ಕಳ್ಳರ ಬಂಧನ :15 ಮೋಟಾರ್ ಪಂಪಸೆಟ್, 1 ಬೈಕ್ ವಶ
ಆಲಮೇಲ,ಆ.4-ತಾಲ್ಲೂಕಿನ ಬಳಗಾನೂರ ಗ್ರಾಮದ ರೈತರ ಮೋಟಾರ್ ಪಂಪಸೆಟ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಆಲ್‍ಮೇಲ್ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಳಗಾನೂರ ಗ್ರಾಮದ ಸುಂದರ ಭಗವಂತ ಕ್ಷತ್ರಿ (24), ಕೃಷ್ಣಾ ಶ್ರಿಶೈಲ್ ಟಕ್ಕಳಕಿ (20), ಸಿದ್ದಪ್ಪ ಸುಭಾಷ ಟಕ್ಕಳಕಿ (35), ಸಂತೋಷ ಅಭಿಮನ್ಯು ಕ್ಷತ್ರಿ (27) ಎಂಬುವವರನ್ನು ಬಂಧಿಸಿ 15 ಮೋಟಾರ್ ಪಂಪಸೆಟ್, 1 ಬೈಕ್ ವಶಪಡಿಸಿಕೊಂಡು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.
ಆಲಮೇಲ ತಾಲೂಕಿನ ಬಳಗಾನೂರ ಗ್ರಾಮದ ರೈತರಾದ ಜಗದೀಶ ಕುಂಬಾರ, ಮಹೇಶ ಪಾಟೀಲ,,ಮೈಬೂಬಸಾಬ ಕನ್ನೊಳ್ಳಿ, ಸಿದ್ದಣ್ಣ ಯರಗಲ ಎಂಬ ರೈತರು ತಮ್ಮ ಜಮೀನಿನ ಬೆಳೆಗಳಿಗೆ ನೀರು ಹರಿಸಲು ಪಕ್ಕದ ಕಾಲೂವೆಯಲ್ಲಿ ಬಿಟ್ಟ 5 ಎಚ್.ಪಿ.ಯ ಕರೆಂಟ್ ಮೋಟಾರ್ ಪಂಪಸೆಟ್‍ಗಳು ಕಳವಾಗಿವೆ ಎಂದು ಜೂನ್ 30 ರಂದು ಆಲಮೇಲ ಠಾಣೆಯಲ್ಲಿ ದೂರು ಸಲ್ಲಿಸಿದ್ದರು.
ಈ ದೂರಿನ ಅನ್ವಯ ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಪಿಎಸ್‍ಐಗಳಾದ ಅರವಿಂದ ಅಂಗಡಿ ಹಾಗೂ ಎನ್.ಜಿ.ಅಪನಾಯ್ಕರ, ಎಚ್.ಟಿ.ಗೊಡೆಕರ,ಎಸ್.ಎಸ್.ಬಾಪಗೊಂಡ, ಎಸ್.ಎನ್.ಸವದಿ,ಸಿದ್ರಾಮಪಾಟೀಲ, ಎಸ್.ಜಿ.ಚಾವರ, ಎಸ್.ಎಸ್.ಜಾಲಗೇರಿ, ರಾಜು ರಾಠೋಡ್ ಅವರ ಒಂದು ವಿಶೇಷ ತಂಡ ರಚಿಸಿ ಆರೋಪಿಗಳನ್ನು ಬಂಧಿಸಿ 15 ಮೋಟಾರ್ ಪಂಪಸೆಟ್‍ಗಳು ಹಾಗೂ ಕೃತ್ಯಕ್ಕೆ ಬಳಸಿರುವ
ಒಂದು ಮೋಟಾರ್ ಸೈಕಲ್ ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಈ ಕಾರ್ಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಸೊನಾವನೆ, ಹೆಚ್ಚುವರಿ ವರಿಷ್ಠಾಧಿಕಾರಿ ಶಂಕರ ಮಾರಿಹಾಳ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ರಾಮಗೌಡ ಹಟ್ಟಿ,ಇಂಡಿ ಡಿವೈಎಸ್ಪಿ ಜಗದೀಶ ಎಚ್.ಎಸ್.ಶ್ಲಾಘಿಸಿದ್ದಾರೆ.
ಈ ಸಂದರ್ಭದಲ್ಲಿ ಪಿಎಸ್‍ಐ ಅರವಿಂದ ಅಂಗಡಿ, ಅಪರಾಧ ವಿಭಾಗದ ಪಿಎಸ್‍ಐ ಎನ್.ಜಿ.ಅಪನಾಯ್ಕರ, ಎಎಸ್‍ಐ ತಾಜೋದ್ದೀನ್ ಶೇಖ, ಸಿಬ್ಬಂದಿಗಳಾದ ಆರ್.ಎನ್.ಪಾಟೀಲ ರಾಜು ರಾಠೋಡ್, ಎಚ್.ಟಿ.ಗೊಡೆಕರ,ಎಸ್.ಎಸ್.ಬಾಪಗೊಂಡ, ಎಸ್.ಎನ್.ಸವದಿ, ಸಿದ್ರಾಮ ಪಾಟೀಲ,ಎಸ್.ಜಿ.ಚಾವರ,ಎಸ್.ಎಸ್.ಜಾಲಗೇರಿ, ಎಸ್.ಬಿ.ನಾದ, ಬಿ.ವಾಯ್.ಬಿಜ್ಜೂರ, ಎಸ್.ಪಿ.ಮಡಕೇಶ್ವರ ಇದ್ದರು.