ಗೌರವಾರ್ಪಣೆ ಕಾರ್ಯಕ್ರಮ
ನವಲಗುಂದ,ಆ.೪: ರಾಜ್ಯದ ಸಮಸ್ತ ಸರಕಾರಿ ನೌಕರರಿಗೆ ರಾಜ್ಯ ಸರಕಾರ ಇತ್ತೀಚಿಗೆ ಜಾರಿಗೊಳಿಸಿದ ೭ನೇ ವೇತನ ಆಯೋಗದ ಅನುಷ್ಠಾನದ ಪ್ರಯುಕ್ತ ಇಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ.೪ ರ ಸಭಾ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜನ್ಮದಿನಾಚರಣೆಯ ಅಂಗವಾಗಿ ಕೇಕ್ ಕತ್ತರಿಸಿ ೭ನೇ ವೇತನ ಜಾರಿಗೊಳಿಸಿದ ಅವರಿಗೆ ಹಾಗೂ ಶಾಸಕ ಎನ್.ಎಚ್. ಕೋನರಡ್ಡಿ ಯವರಿಗೆ ತಾಲೂಕಿನ ಸಮಸ್ತ ನೌಕರರ ಪರವಾಗಿ ಗೌರವಾರ್ಪಣೆ ಮಾಡಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸಕರಾದ ಎನ್.ಎಚ್.ಕೋನರಡ್ಡಿಯವರು ಇದರ ಜೊತೆಗೆ ನೂತನ ಪಿಂಚಣಿ ಯೋಜನೆ ರದ್ಧತಿ ಹಾಗೂ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯನ್ನೂ ಸಹ ಖಂಡಿತವಾಗಿ ನಮ್ಮ ಸರಕಾರ ಜಾರಿಗೊಳಿಸುವದು ಎಂದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅಭಿನಂದನಾ ನುಡಿಗಳನ್ನು ತಾಲೂಕಾ ನೌಕರರ ಸಂಘದ ಅಧ್ಯಕ್ಷರಾದ ಎ.ಬಿ.ಕೊಪ್ಪದ ರವರು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಸ್. ಬಿ. ಮಲ್ಲಾಡ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸುಧೀರ. ಸಾಹುಕಾರ, ವಾಯ್.ಜಿ. ಗದ್ದಿಗೌಡ್ರ, ಡಾ. ಎನ್.ಬಿ. ಕರ್ಲವಾಡ,ಜಿ.ವ್ಹಿ. ಹೊಳೆಯಣ್ಣವರ, ಎನ್.ವ್ಹಿ.ಬೀಡಿ, ಗೀತಾ ತ್ಯಾಗಿಹಾಳ, ವಾಯ್.ಎಚ್.ಬಣವಿ, ಎಸ್.ಎಫ್.ನೀರಲಗಿ, ವ್ಹಿ.ಎಮ್.ಹಿರೇಮಠ, ಎಸ್.ಕೆ.ಕುರಹಟ್ಟಿ, ಸುಮಿತ್ರಾ ಕೋನರಡ್ಡಿ, ಎ.ಎಮ್.ಮುಲ್ಲಾ, ಪಿ.ಕೆ. ಹಿರೇಗೌಡ್ರ, ವಾಯ್.ಎಸ್.ಬೆಣ್ಣಿ, ಎನ್.ವೈ. ಕಳಸಾಪೂರ, ವ್ಹಿ.ಆರ್.ಹಾದಿಮನಿ, ಎಮ್.ಎನ್.ವಗ್ಗರ, ಎಸ್.ಎಚ್.ಹರಕುಣಿ, ಡಿ.ಜಿ.ಹುಲ್ಲೂರ, ಸಹದೇವ ಪೂಜಾರ, ನಾಗರಾಜ ಕರಿಸಕ್ರಣ್ಣವರ, ಎಸ್.ಬಿ. ಬೋರಕ್ಕನವರ, ಸುನಿಲ ಬಳ್ಳಾರಿ, ಶಿವಾನಂದ ಹಾದಿಮನಿ, ಸುಜಾತಾ ದೊಡಮನಿ, ಎನ್.ಎಸ್. ತಾಳಿಕೋಟಿಮಠ, ಎಸ್.ಎಮ್. ಬೆಂಚಿಕೇರಿ, ಬಿ.ಕೆ.ಹಾಲವರ, ಎಸ್.ಸಿ. ಹೊಳೆಯಣ್ಣವರ, ವಸಂತ ಚಾಕಲಬ್ಬಿ, ಪಿ.ಸಿ.ಸೂರಪ್ಪನವರ ಎಸ್.ಡಿ.ಬೆಟ್ಟಣ್ಣವರ, ಎ.ಆರ್.ಮೆಣಸಿನಕಾಯಿ, ಎಸ್.ಎಫ್. ಈರಡ್ಡಿ, ಎಮ್.ಎಚ್.ಚಿಕನಾಳ, ಬಿ.ಎಮ್.ಯಲಿಗಾರ, ಸಾವಿತ್ರಿ ಅಳಗವಾಡಿ, ಎಲ್.ಬಿ.ಕಮತ ಮುಂತಾದವರು ಉಪಸ್ಥಿತರಿದ್ದರು.