,ದೇಶೀಯ ಕಲೆಗಳನ್ನು,ಸಾಹಿತ್ಯ ಬರವಣಿಗೆ ಆಸಕ್ತಿಯನ್ನು ಮೈಗೂಡಿಸಿ ಕೊಳ್ಳಬೇಕು.ಪ್ರಾಥಮಿಕ ಹಂತದಲ್ಲಿನ ಗುಣಾತ್ಮಕ ಶಿಕ್ಷಣ ಭವಿಷ್ಯದ‌ ಉನ್ನತ ಶಿಕ್ಷಣಕ್ಕೆ ಭದ್ರ ಬುನಾದಿ ಯಾಗಲಿದೆ.ಪ್ರತಿಭಾಕಾರಂಜಿ ಕಾರ್ಯಕ್ರಮದಲ್ಲಿ ನಿರ್ಣಾಯಕರಾದ ಶಿಕ್ಷಕರು ನೈಜ ಪ್ರತಿಭೆಗಳನ್ನು ಗುರುತಿಸಿಮೂಲಕ ತಾಲೂಕು,ಜಿಲ್ಲಾ,ರಾಜ್ಯಮಟ್ಟಕ್ಕೆ ಆಯ್ಕೆಗೊಳ್ಳಲು ಪ್ರೇರೇಪಿಸಬೇಕು ಎಂದು ಸಲಹೆ ನೀಡಿದರು.ಇಮಾಂ ಸ್ಮಾರಕ ಶಾಲೆಯ ಹಿರಿಯ ಶಿಕ್ಷಕ ಹಾಲಪ್ಪ ಮಾತನಾಡಿ,ಇಂದಿನ ಮಕ್ಕಳೇ ಭವಿಷ್ಯದ ದೇಶದ ನಿರ್ಮಾತೃಗಳು.ಮಕ್ಕಳ ಸುಂದರ ಕನಸ್ಸುಗಳನ್ನು ಪ್ರತಿಭಾ ಕಾರಂಜಿ ವೇದಿಕೆ ಮೂಲಕ ಅರಳಿಸಬೇಕು.ಶಿಕ್ಷಕ ವೃತ್ತಿ ಸಮಾಜದಲ್ಲಿ ಪವಿತ್ರವಾದದ್ದು ಎಂದರು. ಪ್ರತಿಭಾ ಕಾರಂಜಿಯಲ್ಲಿ 22‌ ಪ್ರಾಥಮಿಕ ಶಾಲೆಗಳ ಮಕ್ಕಳು ಭಾಗವಹಿಸಿದ್ದು.ಛದ್ಮವೇಶ,ಏಕಪಾತ್ರ ಅಭಿನಯ,ಕ್ಲೇಮಾಡ್ಲಿಂಗ್,ಕವಾಲಿ,ಗಜಲ್,ಭಾಷಣ,ಕಂಠಪಾಠ,ರಸಪ್ರಶ್ನೆ ಸ್ಪರ್ಧೆಗಳು ಸೇರಿದಂತೆ ಚಟುವಟಿಕೆಗಳು ನಡೆದವು.ವಿವಿಧ ವಿಶೇಷ ಉಡುಪುಗಳಲ್ಲಿ ಮಕ್ಕಳು ಮಿಂಚುತ್ತಿದ್ದರು.ಈ ಸಂದರ್ಭದಲ್ಲಿ ಇಮಾಂ ಶಾಲೆಯ ಆಡಳಿಯ ಮಂಡಳಿಯ ಮುನ್ನಾ,ಬಿಆರ್ ಸಿ ಡಿಡಿ ಹಾಲಪ್ಪ,ಬಿಆರ್ ಪಿ ಸತೀಶ್,ಸಿಆರ್ ಪಿಗಳಾದ ನಾಗರಾಜ್,ಆಂಜನೇಯ,ತಾಲೂಕು ದೈಹಿಕ‌ ನಿರ್ದೇಶಕ ಸುರೇಶ್ ರೆಡ್ಡಿ,ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕ ಜೆ.ಆರ್.ಶಂಕರ್, ಮೇಲ್ವಿಚಾರಕರು ಬಿಡಿ ನಾಗರಾಜ್, ಸೇರಿದಂತೆ ಇದ್ದರು.