ಅಣ್ಣಾಭಾವು ಸಾಠೆರವರ 104ನೇ ಜಯಂತಿ ಉತ್ಸವ
ಬೀದರ್,ಆ.4-ನಗರದ ಹೊರವಲಯದಲ್ಲಿರುವ ಮೃತ್ಯುಂಜಯ ನಗರದ ಬಡಾವಣೆಯಲ್ಲಿ ಮಾದಾರ ಚೆನ್ನಯ್ಯ ಕೋ-ಅಪರೆಟಿವ್ ಬ್ಯಾಂಕ ಕಚೇರಿ ಸಭಾಂಗಣದಲ್ಲಿ ಸಾಹಿತ್ಯ ರತ್ನ ಅಣ್ಣಾಭವು ಸಾಠೆರವರವ
104ನೆ ಜಯಂತಿ ಉತ್ಸವವನ್ನು ಅವರ ಭಾವಚಿತ್ರಕ್ಕೆ ಹೂಮಾಲೆ ಹಾಕಿ ಪೂಜೆ ಸಲ್ಲಿಸುವ ಮೂಲಕ ವಿಜೃಂಭಭಣೆಯಿಂದ ಆಚರಿಸಲಾಯಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಾದಿಗ ನೌಕರ ಸಂಘದ ಜಿಲ್ಲಾಧ್ಯಕ್ಷ ಸುಮಂತ ಕಟ್ಟಿಮನಿರವರು ಅಣ್ಣಾಭಾವು ಸಾಠೆರವÀರ ಕುರಿತು ಮಾತನಾಡಿ, ಕೇವಲ ಒಂದುವರೆ ದಿವಸ ಶಾಲೆಗೆ ಹೋಗಿ 30 ಸಾವಿರಕ್ಕೂ ಅಧಿಕ ಪುಸ್ತಕಗಳನ್ನು ಬರೆದು ಜೊತೆಗೆ ದೀನ-ದಲಿತರ ಸಲುವಾಗಿ ಜಾತಿ ನಿರ್ಮೂಲನೆ ಹಾಗೂ ಕಾರ್ಮಿಕರಿಗಾಗಿ ಸಾಕಷ್ಟು ಹೋರಾಟಗಳನ್ನು ಮಾಡಿದ್ದಾರೆ. ವಿಶೇಷವಾಗಿ ಹಾಡಿನ ಮುಖಾಂತರ ಜನರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಘೋಡಂಪಳ್ಳಿಯ ಪ್ರಾಂಶುಪಾಲ ಡಾ.ದೇೀವಿದಾಸ ತುಮಕುಂಟೆ ಹಾಗೂ ಭಾಲ್ಕಿ ತಾಲ್ಲೂಕಿನ ಖಾಶೆಂಪೂರ ಸರ್ಕಾರಿ ಹಿರಿಯ ಪ್ರಾ. ಶಾಲೆ ಸಹ ಶಿಕ್ಷಕ ಮಾರುತಿರಾವ ವಾಘಮಾರೆ ಅವರು ವಯೋ ನಿವೃತಿ ಹೊಂದಿದ ಪ್ರಯುಕ್ತ ಅವರಿಗೆ ಶಾಲು ಹೊದಿಸಿ ಹೂಮಾಲೆ ಹಾಕಿ ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಣ್ಣಾಭಾವು ಸಾಠೆ ಟ್ರಸ್ಟ್‍ನ ಅಧ್ಯಕ್ಷÀ ಎಂ.ಎಸ್.ಮನೋಹರ ಅವರು ವಹಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಧೊಂಡಿರಾಮ ಕರಕರೆ, ಸುಭಾಷ ರತ್ನ, ಸಮೃತರಾವ ಸೂರ್ಯವಂಶಿ, ಮನೋಹರ ಮಿರ್ಜಾಪುರಕರ, ವಾಮನರಾವ ಕಾಮತಿಕರ, ಧೂಳಪ್ಪ, ಸುಭಾಷ ಮದಾಳೆ ಮತ್ತಿರರು ಉಪಸ್ಥಿತರಿದ್ದರು. ಮೊದಲಿಗೆ ಧೋಂಡಿರಾಂ ಕರಕರೆ ಮಾಡಿದರೆ, ಪ್ರವೀಣಚಂದ್ರ ನಿರೂಪಿಸಿದರು. ಸುಭಷರತ್ನ ವಂದಿಸಿದರು.